Advertisement

ಕ್ವಾರಂಟೈನ್‌ ನಿಯಮ ಸಡಿಲಿಕೆ ಮಾಡಿದ ಸರಕಾರ

08:53 AM May 15, 2020 | Sriram |

ಮಂಗಳೂರು: ವಿದೇಶದಿಂದ ತಾಯ್ನಾಡಿಗೆ ಆಗಮಿಸುವ ಅನಿವಾಸಿ ಭಾರತೀಯರ ಪೈಕಿ ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಕ್ಯಾನ್ಸರ್‌ ಸಹಿತ ಕೆಲವು ರೋಗಗಳಿಂದ ಬಳಲುವವರು ಸರಕಾರದ ಕ್ವಾರಂಟೈನ್‌ನಲ್ಲಿ ಕೋವಿಡ್‌ ಟೆಸ್ಟ್‌ ನಡೆಸಿದಾಗ ವರದಿ ನೆಗೆಟಿವ್‌ ಬಂದರೆ ಅಂತಹವರಿಗೆ ಹೋಂ ಕ್ವಾರಂಟೈನ್‌ ಮಾಡಲು ಸರಕಾರ ನಿಯಮ ಸಡಿಲಿಕೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಂಗಳೂರಿಗೆ ಮೇ 12 ರಂದು ರಾತ್ರಿ 179 ಪ್ರಯಾಣಿಕರೊಂದಿಗೆ ದುಬಾೖಯಿಂದ ಮೊದಲ ವಿಮಾನ ಬಂದಿತ್ತು. ಲಾಕ್‌ಡೌನ್‌ ಬಳಿಕ ಬರುವ ವಿಶೇಷ ವಿಮಾನ ಇದಾಗಿದೆ. ವಿದೇಶದ ವಿಮಾನ ಲ್ಯಾಂಡ್‌ ಆದ ಬಳಿಕ ಪ್ರಯಾಣಿಕರು ಹೊರಗಡೆ ಬರಲು ಸಾಮಾನ್ಯವಾಗಿ 2 ಗಂಟೆ ಅಗತ್ಯವಿದೆ. ಆದರೆ ಮೇ 12ರಂದು ಬಂದಿರುವುದು ವಿಶೇಷ ವಿಮಾನವಾದ್ದರಿಂದ ಕೊರೊನಾ ಮುಂಜಾಗ್ರತೆಗಾಗಿ ಸಾಮಾಜಿಕ ಅಂತರದೊಂದಿಗೆ ಎಲ್ಲರ ಆರೋಗ್ಯ ತಪಾ ಸಣೆ, ಇಮಿಗ್ರೇಷನ್‌ ಪರಿಶೀಲನೆ ನಡೆಸಲು ಸಮಯ ಹೆಚ್ಚುಬೇಕಾಗಿತ್ತು ಎಂದರು.

ವಲಸೆ ಕಾರ್ಮಿಕರು ಆತಂಕಪಡಬೇಡಿ
ದ.ಕ. ಜಿಲ್ಲೆಯಿಂದ ಅಂತಾರಾಜ್ಯಕ್ಕೆ ಕಾರ್ಮಿಕರು ಹೋಗಬೇಕಾದರೆ ಆಯಾ ರಾಜ್ಯದವರೂ ಒಪ್ಪಿಗೆ ಕೊಡಬೇಕು. ಮಂಗಳೂರಿನಲ್ಲಿ ಝಾರ್ಖಂಡ್‌ ರಾಜ್ಯ ದವರು ತುಂಬಾ ಜನ ಇದ್ದಾರೆ. ಆದರೆ ಅಲ್ಲಿನ ಸರಕಾರದಿಂದ ಒಪ್ಪಿಗೆ ಬಂದಿರಲಿಲ್ಲ. ಇದೀಗ ನಮ್ಮ ರಾಜ್ಯ ಸರಕಾರ, ಅಲ್ಲಿನ ಸರಕಾರ ಜತೆ ಮಾತುಕತೆ ನಡೆಸುತ್ತಿದೆ. ಒಂದು ರೈಲಿನಲ್ಲಿ 1,460 ಜನ ಮಾತ್ರ ಹೋಗಲು ಸಾಧ್ಯ. ಹೀಗಾಗಿ ಅಂತಾರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದವರನ್ನು ಆಯಾ ರಾಜ್ಯಗಳಿಗೆ ತಲು ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊ ಳ್ಳುತ್ತಿದೆ. ಈ ಕಾರಣಕ್ಕಾಗಿ ವಲಸೆ ಕಾರ್ಮಿಕರು ಹೆದರುವ ಅಗತ್ಯವಿಲ್ಲ, ಸುಳ್ಳುಸುದ್ದಿಗಳಿಗೆ ಬೆಲೆ ನೀಡಬೇಡಿ ಎಂದರು.

