Advertisement

2021-22ರಲ್ಲಿ ತೆರೆಯಲಿದೆ ಬಾಲಕಿಯರ ಸೈನಿಕ್‌ ಶಾಲೆ

10:25 AM Oct 20, 2019 | sudhir |

ಹೊಸದಿಲ್ಲಿ: 2021-22ನೇ ಸಾಲಿನಲ್ಲಿ ಬಾಲಕಿಯರ ಸೈನಿಕ್‌ ಶಾಲೆಯನ್ನು ತೆರಯಲ್ಲಿದ್ದು, ಇನ್ನು ಮುಂದೆ ಹುಡುಗಿಯರಿಗೂ ಸೇನಾ ತರಬೇತಿಯನ್ನು ನೀಡಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಹೇಳಿದ್ದಾರೆ.

Advertisement

ಸಮಾನತೆಯನ್ನು ಒಸಗಿಸಬೇಕೆಂಬ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿರುವ ರಕ್ಷಣಾ ಸಚಿವರು,ಸೈನಿಕ್‌ ಶಾಲೆಯಲ್ಲಿ ಹುಡುಗಿಯರಿಗೂ ಪ್ರವೇಶಾತಿ ನೀಡಬೇಕೆಂಬ ಪ್ರಸ್ತಾವನೆಯನ್ನು ಅಂಗೀಕರಿಸಿದ್ದಾರೆ.

ಮೀಜೋರಾಮ್‌ ಪೈಲೆಟ್‌ ಯೋಜನೆಯ ಯಶಸ್ಸಿನ ಬಳಿಕ ಈ ಪ್ರಸ್ತಾವನೆಯನ್ನು ಅಂಗೀಕಾರ ಮಾಡಿದ್ದು, ಎರಡು ವರ್ಷಗಳ ಹಿಂದೆ ಮಿಜೋರಾಮ್‌ನ ಚಿಂಗ್‌ಶಿಪ್‌ ಪ್ರದೇಶದಲ್ಲಿ ಸೈನಿಕ ತರಬೇತಿ ಶಾಲೆಯಲ್ಲಿ ಹುಡುಗಿಯರ ನೇಮಾಕಾತಿ ಪ್ರತಿಕ್ರಿಯೆಯನ್ನು ಆರಂಭಿಸಲಾಗಿತ್ತು.

ಇನ್ನು ಹುಡುಗಿಯರಿಗೂ ಸೈನಿಕ್‌ ಶಾಲೆಯ ಬಾಗಿಲನ್ನು ತೆರವುಗೊಳಿಸಿರುವ ರಕ್ಷಣಾ ಸಚಿವರು ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪೂರೈಸುವುದರೊಂದಿಗೆ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next