Advertisement
ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸೀಗೇಹಳ್ಳಿಯಲ್ಲಿ ಸುಮಾರು ಏಳು ಎಕರೆ ಜಮೀನಿನಲ್ಲಿ ಘಟಕ ನಿರ್ಮಿಸಲಾಯಿತು. ಆದರೆ, ಗುತ್ತಿಗೆ ಪಡೆದ ಸಂಸ್ಥೆ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳದ ಕಾರಣ ತ್ಯಾಜ್ಯ ಸುರಿಯಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಸಮಸ್ಯೆಗಳಿಂದ ರೋಸಿ ಹೋದ ಗ್ರಾಮಸ್ಥರು ಘಟಕವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಉಗ್ರ ಹೋರಾಟ ನಡೆಸಿದರ ಹಿನ್ನೆಲೆಯಲ್ಲಿ ಬಿಬಿಎಂಪಿ ಘಟಕದಲ್ಲಿ ಸಂಸ್ಕರಣೆಯನ್ನು ಸ್ಥಗಿತಗೊಳಿಸಿತ್ತು. ಒಂದೊವರೆ ತಿಂಗಳ ನಂತರ ಮತ್ತೆ ಘಟಕವನ್ನು ಪುನರಾರಂಭಿಸಿರುವ ಬಿಬಿಎಂಪಿ ಗ್ರಾಮಸ‚§ರ ಪ್ರತಿಭಟನೆಗೆ ಬೆದರಿ ಪೊಲೀಸರ ಸರ್ಪಗಾವಲಿನಲ್ಲಿ ಘಟಕಕ್ಕೆ ತ್ಯಾಜ್ಯ ಸಾಗಿಸುತ್ತಿದೆ.
ಸಮಸ್ಯೆಗೆ ಕಾರಣ?: ಘಟಕದಲ್ಲಿ ಸಂಸ್ಕರಿಸಿ ಉತ್ಪಾದಿಸಲಾದ ಗೊಬ್ಬರ ಮತ್ತು ರೆಫ್ಯೂಸ್ ಡೆರೈವ್ ಫುಯೆಲ್‌ನಿಂದಾಗಿ (ಆರ್‌ಡಿಎಫ್) ಘಟಕ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್‌ಡಿಎಫ್ಅನ್ನು ಘಟಕದ ಹೊರಭಾಗದಲ್ಲಿ ಶೇಖರಿಸಿರುವುದರಿಂದ ಹೊಸ ತ್ಯಾಜ್ಯ ಸಂಸ್ಕರಣೆಗೆ ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಮಳೆ ಸುರಿದಾಗ ಇಲ್ಲವೇ ಜೋರಾಗಿ ಗಾಳಿ ಬೀಸಿದಾಗ ದುರ್ವಾಸನೆ ಹೆಚ್ಚುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತ್ಯಾಜ್ಯ ರಸ ಸಂಸ್ಕರಣಾ ಘಟಕಕ್ಕಾಗಿ ಟೆಂಡರ್ ಬೆಂಗಳೂರು: ಬೆಲ್ಲಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯರಸ (ಲಿಚೆಟ್) ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿರುವ ಬಿಬಿಎಂಪಿ, ಈ ಸಂಬಂಧ ಟೆಂಡರ್ ಕರೆದಿದೆ. ನಿತ್ಯ 120 ಕಿ.ಲೀ. (ಕೆಎಲ್‌ಡಿ) ಸಾಮರ್ಥ್ಯದ ಲಿಚೆಟ್ ದ್ರಾವಣ ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದ್ದು, ಇದರ ಗುತ್ತಿಗೆ ಪಡೆಯುವ ಸಂಸ್ಥೆಯು ವರ್ಷದಲ್ಲಿ ಘಟಕ ಸ್ಥಾಪಿಸಲಿದೆ. ನಂತರ ನಿರ್ವಹಣೆಯನ್ನೂ ಗುತ್ತಿಗೆ ಸಂಸ್ಥೆ ಮಾಡಬೇಕು.
