ಮಡಿಕೇರಿ: ಹಸಿರು ಪರಿಸರದ ಪುಟ್ಟ ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯಕ್ಕೆ 1.61 ಲಕ್ಷ ವಾಹನಗಳು ನೋಂದಣಿ ಯಾಗಿರುವುದಲ್ಲದೆ, ಪ್ರಾದೇಶಿಕ ಸಾರಿಗೆ ಇಲಾಖೆ 51.52 ಕೋಟಿ ರಾಜಸ್ವ ಸಂಗ್ರಹಿಸುವ ಮೂಲಕ ಶೇ. 118.44ರಷ್ಟು ಗುರಿ ಮೀರಿದ ಸಾಧನೆ ಮಾಡಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳೆದ 2016-17 ನೇ ಸಾಲಿನಲ್ಲಿ ನೀಡಲಾಗಿದ್ದ 47.50 ಕೊಟಿ ರಾಜಸ್ವ ಸಂಗ್ರಹದ ಗುರಿ ಮೀರಿದ ಸಾಧನೆ ದಾಖಲಾ ಗುವುದಕ್ಕೆ ವಾಹನ ಖರೀದಿಯತ್ತ ಜಿಲ್ಲೆಯ ಜನತೆ ಹೆಚ್ಚಿನ ಆಸಕ್ತಿ ತೋರಿರುವುದು ಕಾರಣವಾಗಿದೆ.
ಮೈಸೂರು ವಿಭಾಗಕ್ಕೆ ಒಳಪಟ್ಟಿರುವ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮಡಿಕೇರಿ ಕಚೇರಿ ರಾಜಸ್ವ ಸಂಗ್ರಹದಲ್ಲಿ ಪ್ರಥಮ ಸ್ಥಾನದಲ್ಲಿದೆಯೆಂದು ಮಡಿಕೇರಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಫೆಲಿಕ್ಸ್ ಡಿ’ಸೋಜಾ ತಿಳಿಸಿದ್ದಾರೆ.
ಕಳೆದ ಆರ್ಥಿಕ ಸಾಲಿನಲ್ಲಿ ಖರೀದಿಸಿದ ವಾಹನ ಗಳಲ್ಲಿ 75ಸಿಸಿಯಿಂದ 300 ಸಿಸಿ ವರೆಗಿನ ದ್ವಿಚಕ್ರ ವಾಹನಗಳ ಪ್ರಮಾಣವೇ 71,459ರಷ್ಟಿದೆ.ಜಿಲ್ಲೆಯ ಜನತೆಯಲ್ಲಿ ವಾಹನಗಳ ಖರೀದಿಯ ಆಸಕ್ತಿ ಹೆಚ್ಚುತ್ತಿರುವ ಅಂಶ ಈ ಅಂಕಿ ಅಂಶಗಳಲ್ಲಿ ಕಾಣಿಸುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಕೊಡಗಿನಲ್ಲಿ 9,024 ನೂತನ ವಾಹನಗಳು ರಸ್ತೆಗಿಳಿದಿವೆ. ಕಳೆದ 2016ರಲ್ಲಿ ಜಿಲ್ಲೆಯಲ್ಲಿ 1,51,975 ವಾಹನಗಳಿದ್ದರೆ, ಕಳೆೆದ ಮಾರ್ಚ್ ಅಂತ್ಯಕ್ಕೆ ಇದು 1,60,999ಕ್ಕೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿಯುತ್ತಿರುವ ಹಿನ್ನೆಲೆಯಲ್ಲಿ ಪುಟ್ಟ ಜಿಲ್ಲೆಯ ಅಗಲ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹಿಂದೆಂದಿಗಿಂತಲೂ ಹೆಚ್ಚಿರುವುದನ್ನು ಕಾಣಬಹುದು.
