Advertisement

ಸರ್ಕಾರದ ವಿವರಕ್ಕೆ ರಾಜ್ಯಪಾಲ ಅತೃಪ್ತಿ

08:34 AM Sep 02, 2017 | Team Udayavani |

ಬೆಂಗಳೂರು: ಬಡ್ತಿ ಮೀಸಲು ವಿವಾದಕ್ಕೆ ಸಂಬಂಧಿಸಿದಂತೆ ಎಸ್ಸಿ ಎಸ್ಟಿ ನೌಕರರ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜೂಭಾಯಿ ವಾಲಾ ಒಪ್ಪಿಗೆ ಪಡೆಯಲು ಮತ್ತೆ ಸರ್ಕಾರ ವಿಫ‌ಲವಾಗಿದೆ. ಸುಗ್ರೀವಾಜ್ಞೆಯ ಅಗತ್ಯತೆ ಪ್ರಶ್ನಿಸಿ ಸರ್ಕಾರಕ್ಕೆ ಕಡತ ವಾಪಸ್‌ ಕಳುಹಿಸಿದ್ದ ರಾಜ್ಯಪಾಲರನ್ನು ಶುಕ್ರವಾರ
ಕಾನೂನು ಸಚಿವ ಟಿ.ಬಿ. ಜಯಚಂದ್ರ ಭೇಟಿಯಾಗಿ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತರಾತುರಿಯಲ್ಲಿ ತರುವ ಅಗತ್ಯ ಏನಿತ್ತು. 1978 ರಿಂದಲೂ ಬಡ್ತಿ ಮೀಸಲಾತಿ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳದೇ ಸುಗ್ರೀವಾಜ್ಞೆ ತಂದಿರುವ ಉದ್ದೇಶ ಏನು ಎಂದು ಪ್ರಶ್ನೆಗಳ
ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.

Advertisement

ರಾಜ್ಯಪಾಲರ ಪ್ರಶ್ನೆಗಳಿಗೆ ಸಾಕಷ್ಟು ಸಮಜಾಯಿಸಿ ನೀಡಲು ಪ್ರಯತ್ನಿಸಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿವರಣೆಗೆ ಸಹಮತ ವ್ಯಕ್ತಪಡಿಸದ ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next