Advertisement

ದಿ ಗೋಲ್ಡನ್‌ ಸ್ಟಾರ್‌ ಆಫ್ ಇಂಡಿಯನ್‌ ಸಿನಿಮಾ

03:15 PM Sep 22, 2017 | |

ಗಣೇಶ್‌ ಅಭಿನಯದ “ಚಮಕ್‌’ ಚಿತ್ರತಂಡವು ಇತ್ತೀಚೆಗೆ ಇಟಲಿಯಲ್ಲಿ ಹಾಡುಗಳ ಚಿತ್ರೀಕರಣ ಮಾಡಿ ಮುಗಿಸಿಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಹೊಸ ವಿಷಯವೆಂದರೆ, ಆ ಚಿತ್ರದ ಚಿತ್ರೀಕರಣ ಕುರಿತಾದ ವರದಿಯೊಂದು ಇಟಲಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದು, ಆ ವರದಿಯ ತುಣುಕೊಂದು ವೈರಲ್‌ ಆಗಿಬಿಟ್ಟಿದೆ.

Advertisement

ಹೌದು, “ಚಮಕ್‌’ ಚಿತ್ರದ ಹಾಡುಗಳ ಚಿತ್ರೀಕರಣ ಕುರಿತಾಗಿ ಇಟಾಲಿಯನ್‌ ಪತ್ರಿಕೆಯೊಂದು ವರದಿ ಮಾಡಿದೆ. ಅದು ಈಗ ಟ್ವಿಟರ್‌ನಲ್ಲಿ ಜೋರಾಗಿ ಹವಾ ಎಬ್ಬಿಸುತ್ತಿದೆ. ಈ ವರದಿಯಲ್ಲಿ ಗಣೇಶ್‌ ಅವರ ಫೋಟೋ ಸಹ ಪ್ರಕಟವಾಗಿದೆ. ಅದು ಬಿಟ್ಟರೆ,  ಆ ವರದಿಯಲ್ಲಿ ಏನು ಪ್ರಕಟವಾಗಿದೆ ಎಂಬ ವಿಷಯವನ್ನು ಪತ್ತೆ ಮಾಡುವುದು ಕಷ್ಟ.

ಅದಕ್ಕೆ ಕಾರಣ ಭಾಷಾ ಸಮಸ್ಯೆ. ಆದರೂ ವರದಿಯ ಹೆಡ್‌ಲೈನ್‌ನ ಅನುವಾದ ಮಾಡಿದರೆ, ದಿ ಗೋಲ್ಡನ್‌ ಸ್ಟಾರ್‌ ಆಫ್ ಇಂಡಿಯನ್‌ ಸಿನಿಮಾ ಎಂದಿದೆ. ಗಣೇಶ್‌ ಅವರ ಚಿತ್ರದ ಕುರಿತು ಇಟಾಲಿಯನ್‌ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿರುವುದು ಇದು ಮೊದಲೇನಲ್ಲ.

ಇದಕ್ಕೂ ಮುನ್ನ, “ಜೂಮ್‌’ ಚಿತ್ರದ ಚಿತ್ರೀಕರಣದಲ್ಲಿ ಚಿತ್ರತಂಡವು ಇಟಲಿಗೆ ಹೋದ ಸಂದರ್ಭದಲ್ಲೂ ಅಲ್ಲಿನ ಪತ್ರಿಕೆಯೊಂದು ಗಣೇಶ್‌ ಮತ್ತು ರಾಧಿಕಾ ಪಂಡಿತ್‌ ಇರುವ ಫೋಟೋವೊಂದು ಪ್ರಕಟಿಸಿತ್ತು. ಈಗ ಎರಡನೆಯ ಬಾರಿಗೆ ಗಣೇಶ್‌ ಅಭಿನಯದ ಚಿತ್ರ ಇಟಾಲಿಯನ್‌ ಪತ್ರಿಕೆಯಲ್ಲಿ ಗಣೇಶ್‌ ಅಭಿನಯದ ಸಿನಿಮಾದ ಕುರಿತು ವರದಿ ಪ್ರಕಟವಾಗಿದೆ.

Advertisement

ಅಂದಹಾಗೆ, “ಚಮಕ್‌’ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ಚಂದ್ರಶೇಖರ್‌ ನಿರ್ಮಿಸುತ್ತಿದ್ದು, “ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ’ ಖ್ಯಾತಿಯ ಸುನಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇನ್ನು ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ಜೊತೆಗೆ ಸಾಧು ಕೋಕಿಲ, ಸುಮಿತ್ರ, ಮಂಡ್ಯ ಜಯರಾಂ ಮುಂತಾದವರು ನಟಿಸುತ್ತಿದ್ದಾರೆ. ಜೂಡಾ ಸ್ಯಾಂಡಿ ಸಂಗೀತವಿರುವ ಈ ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next