Advertisement
ಅಫಜಲಪುರ ತಾಲೂಕು ಸುಕ್ಷೇತ್ರ ಚಿನ್ಮಯಗಿರಿ-ಚೌಡಾಪುರ ಮಹಾಂತೇಶ್ವರ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿ ತದನಂತರ ನಡೆದ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
Related Articles
Advertisement
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಮಠದಲ್ಲಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಕೈಲಾಸವೇ ಧರೆಗಿಳಿದಿದೆ. ಮಾನವರಾಗಿ ಹುಟ್ಟಿದ್ದು ನಮ್ಮ ಪುಣ್ಯ. ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕಿರಿಯ ಶ್ರೀಗಳು ಎಲ್ಲ ಭಕ್ತರೊಂದಿಗೆ ಸೌಹಾರ್ದಯುತವಾಗಿ ಸಾಗುವರು ಎಂಬ ಭರವಸೆ ನನಗಿದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ವೈ ಪಾಟೀಲ ಮಾತನಾಡಿ, ಮಹಾಂತೇಶ್ವರ ಮಠ ಭವ್ಯ ಪರಂಪರೆ ಒಳಗೊಂಡಿದೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಚಿನ್ಮಯಗಿರಿ ಹಿರಿಯ ಶ್ರೀ ಸಿದ್ದರಾಮ ಶಿವಾಚಾರ್ಯರು, ನಮ್ಮ ಮಠಕ್ಕೆ ಭಕ್ತರೇ ಆಸ್ತಿಯಾಗಿದ್ದಾರೆ ಎಂದು ಹೇಳಿದರು. ಮಠದ ನೂತನ ಪೀಠಾ ಧಿಪತಿ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ನಾನು ಮಠದ ಅಧಿಪತಿಯಲ್ಲ. ಭಕ್ತರ ನಿಷ್ಠಾವಂತ ಸನ್ಯಾಸಿ. ಭಕ್ತರೇ ಮಠದ ಆಸ್ತಿ ಎಂದು ಹೇಳಿದರು. ಮೈಸೂರಿನ ಪಂಡಿತಾರಾಧ್ಯ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಮಾತನಾಡಿದರು.
ಅಳ್ಳಗಿಯ ಶಾಂತಲಿಂಗ ಶಿವಾಚಾರ್ಯರು, ಮೈಂದರ್ಗಿಯ ನೀಲಕಂಠ ಶಿವಾಚಾರ್ಯರು, ನೀಲೂರಿನ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಂಬರ್ಗಾದ ನೀಲಕಂಠ ಶಿವಾಚಾರ್ಯರು, ಹುಲ್ಯಾಳದ ಹರ್ಷಾನಂದ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಮಸ್ಕಿ ವರರುದ್ರ ಮಹಾಸ್ವಾಮಿಗಳು, ಆಳಂದದ ಸಿದ್ದೇಶಶ್ವರ ಶಿವಾಚಾರ್ಯರು, ಆಲಮಟ್ಟಿಯ ಡಾ| ರುದ್ರಮುನಿ ಮಹಾಸ್ವಾಮಿಗಳು, ಮೈಸೂರಿನ ಕೀರ್ತಿ ಪ್ರಭು ಸ್ವಾಮಿಗಳು, ಮಾಶಾಳದ ಕೇದಾರ ದೇವರು, ಕೊಳ್ಳೂರಿನ ಮೃತ್ಯುಂಜಯ ದೇವರು ಪಾಲ್ಗೊಂಡಿದ್ದರು.
ಜಿಪಂ ಸದಸ್ಯ ಸುಮೀತ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಮುಖಂಡರಾದ ಬಿ.ವೈ. ಪಾಟೀಲ, ಶಿವಪುತ್ರಪ್ಪ ಕರೂರ, ಶಿವಶರಣಪ್ಪ ಹೀರಾಪುರ, ಶಿವಶರಣಪ್ಪ ಸಿರಿ, ಸಿದ್ದು ಸಿರಸಗಿ, ದೇವೇಂದ್ರ ಜಮಾದಾರ, ಮಹಾಂತಪ್ಪ ಅವರಾದ, ಗೌಡಪ್ಪಗೌಡ ಬಿರಾದಾರ, ಯಲ್ಲಣಗೌಡ ಪಾಟೀಲ, ಚಂದ್ರಶಾ ಜಮಾದಾರ, ಯಲ್ಲಪ್ಪ ಗಂಡೋಳಿ, ಶಿವಶರಣಪ್ಪ ಮಾಸ್ತರ ಇದ್ದರು. ಮಲ್ಲಿನಾಥ ಪಾಟೀಲ ಚಿಣಮಗೇರಾ ಸ್ವಾಗತಿಸಿದರು. ಡಾ| ಎಂ.ಎಸ್. ಜೋಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದರಗಿ ಅಮರಸಿದ್ದೇಶ್ವರ ಮಹಾಸ್ವಾಮಿಗಳು ನಿರೂಪಿಸಿದರು.