Advertisement

“ಯಕ್ಷಕಲೆ ಮೂಲಸ್ವರೂಪಕ್ಕೆ ಧಕ್ಕೆಯಗದಂತೆ ನೋಡಬೇಕು’

01:30 AM Jan 17, 2019 | Harsha Rao |

ತೆಕ್ಕಟ್ಟೆ: ಯಕ್ಷಗಾನ ಕಲೆಯಲ್ಲಿ ಎಷ್ಟೇ ಬದಲಾವಣೆ ತಂದರೂ ಒಳ್ಳೆಯದು ಮಾತ್ರ ಉಳಿದು ಕೊಳ್ಳುತ್ತದೆ. ಯಕ್ಷ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ನೋಡಿಕೊಳ್ಳಬೇಕಾಗಿದೆ. ಸರ್ವಮಾನ್ಯ ಯಕ್ಷಕಲೆಯನ್ನು ಜೀವಂತಗೊಳಿಸುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕಾಗಿದೆ ಎಂದು ಪ್ರಾಚಾರ್ಯ ಕೆ.ಪಿ. ಹೆಗ್ಡೆ ಹೇಳಿದರು
ಅವರು ಜ. 14ರಂದು ಛಾಯಾತ್ಮಜ ಗೆಳೆಯರ ಬಳಗ ಕೊಮೆ ಪ್ರಾಯೋಜನೆಯಲ್ಲಿ ಲೋಹಿತ್‌ ಬಳಗ ಕೊಮೆ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಯಶಸ್ವಿ ಕಲಾವೃಂದದ ಸಹಕಾರದೊಂದಿಗೆ ಕೊಮೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ ದ್ರೌಪದಿ ಪ್ರತಾಪ ರಂಗದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಯಶಸ್ವಿ ಕಲಾವೃಂದದ ಮದ್ದಳೆ ಗುರುಗಳಾದ ಕೂಡ್ಲಿ ದೇವದಾಸ್‌ ರಾವ್‌ ಮಾತನಾಡಿ, ಸಂಪ್ರದಾಯದ ನಡೆಯನ್ನು ಕಲಾವಿದನು ಮೊದಲು ಅರಿತಿರಬೇಕು. ಆಗ ಮಾತ್ರ ಆರೋಗ್ಯಕರ ಆವಿಷ್ಕಾರ ಸಾಧ್ಯ. ಕೇವಲ ನೋಡಿಯೋ, ಅಲ್ಪಸ್ವಲ್ಪ ತಿಳಿದೋ ಮಾತನಾಡುವುದು ಸರಿಯಲ್ಲ. ಮೂಲ ಯಕ್ಷಗಾನವನ್ನು ಕರಗತ ಮಾಡಿಕೊಂಡು ಕಲಾಸ್ವಾಧನೆ ಮಾಡಿದರೆ ಪರಿಪಕ್ವ ಅಭಿಪ್ರಾಯಗಳು ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊçಕೂರು ಸೀತಾರಾಮ ಶೆಟ್ಟಿ, ಉದ್ಯಮಿ ಜಯಸುದರ್ಶನ, ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ವೆಂಕಟೇಶ ವೈದ್ಯ ಕೊಮೆ, ಯುವ ಮದ್ದಳೆಗಾರ ಲೋಹಿತ್‌ ಕೊಮೆ ಉಪಸ್ಥಿತರಿದ್ದರು.
ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ, ನಿರೂಪಿಸಿದರು. ಯಕ್ಷ ಛಾಯಾಚಿತ್ರಗ್ರಾಹಕ ಪ್ರಶಾಂತ ಮಲ್ಯಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next