Advertisement

Teachers ಕೊರತೆ ನೀಗಿಸಿದಲ್ಲಿ ಮಕ್ಕಳ ಭವಿಷ್ಯ ಸುಭದ್ರ: ಡಾ| ಹೆಗ್ಗಡೆ

12:36 AM Nov 20, 2023 | Team Udayavani |

ಬೆಳ್ತಂಗಡಿ: ಅನುದಾನಿತ ಶಾಲೆಗಳ ಕಟ್ಟಡ, ಮೂಲಸೌಕರ್ಯ ಕೊರತೆ ತುಂಬಿಕೊಡಲು ಸಂಬಂಧಪಟ್ಟ ಸಂಸ್ಥೆಗಳು ಸಿದ್ಧವಿದೆ. ಆದರೆ ಸರಕಾರವೂ ಗಮನಹರಿಸಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷರ ನೇಮಕಕ್ಕೆ ಮುಂದಾಗಬೇಕಿದೆ. ಶಿಕ್ಷಕರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ಹೊಣೆಗಾರಿಕೆಯನ್ನು ಮನಗಾಣಬೇಕಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಇಲ್ಲಿನ ಅಮೃತವರ್ಷಿಣಿ ಸಭಾಭವನ ದಲ್ಲಿ ನ. 19ರಂದು ರಾಜ್ಯ ಅನು ದಾನಿತ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ದ.ಕ.ಜಿಲ್ಲಾ ಸಮಿತಿವತಿಯಿಂದ ಹಮ್ಮಿಕೊಂಡ ಬೆಂಗಳೂರುಮತ್ತು ಮೈಸೂರು ವಿಭಾಗ ಮಟ್ಟದ
ಚಿಂತನ-ಮಂಥನ, ನಿವೃತ್ತ ಪದಾಧಿಕಾರಿ ಗಳ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳು ಮುಚ್ಚುತ್ತ ಬಂದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಈ ನೆಲೆಯಲ್ಲಿ ಮಠ, ಮಂದಿರ, ಚರ್ಚ್‌, ಮಸೀದಿಗಳು ನಡೆಸುತ್ತಿರುವ ಅನುದಾನಿತ ಶಾಲೆಗಳು ಕಟ್ಟಡ ನಿರ್ಮಾಣ ಸಹಿತ ನೇಮಕಾತಿಯಲ್ಲಿ ಅನುಕೂಲ ಕಲ್ಪಿಸಿಕೊಡುತ್ತಿವೆ. ಶಿಕ್ಷಕರ ನೇಮಕಾತಿ ಬಗ್ಗೆ ಸರಕಾರ ಈ ಕೂಡಲೆ ಮುತುವರ್ಜಿ ವಹಿಸಬೇಕು, ಈ ಕುರಿತು ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವೆ ಎಂದರು.

ಕರ್ನಾಟಕ ರಾಜ್ಯ ಅನುದಾನಿತ ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗೋಪಾಲ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ನೇಮಕಾತಿ ಇಲ್ಲವೇ ಗೌರವ ಶಿಕ್ಷಕರನ್ನು ನೀಡಬೇಕು. ಶಿಕ್ಷಕರಿಗೆ ವೈದ್ಯಕೀಯ ಭತ್ತೆ ಸೇರಿ ಹಲವಾರು ಬೇಡಿಕೆಗಳನ್ನು ಸರಕಾರ ಈಡೇರಿಸಬೇಕಿದೆ ಎಂದು ಅಗ್ರಹಿಸಿದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಜು ಅವರು ಅನುದಾನಿತ ಶಾಲೆಗಳು ಹಾಗೂ ಶಿಕ್ಷಕರ ಸಮಸ್ಯೆ ಗಳನ್ನು ಶೀಘ್ರವಾಗಿ ಈಡೇರಿಸ ಬೇಕೆಂಬ ಮನವಿ ಪತ್ರವನ್ನು ಡಾ| ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

Advertisement

ಸಂಘದ ನಿಕಟಪೂರ್ವ ಅಧ್ಯಕ್ಷ ಡಾ| ಹನುಮಂತಪ್ಪ, ಕಾರ್ಯದರ್ಶಿ ಟಿ. ರವಿಕುಮಾರ್‌, ರಾಜ್ಯ ಉಪಾಧ್ಯಕ್ಷ ಮುತ್ತಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಜು, ಜಿಲ್ಲಾ ಕೋಶಾಧಿಕಾರಿ ಶಶಿಕಾಂತ್‌ ಜೈನ್‌, ಮೈಸೂರು ವಿಭಾಗೀಯ ಕಾರ್ಯದರ್ಶಿ ಅರುಣ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಎಚ್‌.ಎನ್‌.ರಮೇಶ್‌ ಹಾಗೂ ಬೆಳ್ತಂಗಡಿ ಬಿಇಒ ತಾರಕೇಸರಿ ಭಾಗವಹಿಸಿದರು.

ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ರಾವ್‌ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಆಲ್ವಿನ್‌ ಲ್ಯಾನ್ಸಿ ರೋಡ್ರಿಗಸ್‌ ನಿರೂಪಿಸಿದರು.

ಸರಕಾರಿ ಶಾಲೆಗಳ ಪೋಷಿಸುವ ಸಲುವಾಗಿ ವರ್ಷಕ್ಕೆ 300 ಗೌರವ ಶಿಕ್ಷಕರನ್ನು ನೀಡುವ ಕಾರ್ಯ ಧರ್ಮಸ್ಥಳದಿಂದಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳ ಉಳಿಸಿ, ಪ್ರೋತ್ಸಾಹಿಸುವ ನೆಲೆಯಲ್ಲಿ ಕ್ಷೇತ್ರದಿಂದ ವರ್ಷಕ್ಕೆ 3 ಕೋ.ರೂ. ಸಹಾಯಧನದ ಮೂಲಕ ಪೀಠೊಪಕರಣ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ ಎಂದು ಡಾ| ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next