Advertisement

GOAT Movie: ದಳಪತಿ ವಿಜಯ್‌ ʼಗೋಟ್‌ʼ ಟ್ರೇಲರ್ ರಿಲೀಸ್‌ಗೆ ಡೇಟ್‌ ಫಿಕ್ಸ್

06:47 PM Aug 15, 2024 | Team Udayavani |

ಚೆನ್ನೈ: ಕಾಲಿವುಡ್‌ ಸ್ಟಾರ್ ದಳಪತಿ ವಿಜಯ್‌ (Thalapathy Vijay) ಅವರ ಬಹುನಿರೀಕ್ಷಿತ ಸಿನಿಮಾ ʼದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ (The Greatest of All Time)‌ ಬಗ್ಗೆ ಕುತೂಹಲ ಹೆಚ್ಚಾಗಿದೆ.

Advertisement

ರಾಜಕೀಯ ಕ್ಷೇತ್ರದಲ್ಲಿ ವಿಜಯ್‌ ಬ್ಯುಸಿಯಾಗಿರುವುದರಿಂದ ಅವರ ʼಗೋಟ್‌ʼ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ವೆಂಕಟ್‌ ಪ್ರಭು ನಿರ್ದೇಶನ ಮಾಡಿರುವ ಈ ಸಿನಿಮಾ ಸೈನ್ಸ್‌ ಫೀಕ್ಷನ್‌ ಕಥಾಹಂದರವನ್ನು ಒಳಗೊಂಡಿದ್ದು,ದಳಪತಿ ವಿಜಯ್‌ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೈಕ್‌ನಲ್ಲಿ ಚೇಸಿಂಗ್‌ ಮಾಡುವ ಆ್ಯಕ್ಷನ್ ದೃಶ್ಯದ ಟೀಸರ್‌ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು.

ಟೀಸರ್‌ ಬಳಿಕ ಕುತೂಹಲದಿಂದ ಟ್ರೇಲರ್‌ಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ʼಗೋಟ್‌ʼ ಚಿತ್ರತಂಡ ಗುಡ್‌ ನ್ಯೂಸ್‌ ನೀಡಿದೆ.

Advertisement

ಚಿತ್ರತಂಡ ಟ್ರೇಲರ್‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಸೂಟ್ ಧರಿಸಿಕೊಂಡು ಗನ್‌ ಶೂಟ್‌ ಮಾಡುವ ಲುಕ್‌ನಲ್ಲಿ ದಳಪತಿ ವಿಜಯ್‌ ಕಾಣಿಸಿಕೊಂಡಿದ್ದಾರೆ.

ಆಗಸ್ಟ್‌ 17ರಂದು, ಸಂಜೆ 5ಗಂಟೆಗೆ ʼಗೋಟ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ಸಿನಿಮಾದಲ್ಲಿ ವಿಜಯ್‌ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ʼಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ ಚಿತ್ರ ಸೆ.5 ರಂದು ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next