Advertisement

“ಆರೆಂಜ್’ನಲ್ಲಿ ಗೋಲ್ಡನ್ ಗುಣಗಾನ: Watch

03:37 PM Oct 30, 2018 | Team Udayavani |

ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ “ಆರೆಂಜ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಆರೆಂಜ್ ಆರೆಂಜ್’ ಎಂಬ ಮೊದಲ‌‌ ಲಿರಿಕಲ್ ವಿಡಿಯೋ ಸಾಂಗ್​ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಕಂಪ್ಲೀಟ್ ಗಣೇಶ್ ಹುಟ್ಟಿ, ಬೆಳೆದ ಊರಿನಿಂದ ಹಿಡಿದು, ಸದ್ಯ ಗೋಲ್ಡನ್ ಸ್ಟಾರ್ ಆಗಿ ಮೆರೆಯುತ್ತಿರುವುದರ ಗುಣಗಾನ ಮಾಡಲಾಗಿದೆ.

Advertisement

ಕವಿರಾಜ್ ಸಾಹಿತ್ಯವಿರುವ ಹಾಡಿಗೆ ನಿರ್ದೇಶಕ ಎಸ್.ಎಸ್.ತಮನ್ ಮ್ಯೂಸಿಕ್ ನೀಡಿದ್ದಾರೆ. ಈ ಸಾಂಗ್​​ನಲ್ಲಿ ಗಣಿ ಗೋಲ್ಡನ್ ಕಲರ್‌ ಕಾಸ್ಟೂಮ್​​​​ನಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ “ಜೂಮ್’ ನಿರ್ದೇಶಕ ಪ್ರಶಾಂತ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಗಣೇಶ್ ಜೊತೆಗೆ ಇದು ಎರಡನೇ ಸಿನಿಮಾ.

ಅಲ್ಲದೇ “ಜೂಮ್’ ಚಿತ್ರಕ್ಕೆ ಸಂಗೀತ ನೀಡಿದ್ದ ತಮನ್ ಅವರೇ ಈ ಚಿತ್ರಕ್ಕೆ ಮ್ಯೂಸಿಕ್ ಸಂಯೋಜಿಸಿದ್ದು. ನವೀನ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಗಣೇಶ್ ಎದುರಿಗೆ “ರಾಜಕುಮಾರ’ ಚಿತ್ರದ ಪ್ರಿಯಾ ಆನಂದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ “ಆರೆಂಜ್’ ಚಿತ್ರದ ಟ್ರೈಲರ್ ಸ್ವಲ್ಪ ದಿನಗಳಲ್ಲೇ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next