Advertisement

ವೈದ್ಯನ ಆತ್ಮ ಹತ್ಯೆಗೆ ಸರ್ಕಾರವೇ ಹೊಣೆ: ಧ್ರುವ

12:56 PM Aug 22, 2020 | Suhan S |

ಮೈಸೂರು: ನಂಜನಗೂಡಿನಲ್ಲಿ ತಾಲೂಕು ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ರಾಜ್ಯ ಸರ್ಕಾರವೇ ನೇರಹೊಣೆ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಆರೋಪಿಸಿದರು.

Advertisement

ಜಲದರ್ಶನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವೈದ್ಯಾಧಿಕಾರಿಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃ ಷ್ಟಕರ ಸಂಗತಿ. ಕೋವಿಡ್ ವಿರುದ್ಧದ ಅವರ ಹೋರಾಟಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಕಳೆದ 6 ತಿಂಗಳಿಂದ ಹೆಚ್ಚುವರಿ ತಾಲೂಕು ವೈದ್ಯಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದ್ದರು. ಜ್ಯುಬಿ ಲಿಯೆಂಟ್‌ ಕಾ ರ್ಖಾ ನೆ ಹಾಟ್‌ ಸ್ಟಾಟ್‌ ಆದಾಗ ಉತ್ತಮ ವಾಗಿ ನಿರ್ವಹಿಸಿದ್ದರು. ಅಂತ ಹ ಅಧಿಕಾರಿ ಯನ್ನುಉಳಿಸಿಕೊಳ್ಳದೆ ಕಳೆದುಕೊಂಡಿ ರುವುದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಕಿಡಿ ಕಾರಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಿಸಬೇಕಿದ್ದ ಸರ್ಕಾರ ಹಾಗೂ ಸಚಿವರು, ಆರೋಗ್ಯ ಸಚಿವರು ಚಿತ್ರದುರ್ಗದಲ್ಲಿ ತೇರು ಎಳೆಯುವುದರಲ್ಲಿ ಬ್ಯುಸಿಯಾಗಿದ್ದರು.

ಉಸ್ತುವಾರಿ ಸಚಿವರು ಸ್ವಿಮ್ಮಿಂಗ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇಡೀ ಸರ್ಕಾರ ವೆಂಟಿಲೇಟರ್‌, ಪಿಪಿಇ ಕಿಟ್‌, ಥರ್ಮಲ್‌ ಸ್ಕ್ಯಾನರ್‌, ಟೆಸ್ಟಿಂಗ್‌ ಕಿಟ್‌ ಖರೀದಿಯಲ್ಲೂ ಅವ್ಯವಹಾರ ನಡೆಸಿ 200 ಕೋಟಿ ಲೂಟಿ ಮಾಡಿದೆ. ಬೆಂಗಳೂರಿನಲ್ಲಿ ಸೀಲ್‌ ಡೌನ್‌ ಹೆಸರಿನಲ್ಲಿ 2,300 ಕೋಟಿ ಲೂ ಟಿ ಮಾ ಡಿದೆ. ಉಸ್ತುವಾರಿ ಸಚಿವರು ಬೆಂಗಳೂರಿ ನಲ್ಲೇ ಬೀಡು ಬಿಟ್ಟ ಕಾರಣ ಈಗ ಜಿಲ್ಲಾ ಕೇಂದ್ರಗಳು ಮರಣ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ದೂರಿದರು.ವೈದ್ಯಕೀಯ ಸಿಬ್ಬಂದಿಗೆ ಕಳೆದ 3 ತಿಂಗಳಿನಿಂದ ಸರ್ಕಾರ ಸಂಬಳ ನೀಡಿಲ್ಲ. ಕೋವಿಡ್ ಉಸ್ತುವಾರಿಯಾಗಿದ್ದು 30 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಬೇಜವಾ ಬ್ದಾರಿ ಹೇಳಿಕೆ ನೀಡಿ ಇಡೀ ಮೈಸೂರು ಕೊಡಗು ಚಾಮರಾಜನಗರ ಜಿಲ್ಲೆಗಳ ವೈದ್ಯರಿಂದ ಪ್ರತಿಭಟನೆ ಎದುರಿಸಿ ಜನರಿಗೆ ಚಿಕಿತ್ಸೆ ಸಿಗದಂತೆ ಮಾಡಿದ್ದಾರೆ. ಅಲ್ಲದೆ ವೈದ್ಯಾಧಿಕಾರಿ ಆತ್ಮಹತ್ಯೆಗೆ ನೈತಿಕಹೊಣೆ ಹೊತ್ತು ಸಚಿವ ಡಾ.ಸುಧಾಕರ್‌ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದರು. ರಾಜ್ಯ ಸರ್ಕಾರ ವೈದ್ಯರ ಆತ್ಮಹತ್ಯೆ ಪ್ರಕರಣವನ್ನು ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಬೇಕು. ರಾಜ್ಯಾದ್ಯಂತ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿ ಮಾಡಬೇಕು. 15 ದಿನಗಳ ಒಳಗೆ ಮೃತ ನಾಗೇಂದ್ರ ಪತ್ನಿಗೆ ಉಪನ್ಯಾಸಕಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಕೋವಿಡ್ನಿಯಂತ್ರಣ, ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫ‌ಲವಾಗಿದ್ದು, ಅದನ್ನು ಮರೆಮಾಚಲು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯ ಗಲಭೆ ಮುಂದಿಟ್ಟು ರಾಜಕೀಯ ಮಾಡುತ್ತಿದೆ ಎಂದು  ದೂರಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌, ನಗರಾಧ್ಯಕ್ಷ ಆರ್‌.  ಮೂರ್ತಿ, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮುಖಂಡ ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next