Advertisement
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಗರ ಜಿಲ್ಲೆ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲದಂತಾಗಿದೆ ಎಂದು ದೂರಿದರು.
Related Articles
Advertisement
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೋರಾಟಕ್ಕಿಂತ ನಮ್ಮ ಕಾರಣಕ್ಕಾಗಿಯೇ ಹಿನ್ನಡೆ ಅನುಭವಿಸಬೇಕಾಯಿತು. ಆದರೂ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ರಚಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕು. ಲೋಕಸಭೆಯಲ್ಲಿ ಬೆಂಗಳೂರಿನ ನಾಲ್ಕೂ ಸೀಟು ಗೆಲ್ಲುವ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ನೈಸ್ ರಸ್ತೆ ವಿರುದ್ಧ ಹೋರಾಟ ಮಾಡುತ್ತಿದ್ದವರು ಇದೀಗ ಅದೇ ರಸ್ತೆಯಲ್ಲಿ ಭೋಜನಕೂಟ ಏರ್ಪಡಿಸುತ್ತಾರೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಯವರು ಕಣ್ಣೀರು ಹಾಕುತ್ತಾರೆ. ಕಣ್ಣೀರಿಗೂ ಮಿತಿ ಇದೆ. ಕಚೀìಫಿನ ಒಳಗೇನಿತ್ತೋ ಗೊತ್ತಿಲ್ಲ, ಸಿಎಂ ಆಪ್ತ ಜಮೀರ್ ಅವರೇ ಹೇಳಬೇಕು ಎಂದು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಒಬ್ಬರೇ ಲೂಟಿ ಹೊಡೆಯುತ್ತಿದ್ದರು, ಈಗ ಇಬ್ಬರು ಲೂಟಿ ಹೊಡೆಯುತ್ತಿ¨ªಾರೆ ಎಂದು ಆರೋಪಿಸಿದರು.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಣ್ಣ ಸುದ್ದಿಗೆ ಮಸಾಲೆ ಬೆರೆಸಿ ಪ್ರಸಾರ ಮಾಡುತ್ತವೆ. ನಮ್ಮ ವಿಚಾರಗಳನ್ನು ತಿಳಿಸಲು ಕಾರ್ಯಕರ್ತರೇ ಮಾಧ್ಯಮ ಎಂದು ಅವರು ಹೇಳಿದರು.
ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಅ. ದೇವೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎ. ರಘು, ಪೂರ್ಣಿಮಾ ಶ್ರೀನಿವಾಸ್, ನಗರ ಜಿಲ್ಲಾ ಅಧ್ಯಕ್ಷ ಮುನಿರಾಜು ಉಪಸ್ಥಿತರಿದ್ದರು.
ಬಿಎಸ್‌ವೈ ಕ್ಲಾಸ್ನಗರ ಕಾರ್ಯಕಾರಿಣಿಯಲ್ಲಿ ನಗರದ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ಕ್ಲಾಸ್ ತೆಗೆದಕೊಂಡ ಯಡಿಯೂರಪ್ಪ, ಸ್ವಂತ ಬೆಳವಣಿಗೆ ಬಿಟ್ಟು ಪಕ್ಷ ಸಂಘಟನೆ ಬಲವರ್ಧನೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಿಬಿಎಂಪಿ ಸದಸ್ಯರು ಹಾಗೂ ಶಾಸಕರು ಎಷ್ಟು ದುಡಿದಿದ್ದಾರೆ ಎಂದು ಪ್ರಶ್ನಿಸಿದ ಅವರು, ಪಾಲಿಕೆ ಸದಸ್ಯರಾಗಿ ತಮ್ಮ ಅಭಿವೃದ್ಧಿಯನ್ನು ಮಾತ್ರ ಮಾಡಿಕೊಂಡವರು ಎಷ್ಟೇ ಶ್ರೀಮಂತರಾಗಿರಲಿ, ಬಲಾಡ್ಯರಾಗಿರಲಿ ಯಾವುದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಎಚ್ಚರಿಸಿದರು.