Advertisement

ಇಂದಿನ ತೀರ್ಪಿನಲ್ಲಿದೆ ಭವಿಷ್ಯ

12:16 AM Nov 10, 2020 | mahesh |

ಬೆಂಗಳೂರು/ ಹೊಸದಿಲ್ಲಿ: ಶಿರಾ, ರಾಜರಾಜೇಶ್ವರಿ ನಗರ ಉಪಚುನಾವಣೆ, ಬಿಹಾರ ವಿಧಾನಸಭೆ ಚುನಾವಣೆ, ವಿಧಾನಪರಿಷತ್‌ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆ ಜತೆಗೆ ಐಪಿಎಲ್‌ ಫೈನಲ್‌… ಈ ಎಲ್ಲವುಗಳ ಫ‌ಲಿತಾಂಶ ನ. 10ರಂದು ಬಹಿರಂಗಗೊಳ್ಳಲಿದೆ. ಜನಾದೇಶ ಏನಿರುತ್ತದೆ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ರಾಜಕೀಯ ಘಟಾನುಘಟಿಗಳು ಕಾಯುತ್ತಿದ್ದರೆ, ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಕಪ್ತಾನರು “ಐಪಿಎಲ್‌ ಕಪ್‌’ ಎದೆಗವಚಿಕೊಳ್ಳುವ ಕಾತರದಲ್ಲಿದ್ದಾರೆ. ಈ ಫ‌ಲಿತಾಂಶ ಹಲವು ಪ್ರಮುಖರ ಭವಿಷ್ಯವನ್ನು ನಿರ್ಧರಿಸಲಿದ್ದು, ಯಾರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವ ವಿವರ ಇಲ್ಲಿದೆ.

Advertisement

ಯಡಿಯೂರಪ್ಪ
ವಿಧಾನಸಭೆಯ ಎರಡು ಕ್ಷೇತ್ರಗಳ ಉಪಚುನಾವಣ ಫ‌ಲಿತಾಂಶವು ಸಿಎಂ ಬಿಎಸ್‌ವೈ ಅವರಿಗೆ ಪ್ರತಿಷ್ಠೆ ಮಾತ್ರ ವಲ್ಲದೆ, ಸರಕಾರದ ಕಾರ್ಯವೈಖರಿ, ಕೊರೊನಾ-ನೆರೆ ನಿರ್ವಹಣೆಯ ಬಗ್ಗೆ ನೀಡುವ ಜನಾಭಿಪ್ರಾಯ ಎಂದೂ ಬಿಂಬಿತ ವಾಗಿದೆ. ಫ‌ಲಿತಾಂಶ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಲ್ಲೂ ಪ್ರಭಾವ ಹೆಚ್ಚಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಡಿ.ಕೆ. ಶಿವಕುಮಾರ್‌
ಡಿಕೆಶಿಯವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಎದುರಾದ ಮೊದಲ ಚುನಾವಣೆ ಇದು. ಇಲ್ಲಿ ಗೆಲುವು ಡಿಕೆಶಿಯವರಿಗೆ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡಲಿದೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ, ವಿಶೇಷ ವಾಗಿ ಕುಸುಮಾ ಸೋತರೆ, ಪಕ್ಷದ ಇತರ ನಾಯಕರು ನೇರ ವಾಗಿ ಡಿ.ಕೆ.ಶಿ. ಅವರನ್ನೇ ಹೊಣೆ ಮಾಡಿ ಅವರ ನಾಯತ್ವದಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ ಎನ್ನುವ ಸಂದೇಶ ರವಾನಿಸುವ ಸಾಧ್ಯತೆ ಇದೆ.

ಎಚ್‌.ಡಿ. ಕುಮಾರಸ್ವಾಮಿ
ಫ‌ಲಿತಾಂಶ ಜೆಡಿಎಸ್‌ಗೆ ಅಸ್ತಿತ್ವ ಮತ್ತು ಮಾಜಿ ಸಿಎಂ ಎಚ್‌ಡಿಕೆ ಅವರ ಭವಿಷ್ಯದ ಪ್ರಶ್ನೆಯಾಗಿದೆ. ಶಿರಾ ಮತ್ತು ಒಂದು ಪದವೀಧರ, ಒಂದು ಶಿಕ್ಷಕರ ಕ್ಷೇತ್ರಗಳನ್ನು ಹಿಂದೆ ಜೆಡಿಎಸ್‌ ಗೆದ್ದಿತ್ತು. ಈಗ ಮತ್ತೆ ಗೆದ್ದು ಭದ್ರಕೋಟೆ ಉಳಿಸಿಕೊಳ್ಳುವ ಅನಿವಾರ್ಯ ಅವರದು. ಜೆಡಿಎಸ್‌ ಗೆದ್ದರೆ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕೆ ಟಾನಿಕ್‌ ಸಿಕ್ಕಂತಾಗುತ್ತದೆ. ಸೋತರೆ ನಾಯಕರು ಮತ್ತು ಮುಖಂಡರ ವಲಸೆ ತಡೆಯಲು ಕಷ್ಟವಾಗಬಹುದು.

