Advertisement

ಕೆರೆ ಅಂಗಳದಲ್ಲಿ 35ಸಾವಿರ ಗಿಡ ನೆಡುವ ಗುರಿ; ಗಂಗಾಧರ್‌ ರೈ

06:13 PM Jun 16, 2022 | Team Udayavani |

ಚನ್ನರಾಯಪಟ್ಟಣ: ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ 300 ಕೆರೆಯ ಅಂಗಳದಲ್ಲಿ 35 ಸಾವಿರ ಗಿಡಗ ಳನ್ನು ನೆಡುವ ಗುರಿ ಹೊಂದಿದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಂಗಾಧರ್‌ ರೈ ತಿಳಿಸಿದರು.

Advertisement

ತಾಲೂಕಿನ ದೊಡ್ಡೇರಿ ಗ್ರಾಮದ ಕೆರೆ ಅಂಗಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಪರಿಸರ ಸಂರಕ್ಷಣೆ ಯಿಂದ ನಮಗೆ ಶುದ್ಧವಾದ ಗಾಳಿ ದೊರೆಯುತ್ತಿದೆ ಕೊರೊನಾ ವೇಳೆ ಈ ಬಗ್ಗೆ ಜನರಿಗೆ ತಿಳಿದಿದ್ದರೂ ಪರಿಸರು ಉಳಿಸಲು ಮುಂದಾ ಗುತ್ತಿಲ್ಲ, ಕೊರೊನಾ ಸಮಯದಲ್ಲಿ ಅನೇಕ ಮಂದಿ ಉಸಿ ರಾಟದ ತೊಂದರೆಯಿಂದ ಮೃತಪಟ್ಟಿ ದ್ದು ಎಚ್ಚೆತ್ತುಕೊಳ್ಳದೆ ಇದರುವುದು ದುರದೃಷ್ಟಕರ ಸಂಗತಿ ಎಂದರು.

ವಾಯುಮಾಲಿನ್ಯ ಹೆಚ್ಚಿದೆ: ಮಹಾನಗರದಲ್ಲಿ ಇಂದಿಗೂ ಶುದ್ಧಗಾಳಿ ಸಿಗುತ್ತಿಲ್ಲ. ಗ್ರಾಮೀಣ ಭಾಗ ದಲ್ಲಿಯೂ ವಾಯುಮಾಲಿನ್ಯವಾಗುತ್ತಿದೆ. ಇದನ್ನು ತಪ್ಪಿಸಲು ಗಿಡ ನೆಟ್ಟು ಪೋಷಣೆ ಮಾಡದೆ ಹೋದರೆ ಮುಂದೆ ಗಂಡಾಂ ತರ ಕಾದಿದೆ. ನಮ್ಮ ಮಕ್ಕಳು ಮೊಮ್ಮಕ್ಕಳಿಗಾಗಿಯಾದರು ಪರಿಸರ ಉಳಿಸುವುದು, ಸರ್ಕಾರಿ ಭೂಮಿ ಹಾಗೂ ರಸ್ತೆ ಬದಿಯಲ್ಲಿ ಗಿಡ ನೆಡುವುದನ್ನು ನಾವು ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.

ಕೆರೆ ಅಂಗಳದಲ್ಲಿ ಗಿಡ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ತಮ್ಮ ಇಡೀ ಜೀವನವನ್ನು ಮರಗಿಡಗಳನ್ನು ಬೆಳೆಸಲು ಮುಡಿಪಾಗಿಟ್ಟಿದ್ದರು. ಅವರ ವೃಕ್ಷಸೇವೆ ಎಲ್ಲರೂ ಮೆಚ್ಚುವಂತಹದ್ದು. ಅವರು ಮಾಡಿದ ಸಾಧನೆಯ ಶೇ.5ರಷ್ಟನ್ನು ನಾವು ಮಾಡಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮದ ಕೆರೆಯ ಅಂಗಳದಲ್ಲಿ ಗಿಡ ನೆಡಲು ವಿರೇಂದ್ರ ಹೆಗ್ಗಡೆ ಸೂಚಿಸಿದ್ದಾರೆ ಇನ್ನು ಯೋಜನೆ ಪಾಲಿಸುತ್ತಿದೆ ಎಂದರು.

ಉತ್ತಮ ಸಮಾಜ ನಿರ್ಮಾಣ: ರೈತಮುಖಂಡ ದೊಡ್ಡೇರಿ ಶ್ರೀಕಂಠ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖೀ ಚಿಂತನೆಯನ್ನು ಪ್ರತಿ ಯೋರ್ವ ಮಠಾಧೀಶರು ಪಾಲನೆ ಮಾಡಿದರೆ ಸಮಾಜದಲ್ಲಿ ಅನೇಕ ಬದಲಾವಣೆಗಳು ತರುವು ದಲ್ಲದೆ, ಉತ್ತಮ ಸಮಾಜ ನಿರ್ಮಾಣ ಆಗಲಿದೆ. ಕೆರೆಗಳ ಸಂರಕ್ಷಣೆ ಜೊತೆಗೆ ಪರಿಸರದ ಸಂರಕ್ಷಣೆಗೂ ಯೋಜನೆಯ ಮೂಲಕ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ ಎಂದರು.

Advertisement

ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಮಹಾ ಬಲ ಕುಲಾಲ್‌, ಮಟ್ಟನಲೆ ಗ್ರಾ ಪಂ ಅಧ್ಯಕ್ಷೆ ಜಯ ಲಕ್ಷ್ಮಮ್ಮ, ಸದಸ್ಯೆ ರೂಪಾ, ದೊಡ್ಡೇರಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರದೀಪ್‌, ಉಪಾಧ್ಯಕ್ಷ ನಂಜೇಶ್‌ಗೌಡ, ಜನಜಾಗೃತಿ ವೇದಿಕೆ ಸದಸ್ಯ ಜಯ ರಾಮ್‌, ತಾಲೂಕು ಯೋಜನಾಧಿಕಾರಿ ಸುನೀತ ನಾಯಕ್‌, ಸದಾಶಿವ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next