ಪ್ರತಿ ದಿನ ತ್ಯಾಜ್ಯ ವಿಲೇವಾರಿ ಘಟಕದಿಂದ ಎಷ್ಟು ಲಿಚೆಟ್ ಉತ್ಪಾದನೆಯಾಗಿದೆ? ಅದರಲ್ಲಿ ಎಷ್ಟು ಸಂಸ್ಕರಿಸಲಾಗಿದೆ? ಎಂಬ ಬಗ್ಗೆ ಮಾಹಿತಿ ನೀಡಬೇಕು. ಹಾಗೂ ಸಂಸ್ಕರಣೆ ಸಂದರ್ಭದಲ್ಲಿ ಯಾವುದೇ ರೀತಿಯ ದುರ್ವಾಸನೆ ಬರದಂತೆ ನೋಡಿಕೊಳ್ಳಬೇಕು ಎಂಬುದು ಟೆಂಡರ್ ಷರತ್ತುಗಳು. ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕಗಳಿಂದ ದುರ್ವಾಸನೆ ಬರುತ್ತಿದೆ ಮತ್ತು ಅಲ್ಲಿ ಉತ್ಪತ್ತಿಯಾಗುವ ಲಿಚೆಟ್ ದ್ರಾವಣದಿಂದ ಸುತ್ತಲಿನ ನೀರಿನ ಮೂಲಗಳು ಹಾಳಾಗುತ್ತಿವೆ ಎಂಬ ದೂರುಗಳು ಬರುತ್ತಿವೆ. ಹೀಗಾಗಿ ಲಿಚೆಟ್ ಸಂಸ್ಕರಣಾ ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ. ಆರ್‌ಡಿಎಫ್ಗಾಗಿ ಹೊಂಡ
ತ್ಯಾಜ್ಯ ಸಂಸ್ಕರಣೆಯಿಂದ ರೂಪಿಸಿದ ಆರ್‌ಡಿಎಫ್ಅನ್ನು ಸಿಮೆಂಟ್ ಕಾರ್ಖಾನೆಯಲ್ಲಿ ಬಳಸಲಾಗುತ್ತದೆ. ಅದರಂತೆ ಘಟಕದಲ್ಲಿ ಶೇಖರಣೆ ಮಾಡಲಾಗಿರುವ ಆರ್‌ಡಿಎಫ್ ಪಡೆಯಲು ಸಿಮೆಂಟ್ ಕಾರ್ಖಾನೆಗಳು ಆಸಕ್ತಿ ತೋರಿದ್ದರೂ ಸಾಗಣೆ ವೆಚ್ಚ ಭರಿಸುವಂತೆ ಪಾಲಿಕೆಯನ್ನು ಕೋರಿವೆ. ಆದರೆ ಪಾಲಿಕೆ ಸಾಗಣೆ ವೆಚ್ಚ ಭರಿಸಲು ಹಿಂದೇಟು ಹಾಕಿದೆ. ಆ ಹಿನ್ನೆಲೆಯಲ್ಲಿ ಘಟಕದಲ್ಲಿರುವ ಆರ್‌ಡಿಎಫ್ಅನ್ನು ಖಾಲಿ ಮಾಡಿ, ಮತ್ತೆ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಆರಂಭಿಸಲು ಘಟಕದ ಆವರಣದಲ್ಲಿ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಬೃಹತ್ ಹೊಂಡ ತೆಗೆಯಲಾಗಿದೆ. ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಭಾಗ ಗಳಲ್ಲಿ ದುರ್ವಾಸನೆ ಹರಡಿದ್ದು, ಉಸಿರಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಕೊಳವೆಬಾವಿಗಳ ನೀರು ಸಹ ದುರ್ವಾಸನೆಯಿಂದ ಕೂಡಿದೆ.
-ಲಕ್ಷ್ಮಮ್ಮ, ಸೀಗೇಹಳ್ಳಿ ಒಂದು ಕೈಯಲ್ಲಿ ಊಟ ಮಾಡುತ್ತಿದ್ದರೆ ಮತ್ತೂಂದು ಕೈಯಲ್ಲಿ ನೊಣಗಳನ್ನು ಓಡಿಸ ಬೇಕಾದ ಸ್ಥಿತಿ ಇದೆ. ತ್ಯಾಜ್ಯ ವಿಲೇವಾರಿ ಮಾಡ ದಿರುವುದರಿಂದ ದುರ್ವಾ ಸನೆ ಹೆಚ್ಚಾಗಿದೆ. ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಭರವಸೆ ಭರವಸೆಗಳಾಗಿಯೇ ಉಳಿದಿವೆ.
-ಶಿವಣ್ಣ, ಪಂಚಮುಖೀ ಬಡಾವಣೆ * ವೆಂ.ಸುನೀಲ್‌ಕುಮಾರ್