Advertisement

ಸರ್ಕಾರ ಆದೇಶ ಹಿಂಪಡೆಯಲು ಒತ್ತಾಯ

05:35 PM Dec 20, 2021 | Team Udayavani |

ಮಾನ್ವಿ: ಕಟ್ಟಡ ಸುರಕ್ಷತೆ ಕುರಿತು ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು ಹಾಗೂ ಶಾಲೆ ಕಟ್ಟಡದಲ್ಲಿ ಅಗ್ನಿ ಸುರಕ್ಷತೆ ಕುರಿತು ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಮಾಡಿರುವ ಆದೇಶ ಸರ್ಕಾರ ಹಿಂಪಡೆಯಬೇಕು ಎಂದು ಜಿಲ್ಲಾ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ ಒತ್ತಾಯಿಸಿದರು.

Advertisement

ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವದಿಂದ ಶಿಕ್ಷಣ ನೀಡಲಾಗುತ್ತಿದೆ. ಈ ನಡುವೆ ಹಲವಾರು ಷರತ್ತು, ನಿಯಮ ವಿಧಿಸುತ್ತಿದೆ. ಸರ್ಕಾರ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ಮಾಡಲು ಇರುವ ನಿಯಮ ಸರಳೀಕರಣಗೊಳಿಸಬೇಕು, ಶಾಲೆಗಳನ್ನು ನವೀಕರಣ ಮಾಡಲು ಆನ್‌ಲೈನ್‌ ಮೂಲಕ ನಿಗದಿಪಡಿಸಿದ ಆದೇಶ ಹಿಂಪಡೆಯಬೇಕು. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಶಾಲೆಗಳನ್ನು ಪ್ರಾರಂಭಿಸಿ ಹಲವು ದಶಕ ಕಳೆದಿದ್ದು ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಖಾಸಗಿ ಶಾಲೆಗಳನ್ನು ವಾರ್ಷಿಕವಾಗಿ ನವೀಕರಿಸುವಾಗ ಅನೇಕ ಅವೈಜ್ಞಾನಿಕ ನಿಯಮ ವಿಧಿ ಸುತ್ತಿದ್ದು ಅವುಗಳನ್ನು ಪೂರೈಸಲು ಸಮಯವನ್ನೂ ನೀಡುತ್ತಿಲ್ಲ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿನ್ನಡೆಯಾಗುತ್ತಿದೆ ಎಂದರು.

ಸರ್ಕಾರದ ಇಂತಹ ಅವೈಜ್ಞಾನಿಕ ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಕಾನೂನು ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮುರಳೀಧರ್‌ ಕುಲಕರ್ಣಿ, ಎಚ್‌. ಶಫುìದ್ದೀನ್‌, ಸಹ ಖಜಾಂಚಿ ಕೆ.ಇ. ನರಸಿಂಹ, ಸದಸ್ಯರಾದ ರಾಜಾ ಸುಭಾಷ ಚಂದ್ರನಾಯಕ್‌, ಶಶಿಕಲಾ ಪಾಟೀಲ್‌, ಶೇಖಫರೀದ್‌ ಉಮ್ರಿ, ರಾಜು ತಾಳಿಕೋಟೆ, ವೆಂಕಟರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next