Advertisement

ಪರಿಸ್ಥಿತಿಗೆ ತಕ್ಕಂತೆ ಆಟ ಅಗತ್ಯ: ರಿಷಭ್‌ ಪಂತ್‌

10:01 AM Dec 18, 2019 | sudhir |

ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೈಜ ಆಟವೆಂಬ ಪರಿಕಲ್ಪನೆ ಇಲ್ಲ. ಬದಲಾಗಿ ಪರಿಸ್ಥಿತಿಗೆ ತಕ್ಕಂತೆ ಆಡಲು ಕಲಿಯುವುದೇ ಅತೀ ಮುಖ್ಯವೆಂಬುದು ನನಗೆ ಅರ್ಥವಾಗಿದೆ ಎಂದು ಭಾರತೀಯ ತಂಡದ ಉದಯೋನ್ಮುಖ ಕ್ರಿಕೆಟಿಗ ರಿಷಭ್‌ ಪಂತ್‌ ಹೇಳಿದ್ದಾರೆ.

Advertisement

ಧೋನಿ ಜಾಗವನ್ನು ತುಂಬಬಲ್ಲ ಸಮರ್ಥ ವಿಕೆಟ್‌ ಕೀಪರ್‌ ಎಂದು ಹೇಳಲಾದ ಪಂತ್‌ ಇತ್ತೀಚೆಗಿನ ದಿನಗಳಲ್ಲಿ ವಿಕೆಟ್‌ ಹಿಂದುಗಡೆ ಕಳಪೆ ನಿರ್ವಹಣೆ ಮತ್ತು ನಿರ್ಣಾಯಕ ಹಂತದಲ್ಲಿ ಕೆಟ್ಟ ಹೊಡೆತಗಳಿಂದ ಸುಲಭವಾಗಿ ಔಟಾಗುವ ಮೂಲಕ ಬಹಳಷ್ಟು ಟೀಕೆಗೆ ಒಳಗಾಗಿದ್ದರು. ಇದು ಭಾರತೀಯ ತಂಡದ ಆಡಳಿತ ಕಳವಳ ವ್ಯಕ್ತಪಡಿಸಲು ಕಾರಣವಾಗಿದೆ.

ಆದರೆ ರವಿವಾರ ನಡೆದ ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸುವ ಮೂಲಕ 22ರ ಹರೆಯದ ಪಂತ್‌ ತನ್ನಲ್ಲಿ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. 69 ಎಸೆತ ಎದುರಿಸಿದ್ದ ಪಂತ್‌ 71 ರನ್‌ ಗಳಿಸಿದ್ದರು. ಆಟದ ಕಡೆ ಗಮನ
“ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ಕಲಿಯಲು ಬಹಳಷ್ಟಿದೆ. ನನ್ನ ಕುರಿತು ಮಾಡಲಾಗುವ ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ಆಟದ ಕಡೆ ಗಮನ ಹರಿಸುವುದನ್ನು ಮುಂದುವರಿಸುವೆ. ನಾನೀಗ ಕಲಿಯುವ ಹಂತದಲ್ಲಿದ್ದೇನೆ. ತಂಡದ ಏಳಿಗೆಗೆ ನನ್ನಿಂದಾಗುವ ಸಹಾಯ ಮಾಡುವತ್ತ ಗಮನ ಹರಿಸುವೆ’ ಎಂದು ಪಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next