Advertisement
ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯರ ಸರ್ಕಾರ ಮೋದಿ ಸರ್ಕಾರದ ತರಹ ಅಲ್ಲ. ಮೋದಿ ಸರ್ಕಾರ ಚುನಾವಣಾ ಪ್ರನಾಳಿಕೆಯಲ್ಲಿನ ಶೇ.20 ರಷ್ಟು ಭರವಸೆಗಳನ್ನು ಮಾತ್ರ ಈಡೇರಿಸುವಲ್ಲಿ ಸಫಲವಾಗಿದೆ ಎಂದು ದೂರಿದರು.
Related Articles
Advertisement
ಇವತ್ತು ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಗೊಂದಲರಹಿತವಾಗಿದೆ. ಈ ಹಿಂದೆ ಇದ್ದ ಎರಡು ಕಚೇರಿ, ಎರಡು ಗುಂಪುಗಳು ಇಲ್ಲವಾಗಿದೆ. ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅಧಿಕಾರಗಳನ್ನು ಪಡೆದು ಇದೀಗ ಸ್ವಾರ್ಥ ರಾಜಕಾರಣಕ್ಕೋಸ್ಕರ ಪಕ್ಷ ತೊರೆದು ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದ ಅವರು ಕಾಂಗ್ರೆಸ್ ಪಕ್ಷದಿಂದ ಅಥವಾ ಸಿದ್ದರಾಮಯ್ಯರಿಂದ ಯಾವುದೇ ದ್ರೋಹ ಅವರಿಗೆ ಆಗಿರಲಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಮಾತನಾಡಿ, ಇವತ್ತಿನ ಸಭೆ ಕಾಂಗ್ರೆಸ್ ಪಕ್ಷ ಒಬ್ಬ ವ್ಯಕ್ತಿಯ ಹಿಂದಿಲ್ಲ. ಕಾರ್ಯಕರ್ತರು ಪಕ್ಷದ ಹಿಂದಿದ್ದಾರೆ ಎಂದು ಸಾಬೀತುಪಡಿಸಿದೆ. ಮುಂದಿನ ಚುನಾವಣೆಯಲ್ಲಿ ಸಾ.ರಾ.ಮಹೇಶ್‌ಗೆ ಡಿ.ರವಿಶಂಕರ್ ಸರಿಯಾದ ಕುಸ್ತಿ ಪಟು, ಎದುರಾಳಿ ಸಾಮಾನ್ಯರಲ್ಲವಾದ್ದರಿಂದ ಸರಿಯಾಗಿ ಪಟ್ಟುಗಳನ್ನು ಕರಗತ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ನೋಡಿದರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೊಸ ಶಕೆ ಪ್ರಾರಂಭವಾದಂತಿದೆ. ಸಿದ್ದರಾಮಯ್ಯರ ಸರ್ಕಾರ 8635 ಕೋಟಿ ರೈತರ ಸಾಲ ಮನ್ನಾ ಮಾಡಿದೆ.
ಆದರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಲ್ಲಿ ಹಿಂದೇಟು ಹೊಡೆದಿದೆ. ಅಲ್ಲದೆ ಈ ಸರ್ಕಾರ ಎಲ್ಲಾ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಾ ಬಂದಿದೆ. ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಜಿಪಂ ಸದಸ್ಯರಾದ ಡಿ.ರವಿಶಂಕರ್ ಮತ್ತು ಅಚ್ಯುತಾನಂದ, ದಿ.ಮಂಚನಹಳ್ಳಿಮಹದೇವರ ಪತ್ನಿ ಅನುರಾಧ, ಪುತ್ರಿ ಐಶ್ವರ್ಯ, ತಾಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್. ಕೆ.ನಟರಾಜ್, ವಕ್ತಾರ ಜಾಬೀರ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಂ. ವೆಂಕಟರಾಮು, ಮಾರ್ಚಳ್ಳಿ ಶಿವರಾಮು, ನರಸಿಂಹರಾಜು, ಶ್ರೀನಿವಾಸ್, ಯೋಜನಾಪ್ರಾಧಿಕಾರದ ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷ ಜಿ.ಕೆ.ರಾಜು, ಕೋಳಿ ಪ್ರಕಾಶ್, ಹೇಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹದೇವ್ ಉದಯಶಂಕರ್ ಇತರರು ಇದ್ದರು.