ಜಿಲ್ಲೆಗೆ ಬೇರೆ ರಾಜ್ಯಗಳಿಂದ ಬರಲು ಇಲ್ಲಿಯ
ವರೆಗೆ 6,489 ಅರ್ಜಿಗಳು ಬಂದಿದ್ದು, ಅಂದಾಜು 25,000 ಮಂದಿ ಆಗಮಿಸುವ ಸಾಧ್ಯತೆಯಿದೆ. ಬರುವ ಎಲ್ಲರೂ ಕಡ್ಡಾಯಾ ವಾಗಿ ಜಿಲ್ಲಾಡಳಿತದ ಕ್ವಾರಂಟೈನ್‌ ಕೇಂದ್ರ ದಲ್ಲಿ 14 ದಿನ ಇರಬೇಕು. ಇದಕ್ಕಾಗಿ ಸರಕಾರದ ಸುಮಾರು 10,000 ರೂಂಗಳ ವ್ಯವಸ್ಥೆಯಿದ್ದು, ಖಾಸಗಿ ಹೊಟೇಲ್‌ಗ‌ಳನ್ನೂ ನಿಗದಿಪಡಿಸಲಾಗಿದೆ. ಹಂತ ಹಂತವಾಗಿ ಹೊರ ರಾಜ್ಯದವರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ. ಈ ನಿಯಮ ಬಂದ ಮೇಲೆ 25 ಮಂದಿ ಈಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಉಪಸ್ಥಿತರಿದ್ದರು.

ವಲಸೆ ಕಾರ್ಮಿಕರು 40,510 ಮಂದಿ!
ದ.ಕ. ಜಿಲ್ಲೆಯಲ್ಲಿದ್ದ 40,510 ಇತರ ರಾಜ್ಯಗಳ ಕಾರ್ಮಿಕರು “ಸೇವಾ ಸಿಂಧು’ ಆ್ಯಪ್‌ ಮೂಲಕ ಹೊರ ರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದ್ದಾರೆ. ಬಿಹಾರದ 7,589 ಮಂದಿ, ಝಾರ್ಖಂಡ್‌ನ‌ 7,976, ಉತ್ತರಪ್ರದೇಶದ 9,700, ಪ. ಬಂಗಾಲದ 4,609 ಮಂದಿ ಯಿದ್ದು, ಈ ಪೈಕಿ ಉತ್ತರ ಪ್ರದೇಶದ 6,000, ಬಿಹಾರದ 4,200, ಝಾರ್ಖಂಡ್‌ನ‌ 1,148 ಮಂದಿ 8 ರೈಲುಗಳ ಮೂಲಕ ಈಗಾಗಲೇ ದ.ಕ. ಜಿಲ್ಲೆಯಿಂದ ತೆರಳಿದ್ದಾರೆ. ಜಿಲ್ಲೆ ಯಲ್ಲಿದ್ದ ಬಾಗಲಕೋಟೆ, ಗದಗ, ವಿಜಯಪುರ ಸಹಿತ 25 ರಾಜ್ಯಗಳ 12,970 ಮಂದಿ 500 ಬಸ್‌ಗಳ ಮೂಲಕ ತೆರಳಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

Advertisement

ದುಬಾೖ ಪ್ರಯಾಣಿಕರ ವರದಿ ಇಂದು ಸಾಧ್ಯತೆ
ಮಂಗಳವಾರ ದುಬಾೖಯಿಂದ ಆಗಮಿಸಿದ ಮೊದಲ ವಿಮಾನದಲ್ಲಿದ್ದ ಗರ್ಭಿಣಿಯರು ಸಹಿತ ಎಲ್ಲರ ಆರೋಗ್ಯ ತಪಾಸಣೆ ಮಂಗಳವಾರ ರಾತ್ರಿ ನಡೆಸಲಾಗಿದೆ. ಜತೆಗೆ, ಕ್ವಾರಂಟೈನ್‌ನಲ್ಲಿರುವ ಕೇಂದ್ರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ತೆರಳಿ ಗಂಟಲದ್ರವವನ್ನು ಸಂಗ್ರಹಿಸಿದ್ದಾರೆ. ಇದರ ವರದಿ ಗುರುವಾರ ದೊರೆಯುವ ಸಾಧ್ಯತೆಯಿದೆ. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ.
– ಸಿಂಧೂ ಬಿ.ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next