Advertisement

ತಂದೆಯನ್ನು ನೋಡಿ ಮಗನಿಗೆ ಹೆಣ್ಣು ಕೊಟ್ಟಿದ್ದು 2004 ರಲ್ಲಿ : ಬಿಜೆಪಿ ವ್ಯಂಗ್ಯ

09:44 PM Apr 05, 2019 | Team Udayavani |

ಶಿರ್ವ: ಉಡುಪಿ ಜಿಲ್ಲೆಯ ಮತದಾರರು ತಂದೆಯನ್ನು ನೋಡಿ ಮಗನಿಗೆ ಹೆಣ್ಣು ಕೊಟ್ಟ ರೀತಿಯಲ್ಲಿ ಮತದಾನ ಮಾಡಿ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸಿದ್ದು 2004 ಲೋಕಸಭಾ ಚುನಾವಣೆಯಲ್ಲಿ ಎಂದು ಬಿಜೆಪಿ ನೆನಪಿಸಿದೆ.

Advertisement

ಲೋಕಸಭಾ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರ ಧೂರ್ತತನದ ಪತ್ರಿಕಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ ಅವರು ಮಹಾನ್‌ ಮುತ್ಸದ್ಧಿ ಅಟಲ್‌ ಬಿಹಾರಿ ವಾಜಪೇಯಿಯವರ 1999 – 2004 ರ ಅವಧಿಯ ಆಳ್ವಿಕೆಯನ್ನು ಅನುಭವಿಸಿದ ಜಿಲ್ಲಾ ಮತದಾರರು ವಾಜಪೇಯಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಕಾಣುವುದಕ್ಕಾಗಿ 1994ರಿಂದ ರಾಜಕೀಯ ಅಜ್ಞಾತವಾಸದಲ್ಲಿದ್ದ ಕಾಂಗ್ರೆಸ್‌ ಮೂಲದ ಮಹಿಳಾ ರಾಜಕಾರಣಿಯೋರ್ವರನ್ನು ಬಿಜೆಪಿಯಿಂದ ಭರ್ಜರಿಯಾಗಿ ಗೆಲ್ಲಿಸುವ ಮೂಲಕ ತಂದೆಯನ್ನು ನೋಡಿ ಮಗನಿಗೆ ಹೆಣ್ಣು ಕೊಡುವ ಗಾದೆಗೆ ದೃಷ್ಠಾಂತವಾದರು ಎಂದು ಶಿರ್ವ ಬಿಜೆಪಿ ಶಕ್ತಿಕೇಂದ್ರದ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ವ್ಯಂಗ್ಯವಾಡಿದರು.

2004ರಲ್ಲಿ ಗೆದ್ದ ಉಡುಪಿ ಲೋಕಸಭಾ ಕ್ಷೇತ್ರದ ಸಂಸದರು ಜನ ಪ್ರತಿನಿಧಿಯೋರ್ವರ ನಿಷೀಯತೆಗೆ ಹೊಸ ವ್ಯಾಖ್ಯೆ ಬರೆದರಲ್ಲದೆ, ಮನಮೋಹನ್‌ ಸಿಂಗ್‌ ಸರಕಾರದ ವಿರುದ್ಧವಾಗಿ ಮತ ಚಲಾಯಿಸಿ ಯುಪಿಎ – 1 ಸರಕಾರವನ್ನು ಉಳಿಸುವಲ್ಲಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಗಿರಿಧರ ಪ್ರಭು, ರಾಜೇಶ್‌ ನಾಯ್ಕ, ಸುಂದರ ಪ್ರಭು, ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next