Advertisement
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ವಿವಿಧ ತೆರಿಗೆ ಹೇರುವ ಮೂಲಕ ಹೊರೆ ಹೇರುತ್ತಿದೆ. 2014 ರಲ್ಲಿ ಕಚ್ಚಾ ತೈಲದ ಬೆಲೆ 105.71 ಡಾಲರ್ ಇತ್ತು. ಆಗ ಪ್ರಟೊಲ್ ಬೆಲೆ 71.41 ರೂ. ಹಾಗೂ ಡೀಸೆಲ್ ಬೆಲೆ 56.71 ರೂ.ಗಳಷ್ಟಿತ್ತು. ಈಗ ಕಚ್ಚಾ ತೈಲದ ಬೆಲೆ 63.46 ರಷ್ಟಿದ್ದು, ಪೆಟ್ರೋಲ್ ಬೆಲೆ 76.06 ಹಾಗೂ ಡೀಸೆಲ್ ಬೆಲೆ 64.86 ರೂ. ಆಗಿದೆ. ಇದು ದೇಶದ ಇತಿಹಾಸದಲ್ಲಿಯೇ ದಾಖಲೆ ಹೆಚ್ಚಳ ಎಂದರು.
ಜನರ ಜೀವನದ ಮೇಲೆ ಬರೆ ಎಳೆಯುತ್ತಿದೆ. 2014 ರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ 7.35 ಲಕ್ಷ ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿ ನಿಂದ ಒಂಭತ್ತು ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, 2014 ರಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಪ್ರತಿ ಲೀಟರ್‌ಗೆ 9.2 ರೂ. ಇದ್ದದ್ದು, ಈಗ 19.48 ರೂ. ಗೆ ಹೆಚ್ಚಳವಾಗಿದೆ. ಅದೇ ರೀತಿ 3.46 ರೂ. ಇದ್ದ ಡೀಸೆಲ್ ಮೇಲಿನ ತೆರಿಗೆ ಈಗ 15.33 ಕ್ಕೆ ಹೆಚ್ಚಳ ಮಾಡಲಾಗಿದೆ. ಇದು ದೇಶದ ಜನ ಸಾಮಾನ್ಯರ ಆರ್ಥಿಕ ವಹಿವಾಟಿಗೆ ತೊಡಕಾಗಿದೆ ಎಂದರು.
Related Articles
Advertisement
ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 68.91 ರೂ. ಇದ್ದರೆ, ಬೆಂಗಳೂರಿನಲ್ಲಿ 65.71 ರೂ.ಇದೆ. ಅದೇ ರೀತಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 81.80 ರೂ ಇದ್ದರೆ, ಬೆಂಗಳೂರಿನಲ್ಲಿ 75.12 ರೂ. ಇದೆ ಎಂದು ಹೇಳಿದರು.