Advertisement

ತಾರೆಗಳ ತೋಟ

08:19 PM Jan 03, 2020 | Lakshmi GovindaRaj |

ಐದರೊಳಗೊಂದು: ನೆಹರೂ ಸ್ಮರಣಾರ್ಥ ದೇಶಾದ್ಯಂತ ಸ್ಥಾಪಿಸಲ್ಪಟ್ಟ ಐದು ತಾರಾಲಯಗಳಲ್ಲಿ ಬೆಂಗಳೂರು ಕೂಡಾ ಒಂದು. ಉಳಿದವು, ಮುಂಬೈ, ದೆಹಲಿ, ಪುಣೆ, ಪ್ರಯಾಗ್‌ರಾಜ್‌ (ಅಲಹಾಬಾದ್‌)ನಲ್ಲಿವೆ.

Advertisement

ಹಸ್ತಾಂತರ: 1992ರಲ್ಲಿ ಸ್ಥಾಪಿತವಾದ ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್ ಎಜುಕೇಷನ್‌ (ಬೇಸ್‌)ನ ಆಡಳಿತಕ್ಕೆ ತಾರಾಲಯವನ್ನು ವಹಿಸಲಾಯಿತು. ಬೇಸ್‌ ಸಂಸ್ಥೆಯು ಕರ್ನಾಟಕ ಸೊಸೈಟೀಸ್‌ ರಿಜಿಸ್ಟ್ರೇಷನ್‌ ಆಕ್ಟ್ ಅಡಿಯಲ್ಲಿ ನೋಂದಣಿಯಾದ ಸ್ವಾಯತ್ತ ಸಂಸ್ಥೆ.

ಪ್ರೇಕ್ಷಕರ ಸಂಖ್ಯೆ: ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ವೀಕ್ಷಕರು ತಾರಾಲಯಕ್ಕೆ ಭೇಟಿ ನೀಡುತ್ತಾರೆ. ಅವರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.

ಸ್ಥಳ ಸೂಚನೆ: ಈಗಿರುವ ಸ್ಥಳವೇ ತಾರಾಲಯದ ಸ್ಥಾಪನೆಗೆ ಸೂಕ್ತವಾದದ್ದು ಎಂದು ಆಗಿನ ಬೆಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡಿದವರು, ವಿಜ್ಞಾನಿ ಪ್ರೊ. ಯು. ಆರ್‌. ರಾವ್‌. ಅವರು ತಾರಾಲಯದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು.

ವಿಜ್ಞಾನ ವನ: 1997ರಲ್ಲಿ, ತಾರಾಲಯದ ಆವರಣದಲ್ಲಿ ವಿಜ್ಞಾನ ವನವನ್ನು ಸ್ಥಾಪಿಸಲಾಯ್ತು. ಅಲ್ಲಿ, ವಿಜ್ಞಾನದ 40 ಪ್ರದರ್ಶಿಕೆಗಳನ್ನು (ಜಂತರ್‌ಮಂತರ್‌ ಮಾದರಿ, ಭೂಗೋಳ ಮಾದರಿ, ಆಕಾಶಕಾಯಗಳು, ಪ್ರತಿವಿರೋಧಿ ಕುಟೀರ, ಏಮ್ಸ್‌ ಕೊಠಡಿ) ಅಳವಡಿಸಲಾಗಿದೆ.

Advertisement

ಆಕಾಶ ಮಂದಿರ (ಸ್ಕೈ ಥಿಯೇಟರ್‌): ಹವಾನಿಯಂತ್ರಿತ ಆಕಾಶ ಮಂದಿರದಲ್ಲಿ ಕುಳಿತು, ಹಗಲಿನಲ್ಲಿಯೇ ತಾರೆ-ಆಕಾಶಕಾಯಗಳನ್ನು ಕಣ್ತುಂಬಿಕೊಳ್ಳಬಹುದು. “ಬಾನಂಗಳದ ಬಾಣ ಬಿರುಸು’, “ಗಗನಯಾನದ ನವೋದಯ’, ನಮ್ಮ ಸೌರವ್ಯೂಹ’, “ವಿಶ್ವದ ಅನ್ವೇಷಣೆ’- ಪ್ರಾತ್ಯಕ್ಷಿಕೆಗಳು ನಡೆಯುತ್ತವೆ. 15 ಮೀ. ಅರ್ಧ ಗೋಳಾಕಾರದ ಮೇಲೆ ಪ್ರೊಜೆಕ್ಟರ್‌ಗಳ ಸಹಾಯದಿಂದ ಪ್ರದರ್ಶನಗಳು ನಡೆಯುತ್ತವೆ. ಆಕಾಶಮಂದಿರದ ಆಸನ ಸಾಮರ್ಥ್ಯ 210.

ವಿಶೇಷ ಸೌಲಭ್ಯಗಳು: ವಿಶಿಷ್ಟಚೇತನ ವೀಕ್ಷಕರಿಗಾಗಿ, ಗಾಲಿಕುರ್ಚಿಗಳು, ಇಳಿಜಾರು ಮಾರ್ಗ, ವಿಶೇಷ ಶೌಚಾಲಯದ ವ್ಯವಸ್ಥೆಯಿದೆ.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಕಟ್ಟಡಗಳ ತುಣುಕು ಮಾಹಿತಿಯ ಸರಮಾಲೆ ಈ ಅಂಕಣದಲ್ಲಿ ಮೂಡಿಬರಲಿದೆ)

ಎಲ್ಲಿದೆ?: ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್‌
ನಿರ್ಮಾಣ: 1989ರಲ್ಲಿ
ಕಟ್ಟಿಸಿದ್ದು…: ಬೆಂಗಳೂರು ನಗರ ಪಾಲಿಕೆ
ಸ್ಮರಣೆ: ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಸ್ಮರಣಾರ್ಥ

Advertisement

Udayavani is now on Telegram. Click here to join our channel and stay updated with the latest news.

Next