ರೈತರ ಸಂಕಷ್ಟ ಕೇಳಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರಿದರು.
ರೈತರೇ ತುಂಗಭದ್ರಾ ಜಲಾಶಯದ ಹೂಳೆತ್ತುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ರೈತರು ಬಹು ದಿನಗಳಿಂದ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಸೌಜನ್ಯಕ್ಕೂ ಸರ್ಕಾರದ ಯಾವೊಬ್ಬ ಪ್ರತಿನಿಧಿಗಳೂ ಬಂದಿಲ್ಲ. ಅವರಿಗೆ ರೈತರ ಸಂಕಷ್ಟ ಕೇಳಲು ಪುರುಸೊತ್ತು ಎಲ್ಲಿದೆ? ಎಂದರು. ಯಾವುದೇ ಸರ್ಕಾರ ಹೂಳು ತೆಗೆಯಲು ಮೊದಲು ತಜ್ಞರ ಸಲಹೆ ಪಡೆಯಬೇಕಾಗುತ್ತದೆ. ಅದಕ್ಕೆಲ್ಲ ಸುಮಾರು 10 ಸಾವಿರ ಕೋಟಿ
ಖರ್ಚಾಗಬಹುದು. ನಮ್ಮ ಸರ್ಕಾರ ಇದ್ದಾಗ ಹೂಳೆತ್ತುವುದರ ಬಗ್ಗೆ ತಜ್ಞರ ಸಲಹೆ ಕೇಳಿದಾಗ ಅದರ ಬದಲು ಸಮಾನಾಂತರ ಜಲಾಶಯಗಳು ನಿರ್ಮಾಣ ಮಾಡಿದರೆ ಒಳಿತು ಎಂದು ತಜ್ಞರು ನಮಗೆ ಸಲಹೆ ನೀಡಿದ್ದರು.ನಮ್ಮ ಸರ್ಕಾರ ಬಂದರೆ ಖಂಡಿತಾ ಇದಕ್ಕೆ ಬೇಕಾಗುವ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾನು ಬರಗಾಲ ವೀಕ್ಷಣೆಗೆ ಹೊರಟಾಗ ಯಡಿಯೂರಪ್ಪ ಕೊಡೆ ಹಿಡಿದು ಹೋಗಬೇಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈವರೆಗೆ 7 ಜಿÇÉೆಗಳಿಗೆ ಭೇಟಿ ನೀಡಿದ್ದೇನೆ.
Advertisement
ಎಲ್ಲ ಕಡೆಯೂ ಭೀಕರ ಬರಗಾಲದ ದಾರುಣ ದೃಶ್ಯ ಕಂಡು ಕಣ್ಣೀರಾಗಿದ್ದೇನೆ. ಸಿಎಂ ಸಿದ್ದರಾಮಯ್ಯ ಸಿನಿಮಾ ನೋಡಿಕೊಂಡು, ದೋಸೆ ತಿಂದುಕೊಂಡು ಮಜವಾಗಿ¨ªಾರೆ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಬಿಜೆಪಿ ವತಿಯಿಂದ ತಲಾ 1 ಲಕ್ಷ, ಗೋನಾಳ ರಾಜಶೇಖರಗೌಡ 1ಲಕ್ಷ ಸೇರಿ 3 ಲಕ್ಷ ದೇಣಿಗೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಅವರಿಗೆ ಹಸ್ತಾಂತರಿಸಲಾಯಿತು.