ವಾಹನಗಳ ಸಂಖ್ಯೆ: ಕೊಡಗು ವ್ಯಾಪ್ತಿಯಲ್ಲಿ 77ಸಿಸಿವರೆಗಿನ 2,550, 75ಸಿಸಿಯಿಂದ 300 ಸಿಸಿ ವರೆಗಿನ 71,495, 300 ಸಿಸಿ ಅನಂತರದ 494 ಮೋಟಾರ್ ಸೈಕಲ್‌ಗಳಿದ್ದು, 38,692 ಮೋಟಾರ್ ಕಾರುಗಳು, 6,302 ಜೀಪುಗಳು, 8,939 ಆಟೋ ರಿûಾಗಳು, 1,403 ಮೋಟಾರ್ ಕ್ಯಾಬ್‌ಗಳು, 6,846 ಆಮ್ನಿ ಬಸ್‌ಗಳು, 162 ಬಸ್Õಗಳು, 49 ಕಾಂಟ್ರಾಕ್ಟ್ ಕ್ಯಾರೇಜ್‌ಗಳು, 7,163 ಸರಕು ವಾಹನಗಳು, 2,556 ಟ್ರಾÂಕ್ಟರ್‌ಗಳು, 4,654 ಟ್ರೆçಲರ್‌ಗಳು, 4 ಡಂಪರ್‌ಗಳು, 43 ಬುಲ್ಡೋಜರ್‌ಗಳು, 49 ಟಿಪ್ಪರ್‌ಗಳು, 3213 ಟಿಲ್ಲರ್‌ಗಳು, 1,031 ಡೆಲಿವರಿ ವ್ಯಾನ್‌ಗಳು, 42 ಆಂಬ್ಯುಲೆನ್ಸ್‌ಗಳು, 496 ಮ್ಯಾಕ್ಸಿ ಕ್ಯಾಬ್‌ಗಳು, 13ಟ್ಯಾಂಕರ್‌ಗಳು, 426 ಇತರ ವಾಹನಗಳಿವೆ.
ದಂಡ ವಸೂಲಾತಿ
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕಳೆದ ಆರ್ಥಿಕ ಸಾಲಿನಲ್ಲಿ 1,439 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 288 ವಾಹನಗಳಿಗೆ ತನಿಖಾ ವರದಿ ನೀಡಲಾಗಿದೆ. ಅಲ್ಲದೆ 1,133 ವಾಹನಗಳಿಂದ ಸುಮಾರು 1.30 ಕೋಟಿ ರೂ.ಗಳ ತೆರಿಗೆ ಹಾಗೂ 22.13 ಲಕ್ಷ ರೂ.ಗಳ ದಂಡ ಸೇರಿದಂತೆ ಒಟ್ಟು 1.52 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವಸೂಲು ಮಾಡಲಾಗಿದೆಯೆಂದು ಫೆಲಿಕ್ಸ್ ಡಿಸೋಜಾ ಮಾಹಿತಿ ಒದಗಿಸಿದ್ದಾರೆ.
ಸಿಬಂದಿಗಳ ಕೊರತೆ
ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ಒಟ್ಟು 36 ಹುದ್ದೆಗಳಲ್ಲಿ ಕೇವಲ 16 ಸಿಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಪ್ರಮುಖವಾದ ಖಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯೇ ಇಲ್ಲಿ ಖಾಲಿಯಾಗಿದೆ. ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪ್ರಭಾರವಾಗಿ ಇಲ್ಲಿನ ಜವಾಬ್ದಾರಿಯನ್ನು ವಹಿಸಲಾಗಿದೆ.
ವಿಪರ್ಯಾಸವೆಂದರೆ, ಸಾರಿಗೆ ಇಲಾಖೆಗೆ ಆದಾಯವನ್ನು ತಂದು ಕೊಡುವ ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗಳೇ ಖಾಲಿ ಇವೆ. ಕಚೇರಿಯಲ್ಲಿ 4 ವಾಹನ ನಿರೀಕ್ಷಕರಿರಬೇಕಿದ್ದರೂ, ಇದೀಗ ಎಲ್ಲ ಹುದ್ದೆಗಳು ಖಾಲಿಯಾಗಿವೆ. ಸರ್ಕಾರ ಗಮನ ಹರಿಸಿ ಕೊರತೆಯನ್ನು ತುಂಬುವ ಅಗತ್ಯವಿದೆ.