Advertisement

ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ  ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ   ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವ ಅನಾವರಣಗೊಳ್ಳಲಿದೆ. ಹಂಪಿಯ ಕೇಂದ್ರಬಿಂದುವಾದ ಉಗ್ರ ನರಸಿಂಹ, ಅದರ ಹಿಂಭಾಗದಲ್ಲಿ ಭಗವಾನ್‌ ಹನುಮನ ಜನ್ಮ ಸ್ಥಳವೆನ್ನಲಾದ ಅಂಜನಾದ್ರಿ ಬೆಟ್ಟ, ಅದರ ಮಗ್ಗುಲಿಗೆ  ಸಾಮ್ರಾಟ ಕೃಷ್ಣದೇವರಾಯನಿಗೆ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭದ ಶ್ರೀಮಂತಿಕೆ ಸ್ತಬ್ಧಚಿತ್ರದಲ್ಲಿ ಮೈದಳೆದಿದೆ.

Advertisement

ಸಾಮಾನ್ಯವಾಗಿ ಸ್ತಬ್ಧಚಿತ್ರದೊಂದಿಗೆ 30 ಕಲಾವಿದರು ನೇರ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ ಕೋವಿಡ್‌ ಕಾರಣಕ್ಕೆ ಈ ಬಾರಿ 12 ಮಂದಿಗೆ ಸೀಮಿತಗೊಳಿಸಲಾಗಿದೆ. ಶಿವಮೊಗ್ಗ ರಂಗಾಯಣದ 12 ವೃತ್ತಿಪರ ಕಲಾವಿದರು (8 ಕಲಾವಿದರು, 4 ಕಲಾವಿದೆಯರು) ಸ್ತಬ್ಧಚಿತ್ರ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಾ ನಿರ್ದೇಶಕ ಶಶಿಧರ ಅಡಪ ನೇತೃತ್ವದ ತಂಡ ಸ್ತಬ್ಧಚಿತ್ರದ ವಿನ್ಯಾಸ ರೂಪಿಸಿದ್ದು, 100ಕ್ಕೂ ಹೆಚ್ಚು ಕುಶಲಕರ್ಮಿಗಳು, ಸಹಾಯಕರು, ತಂತ್ರಜ್ಞರು 40 ದಿನ ನಿರಂತರವಾಗಿ ಕಾರ್ಯನಿರ್ವಹಿಸಿ ಅಂತಿಮ ರೂಪ ನೀಡಿದ್ದಾರೆ.

ವಿಶೇಷಗಳೇನು? :

ಸ್ತಬ್ಧಚಿತ್ರದಲ್ಲಿ ಕತ್ತಿ- ಗುರಾಣಿ ಹಿಡಿದ ಮಹಿಳಾ ಯೋಧರಿಗೆ ಅವಕಾಶ ನೀಡಲಾಗಿದೆ. ಜತೆಗೆ ಚಾಮರ ಹಿಡಿದ ಪುರುಷರಿರಲಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಯೋಧರಿದ್ದರೆಂಬ ಕಾರಣಕ್ಕೆ ಮಹಿಳಾ ಯೋಧರಿಗೆ  ಮಹತ್ವ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next