Advertisement

ಸಮಾಜಮುಖೀ ಕಾರ್ಯದಲ್ಲಿದೆ ಭಗವಂತನ ಕೃಪೆ

01:13 PM Jan 07, 2022 | Team Udayavani |

ನಾರಾಯಣಪುರ: ಕೊಡೇಕಲ್‌ ಪಟ್ಟಣದ ಬಸವ ಪರಂಪರೆಯ ಬಯಲೋಳು ಬಯಲಾದ ಲಿಂಗೈಕ್ಯ ಬಸವರಾಜಯ್ಯ ಅಪ್ಪನವರ 67ನೇ ಪುಣ್ಯರಾಧನೆ ನಿಮಿತ್ತ ಕತೃ ಗದ್ದುಗೆಗೆ ವಿಶೇಷ ಪೂಜೆ, ಜೀವನ ದರ್ಶನ ಅಧ್ಯಾತ್ಮಿಕ ಪ್ರವಚನ ಮಹಾಮಂಗಲ, ಕೃತಿ ಬಿಡುಗಡೆ, ತುಲಾಭಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮಗಳು ಗುರುವಾರ ಶ್ರದ್ಧಾ ಭಕ್ತಿಯಿಂದ ಜರುಗಿದವು.

Advertisement

ಕಾರ್ಯಕ್ರಮದ ನೇತೃತ್ವವಹಿಸಿದ್ದ ಸಿಂದಗಿಯ ಸಾರಂಗಮಠದ ಪೂಜ್ಯ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಸಮಾಜಮುಖೀ ಸತ್ಕಾರ್ಯ ಗಳತ್ತ ಗಮನ ಹರಿಸಿದರೆ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ. ಬಸವ ಪರಂಪರೆಯ ಲಿಂ. ಬಸವರಾಜಪ್ಪಯ್ಯ ಅವರ ಕತೃಗದ್ದುಗೆ ಇಂದಿಗೂ ಪರಮ ಪೂಜ್ಯರ ಭಕ್ತರು ಅತ್ಯಂತ ಭಕ್ತಿ ಭಾವದಿಂದ ಪೂಜಾ ಕೈಂಕರ್ಯ ನೆರವೇರಿಸುತ್ತಿರುವ ಸೇವೆ ಅರ್ಥಪೂರ್ಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಕ ಸಂಗನಬಸಯ್ಯ ಕೊಡೇಕಲ್‌ವುಠ ವಿರಚಿತ “ಮೌನ ದೇವರು ಪೂಜ್ಯ ವೀರಯ್ಯ ಅಪ್ಪನವರು’ ಕೃತಿ ಬಿಡುಗಡೆ ಮಾಡಲಾಯಿತು. ಸಿಂದಗಿಯ ನಿವೃತ್ತ ಪ್ರಾಧ್ಯಾಪಕ ಡಾ| ಚನ್ನಪ್ಪ ಕಟ್ಟಿ ಕೃತಿ ಪರಿಚಯಿಸಿದರು. ಬಳಿಕ ಬಲಶೆಟ್ಟಿಹಾಳ ಗ್ರಾಮದ ಭಕ್ತ ಸಂಗಪ್ಪ ಬಸಲಿಂಗಪ್ಪ ನೀಲಗಾರ ಅವರು ಸಮಸ್ತ ಭಕ್ತರ ಸಮ್ಮುಖದಲ್ಲಿ ಬಸವ ಪೀಠ ಪೀಠಾಧಿಪತಿ ವೃಷಬೇಂದ್ರ ಅಪ್ಪನವರ ತುಲಾಭಾರ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಮಹಲಿನಮಠಕ್ಕೆ ವಾಹನವನ್ನು ಭಕ್ತಿ ಕಾಣಿಕೆಯಾಗಿ ನೀಡಿದ ನೇಕಾರ ಸಮುದಾಯದ ಸದ್ಭಕ್ತರನ್ನು, ಸಂಗೀತಗಾರರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ದೇವಪುರದ ಜಡಿಶಾಂತಲಿಂಗೇಶ್ವರ ಹಿರೇಮಠದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು. ಕುಷ್ಟಗಿಯ ಶಾಮೀದ್‌ ಅಲಿ ವಿಶೇಷ ಉಪನ್ಯಾಸ ನೀಡಿದರು. ಬಸವ ಪೀಠಾಧಿಪತಿ ವೃಷಬೇಂದ್ರ ಅಪ್ಪನವರ ಸಾನಿಧ್ಯ ವಹಿಸಿದ್ದರು. ಶ್ರೀಗುರು ದುರದುಂಡೇಶ್ವರ ವಿರಕ್ತಮಠ ಶಿವಕುಮಾರ ಶ್ರೀ, ಮುದಗಲ್‌ನ ಕಲ್ಯಾಣ ಆಶ್ರಮದ ಪ್ರವಚನಕಾರ ಮಹಾಂತ ಸ್ವಾಮೀಜಿ ನೇತೃತ್ವವಹಿಸಿದ್ದರು. ರಾಜಾ ಜೀತೇಂದ್ರನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು.

ರಾಜಾ ವೆಂಕಟಪ್ಪನಾಯಕ ಜಹಗೀರದಾರ, ಡಾ| ಎಂ.ಎಂ. ಪಡಶೆಟ್ಟಿ, ವಿ.ಎಸ್‌. ಹಾವೇರಿ, ಶಾಮಸುಂದರ ಜ್ಯೋಶಿ, ರಂಗನಾಥ ದೊರೆ, ಬಸಪ್ಪ ಪಂಜಗಲ್‌, ಅಯ್ಯಣ್ಣ ಪಡಶೆಟ್ಟಿ, ಎಸ್‌.ಬಿ. ಅಡ್ಡಿ, ಬಸವರಾಜ ಹೊಸಪೂಜಾರಿ, ಬಸವರಾಜ ಜಾಲಿಗಿಡದ್‌, ಬಸವರಾಜ ಗೋನಾಟ್ಲ, ಪ್ರಕಾಶ ಬಾಚಿಹಾಳ ಸೇರಿದಂತೆ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು. ನಂತರ ಮಹಾಪ್ರಸಾದ ನೆರವೇರಿತು. ಬಸವರಾಜ ಭಂಟನೂರು ಪ್ರಾರ್ಥಿಸಿದರು. ಗುರುರಾಜ ಜ್ಯೋತಿ ಸ್ವಾಗತಿಸಿದರು. ಕೆ.ಬಿ. ಗಡ್ಡದ್‌ ನಿರೂಪಿಸಿದರು. ಬಸವರಾಜ ಭದ್ರಗೋಳ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next