ಕಾರ್ಕಳ: ಪ್ರಜಾಪ್ರಭುತ್ವವನ್ನು ಸದೃಢಗೊಳಿ ಸುವುದು ಮತದಾನ. ಭಾರತದಲ್ಲಿ ಯುವ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಶಕ್ತಿ ಯುವ ಮತದಾರರಲ್ಲಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಶ್ರೀ ಭುವನೇಂದ್ರ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಮತದಾನ ಸಾಕ್ಷರತೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ್ ಎ. ಕೋಟ್ಯಾನ್, ಯುವ ಜನಾಂಗ ಪೂರ್ವಾಗ್ರಹ ಪೀಡಿತರಾಗದೆ ಸೂಕ್ತ ವ್ಯಕ್ತಿಗೆ ಮತ ನೀಡಬೇಕು. ಸಮರ್ಥ ಅಭ್ಯರ್ಥಿ ಗೆದ್ದು ಬಂದಲ್ಲಿ ದೇಶದ ಅಭಿವೃದ್ಧಿಯಲ್ಲಿ ಆತ ತನ್ನದೇ ಆದ ಕೊಡುಗೆ ನೀಡಬಲ್ಲ ಎಂದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ, ಕಾಲೇಜು ಚುನಾವಣೆ ಆಯೋಗದ ವಿದ್ಯಾರ್ಥಿ ರಾಯಭಾರಿಗಳಾದ ನವೀನ್ ಭಟ್ ಮತ್ತು ವರ್ಷ, ಅಧ್ಯಕ್ಷ ಮೊಹಮ್ಮದ್ ರಿಯಾಝ್, ಉಪಾಧ್ಯಕ್ಷ ಪ್ರದೀಪ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನೀಷಾ ಕಶ್ಯಪ್ ಪ್ರಾರ್ಥಿಸಿ, ಮೊಹಮ್ಮದ್ ರಿಯಾಝ್ ನಿರೂಪಿಸಿ, ವಂದಿಸಿದರು.