Advertisement

ಯಾದಗಿರಿ; ತಡೆಗೋಡೆಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು ತಪ್ಪಿದ ಭಾರೀ ಅನಾಹುತ

10:18 AM Nov 21, 2019 | Suhan S |

ಯಾದಗಿರಿ :  ಯೂರಿಯಾ ತುಂಬಿದ್ದ ಗೂಡ್ಸ್  ರೈಲು ವೊಂದು ನಿಲ್ದಾಣದ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಯಾದಗಿರಿಯಲ್ಲಿ ನಡೆದಿದೆ.

Advertisement

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಯೂರಿಯಾ ತುಂಬಿದ್ದ ಗೂಡ್ಸ್ ರೈಲು  ನಿಲ್ದಾಣದ ತಡೆಗೋಡೆಗೆ ಡಿಕ್ಕಿ ಹೊಡಿದಿದೆ. ರೈಲಿನ ರಭಸಕ್ಕೆ   ಗೋಡೆಯ ಪಕ್ಕದಲ್ಲಿದ್ದ ಚಿಲ್ಲರೆ ವಾಣಿಜ್ಯ ಮಳಿಗೆ ಸ್ಥಳದಿಂದ 5-6 ಅಡಿ ಸರಿದಿದೆ.  ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾರ್ಡ್ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ  ಎನ್ನಲಾಗಿದೆ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next