Advertisement

ಮ್ಯಾನ್ಯುಯಲ್ ಸ್ಕ್ಯಾ ವೆಂಜಿಂಗ್ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಸರ್ಕಾರ ಬದ್ಧ : ಎಂ. ಶಿವಣ್ಣ

07:08 PM Jun 24, 2021 | Team Udayavani |

ದಾವಣಗೆರೆ: ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾ ವೆಂಜಿಂಗ್ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಸರ್ಕಾರ ಮತ್ತು ಆಯೋಗ ಬದ್ಧ ಇದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ರಾಜ್ಯದಲ್ಲಿ 5080 ಜನರು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಇದ್ದಾರೆ ಎನ್ನುವುದು ಆಘಾತಕಾರಿ ವಿಚಾರ. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಸರ್ಕಾರ ಮತ್ತು ಆಯೋಗ ಬದ್ಧ ಇದೆ ಎಂದು ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಸ್ವಾವಲಂಬಿ ಜೀವನ ನಡೆಸಲು ಸಾಲ ಸೌಲಭ್ಯ, ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ, ಮನೆ ಒಳಗೊಂಡಂತೆ ಪುನವರ್ಸತಿ ಒದಗಿಸಲಾಗುವುದು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಪುನವರ್ಸತಿ ಕಾಯ್ದೆ-2013ರ ಪ್ರಕಾರ 90 ದಿನಗಳಲ್ಲಿ ಪುನವರ್ಸತಿ ಕಲ್ಪಿಸಬೇಕು. ಆದರೆ, ಎರಡು ವರ್ಷಗಳಾದರೂ ಪುನವರ್ಸತಿ ಒದಗಿಸುವ ಕೆಲಸ ಆಗಿಲ್ಲ ಎಂದು ತಿಳಿಸಿದರು.

ಪೌರ ಕಾರ್ಮಿಕರನ್ನು ಮಲದ ಗುಂಡಿ, ಚರಂಡಿ ಸ್ವಚ್ಛತೆಗೆ ಇಳಿಸುವುದು ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ.  ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ೨ ವರ್ಷ ಜೈಲು, ದಂಡ ವಿಧಿಸಲಾಗುವುದು. ಆಯೋಗಕ್ಕೆ ಸ್ಪಯಂ ಪ್ರೇರಣೆ ದೂರು ದಾಖಲಿಸಿಕೊಳ್ಳುವ ಅಧಿಕಾರ ಇದೆ. ಅಧ್ಯಕ್ಷರಿಗೆ ನ್ಯಾಯಾಂಗ ಅಧಿಕಾರವೂ ಇದೆ. ಇನ್ನು ಮುಂದೆ ಎಲ್ಲಿಯೇ ಆಗಲಿ ಕಾಯ್ದೆ ಉಲ್ಲಂಘನೆ ಮಾಡುವರ ವಿರುದ್ಧ ಆಯೋಗ ಕ್ರಮ ತೆಗೆದುಕೊಳ್ಳಲಿದೆ. ಪಾಂಡವಪುರ, ರಾಮನಗರಗಳಲ್ಲಿ ನಡೆದ ಘಟನೆಗೆ ಸಂಬಂದಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾ ವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-೨೦೧೩ರ ಬಗ್ಗೆ ಅನೇಕ ಅಽಕಾರಿಗಳಿಗೆ ಮಾಹಿತಿ ಇಲ್ಲದ ಕಾರಣಕ್ಕೆ ಕಾಯ್ದೆ ಉಲ್ಲಂಘನೆ ಆಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆಯೋಗದ ಮೂಲಕ ಅಧಿಕಾರಿಗಳಿಗೆ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-೨೦೧೩ರ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳನ್ನು ಸಮಾಜದ ಮುಖ್ಯವಾಹಿನಿಗೆ ಬರಲು, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ ಒದಗಿಸಲಾಗುವುದು. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಸಾಲ ಮಂಜೂರಾತಿಗೆ ಆಯೋಗದಿಂದ ಆದೇಶ ನೀಡಲಾಗಿದೆ. ಯಂತ್ರೋಪಕರಣ ಖರೀದಿಗೆ ಮುಂದಾಗುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಅವಲಂಬಿತರಿಗೆ ಶೇ.೭೫ ರಷ್ಟು ಸಹಾಯಧನ ನೀಡಲಾಗುವುದು. ಸ್ಥಳೀಯ ಸಂಸ್ಥೆಗಳ ಶೇ.೨೧.೪ ನಿಧಿಯಡಿ ಡೌನ್ ಪೇಮೆಂಟ್ ಭರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next