Advertisement
ಇದೇನಪ್ಪಾ…? ಜಾದೂಗಾರರು ಮ್ಯಾಜಿಕ್ ಹೇಳಿಕೊಡೋದು ಬಿಟ್ಟು ಪವಾಡ ಕಥೆ ಹೇಳ್ತಿದ್ದಾರಲ್ಲಾ ಅಂತ ಅಂದುಕೊಳ್ಳಬೇಡಿ. ನಮ್ಮ ಸಮಾಜದಲ್ಲಿ ಕೆಲವರು ಮ್ಯಾಜಿಕ್ ಮೂಲಕ ಅಮಾಯಕರಿಗೆ ಹೇಗೆ ಮಂಕುಬೂದಿ ಎರಚುತ್ತಾರೆ ಎಂಬುದಕ್ಕೆ ಉದಾಹರಣೆಯಿದು. ಆ ಮ್ಯಾಜಿಕ್ಕನ್ನೇ ಅಮಾಯಕ ಜನರು ಪವಾಡ ಎಂದು ನಂಬುತ್ತಾರೆ. ಈ ಮ್ಯಾಜಿಕ್ಕನ್ನು ನೀವೂ ಕಲಿಯಬಹುದು.
ಮಂತ್ರವಾದಿಯು ಬಳಸುವ ತೆಂಗಿನಕಾಯಿ ಆತ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದುದಾಗಿತ್ತು. ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ಐದಾರು ದಿನಗಳ ಕಾಲ ಸುಣ್ಣದ ತಿಳಿನೀರಲ್ಲಿ ನೆನೆಹಾಕಿ, ಚೆನ್ನಾಗಿ ಒಣಗಿಸಬೇಕು. ನಂತರ, ಅದರ ಮೇಲೆ ನೀರನ್ನು ಚಿಮುಕಿಸಿದಾಗ ಅದು ತನ್ನಷ್ಟಕ್ಕೇ ಒಡೆದು ಹೋಗುತ್ತದೆ. ಅದರ ಹಿಂದಿರುವುದು ವಿಜ್ಞಾನ, ಮಾಯಾ ತಂತ್ರವಲ್ಲ! ಇದೇ ಮಂತ್ರವಾದಿಯ ಕುತಂತ್ರ! ಉದಯ್ ಜಾದೂಗಾರ್