Advertisement
ಸಭಾ ಸೂಚನಾ ಪತ್ರ: ಲೋಕಸಭಾ ಚುನಾವಣೆ ಯಲ್ಲಿ ಹೀನಾಯ ಸೋಲು ಕಂಡ ನಂತರ ಜಿಪಂ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ಜಿಪಂ ಸಿಇಒ ಸಭೆಗೆ ಸದಸ್ಯರೆಲ್ಲಾ ತಪ್ಪದೇ ಬರಬೇಕೆಂದು ಸದಸ್ಯರಿಗೆ ಸಭಾ ಸೂಚನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.
Related Articles
Advertisement
ಆದರೆ ಬೆರಳೆಣಿಕೆಯಷ್ಟು ಮಂದಿ ಜಿಪಂ ಸದ ಸ್ಯರು ಮಾತ್ರ ಅಧ್ಯಕ್ಷರ ಕೊಠಡಿಗೆ ಆಗಮಿಸಿದ್ದರಿಂದ ಅನುಮಾನಗೊಂಡ ಅಧ್ಯಕ್ಷರು ಸಭಾಂಗಣಕ್ಕೆ ಬಾರದೇ ಸದಸ್ಯರ ಬರುವಿಕೆಗೆ ಎದುರು ನೋಡುತ್ತಿದ್ದರು. ಆದರೆ 28 ಸದಸ್ಯರ ಪೈಕಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತುಪಡಿಸಿ ಕೇವಲ 12 ಮಂದಿ ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರಿಂದ 11:45 ಆದರೂ ಸಭಾಂಗಣಕ್ಕೆ ಯಾರು ಬಂದಿರಲಿಲ್ಲ.
ಆಗ ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಜಿಪಂ ಸಭಾಂಗಣದಕ್ಕೆ ಆಗಮಿಸಿ ಸಭೆ ನಡೆಸಲು ಕೋರಂ ಕೊರತೆ ಇದೆಯೆಂದು ಹೇಳಿ ಜಿಪಂ ಸಾಮಾನ್ಯ ಸಭೆಯನ್ನು ಮುಂದೂಡಿದ್ದರು. ಇದಾದ ಬಳಿಕ ಮತ್ತೆ ಸಾಮಾನ್ಯ ಸಭೆ ಕೆರೆಯಲು ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ.
28ಕ್ಕೆ ಸದಸ್ಯರಿಗೆ 12 ಮಂದಿ ಮಂದಿ ಹಾಜರ್: ಡಿ.26 ರಂದು ಒಟ್ಟು 28 ಸದಸ್ಯ ಬಲ ಹೊಂದಿ ರುವ ಜಿಪಂ ಸಾಮಾನ್ಯ ಸಭೆಗೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತುಪಡಿಸಿ ಕೇವಲ 12 ಮಂದಿ ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಆ ಪೈಕಿ ಚಿಂತಾಮಣಿಯ ಜಿಪಂ ಸದಸ್ಯರಾದ ಊಲವಾಡಿ ಜಿಪಂ ಸದಸ್ಯ ಶಿವಣ್ಣ, ಬಟ್ಲಹಳ್ಳಿ ಕ್ಷೇತ್ರದ ಸ್ಕೂಲ್ ಸುಬ್ಟಾರೆಡ್ಡಿ, ಅಂಬಾಜಿದುರ್ಗ ಕ್ಷೇತ್ರದ ಕಾಪಲ್ಲಿ ಶ್ರೀನಿವಾಸ್, ಭೂಮಿಶೆಟ್ಟಿಹಳ್ಳಿ ಕ್ಷೇತ್ರದ ಸುನಂದಮ್ಮ, ಕೈವಾರ ಕ್ಷೇತ್ರದ ಪವಿತ್ರ, ಕಾಂಗ್ರೆಸ್‌ನ ಬಾಗೇಪಲ್ಲಿಯ ಮಿಟ್ಟೇಮರಿ ಕ್ಷೇತ್ರದ ಚಿಕ್ಕನರಸಿಂಹಯ್ಯ, ಗೌರಿಬಿದನೂರಿನ ಡಿ.ಪಾಳ್ಯ ಕ್ಷೇತ್ರದ ಎ.ಅರುಂಧತಿ, ತೊಂಡೇಬಾವಿ ಕ್ಷೇತ್ರದ ಸರಸ್ವತಮ್ಮ, ವಿಧುರಾಶ್ವತ್ಥ ಕ್ಷೇತ್ರದ ಪ್ರಮೀಳ, ಗೌರಿಬಿದನೂರಿನ ಡಿ.ನರಸಿಂಹಮೂರ್ತಿ, ಗುಡಿ ಬಂಡೆಯ ಸೋಮೇನಹಳ್ಳಿ ಕ್ಷೇತ್ರದ ಗಾಯತ್ರಿ ನಂಜುಂಡಪ್ಪ ಹಾಗೂ ಚಿಕ್ಕಬಳ್ಳಾಪುರದ ತಿಪ್ಪೇನ ಹಳ್ಳಿ ಕ್ಷೇತ್ರದ ಜೆಡಿಎಸ್‌ನ ಕೆ.ಸಿ.ರಾಜಾಕಾಂತ್ ಸೇರಿ ಒಟ್ಟು 12 ಮಂದಿ ಮಾತ್ರ ಪಾಲ್ಗೊಂಡಿದ್ದರು.
● ಕಾಗತಿ ನಾಗರಾಜಪ್ಪ