ರೋಹಿತ್‌ ಶರ್ಮಾ
ಮಂಗಳವಾರ ಐಪಿಎಲ್‌ ಇತಿಹಾಸ ದಲ್ಲೇ ಮಹತ್ವದ ಅಂತಿಮ ಪಂದ್ಯ ನಡೆಯು ತ್ತಿದೆ. ಹಿಂದೆಂದೂ ಎದುರಿಸದ ಸವಾಲು ಗಳ ನಡುವೆ ಕೂಟ ನಡೆಸಿದ್ದೇ ಇದಕ್ಕೆ ಕಾರಣ. ರೋಹಿತ್‌ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಮುಂಬೈಗೆ ಗರಿಷ್ಠ 5ನೇ ಬಾರಿ ಕಿರೀಟ ಒಲಿಯುತ್ತದೆ. ಇದಾದರೆ ಭಾರತ ಟಿ20 ತಂಡದ ನಾಯಕ ಸ್ಥಾನಕ್ಕೆ ರೋಹಿತ್‌ ಶರ್ಮ ಹೆಸರು ಪ್ರಬಲವಾಗಿ ಕೇಳಿ ಬರಲಿದೆ.

Advertisement

ನಿತೀಶ್‌ ಕುಮಾರ್‌
ಬಿಹಾರದ ವಿಧಾನಸಭೆ ಚುನಾವಣೆ ನಿತೀಶ್‌ಗೆ “ಮಾಡು ಇಲ್ಲವೇ ಮಡಿ’ ಸ್ಥಿತಿ ತಂದೊಡ್ಡಿದೆ. ಎನ್‌ಡಿಎಗೆ ಬಹುಮತ ಬಂದು ಅಧಿಕಾರ ಹಿಡಿದರೆ, ನಿತೀಶ್‌ ಮತ್ತೆ ಸೋಲರಿಯದ ಸರದಾರನಾಗಲಿ ದ್ದಾರೆ. ಫ‌ಲಿತಾಂಶ ವ್ಯತಿ ರಿಕ್ತ ವಾದರೆ ಅದು ನಿತೀಶ್‌ ರಾಜಕೀಯ ಜೀವನ ದಲ್ಲಿ ದೊಡ್ಡ ಹೊಡೆತವಾಗಲಿದೆ. ನಿತೀಶ್‌ ಬಳಿಕ ಜೆಡಿಯುನಲ್ಲಿ ಮಾಸ್‌ ಲೀಡರ್‌ ಇಲ್ಲದ ಕಾರಣ ಪಕ್ಷವೇ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ತೇಜಸ್ವಿ ಯಾದವ್‌
ಸಮೀಕ್ಷೆಗಳ ಭವಿಷ್ಯದಂತೆ ಆರ್‌ಜೆಡಿ- ಕಾಂಗ್ರೆಸ್‌- ಎಡ ಪಕ್ಷ ಗಳ ಮಹಾಮೈತ್ರಿ ಗೆಲುವು ಸಾಧಿಸಿ ದರೆ ತೇಜಸ್ವಿ ಯಾದವ್‌ ಸಿಎಂ ಆಗ ಲಿದ್ದಾರೆ. ಬಿಹಾರ  ದಲ್ಲಿ ಯುವನಾಯಕನ ಆಡಳಿತ ಆರಂಭ ವಾಗ ಲಿದೆ. ಲಾಲೂ ಕುಟುಂಬಕ್ಕೆ ಮತ್ತೆ ಅಧಿಕಾರ ಸಿಗಲಿದೆ. ಮಹಾಘಟ ಬಂಧನ್‌ ಬಹುಮತ ಪಡೆಯಲು ವಿಫ‌ಲವಾದರೆ ಆರ್‌ಜೆಡಿ ಮತ್ತೆ ಅಧಿಕಾರ ಹಿಡಿಯಲು ಐದು ವರ್ಷಗಳ ಕಾಲ ಕಾಯಬೇಕಾಗಬಹುದು.

ಚಿರಾಗ್‌ ಪಾಸ್ವಾನ್‌
ಜೆಡಿಯು ಅಭ್ಯರ್ಥಿಗಳ ವಿರುದ್ಧ ಎಲ್‌ಜೆಪಿ ಅಭ್ಯರ್ಥಿಗಳನ್ನು ಕಣ ಕ್ಕಿಳಿಸಿ ದ್ದರೂ ಚಿರಾಗ್‌ ಪಾಸ್ವಾನ್‌ ಅವರು ಬಿಜೆಪಿಗೆ ತಮ್ಮ ಬೆಂಬಲ ಮುಂದುವರಿ ಸುವುದಾಗಿ ಘೋಷಿಸಿ ದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವಷ್ಟು ಮ್ಯಾಜಿಕ್‌ ಸಂಖ್ಯೆ ಎಲ್‌ಜೆಪಿಗೆ ಬಂದರೆ ಚಿರಾಗ್‌ ಕಿಂಗ್‌ಮೇಕರ್‌ ಆಗಿ ಮಿಂಚಲಿದ್ದಾರೆ. ಎಲ್‌ಜೆಪಿ ಕಳಪೆ ಸಾಧನೆ ಮಾಡಿದ್ದಾದರೆ ಚಿರಾಗ್‌ ಪಾಸ್ವಾನ್‌ ಅವರಿಗೆ ಮುಖಭಂಗವಾಗಲಿದೆ.

ಶ್ರೇಯಸ್‌ ಅಯ್ಯರ್‌
ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಮೊದಲ ಫೈನಲ್‌. ಗೆದ್ದರೆ ಮೊದಲ ಪ್ರಶಸ್ತಿ. ಮುಂಬೈಗೆ ಹೋಲಿಸಿದರೆ ದುರ್ಬಲ ವಾಗಿರುವ ಡೆಲ್ಲಿ ಗೆದ್ದರೆ ನಾಯಕ ಶ್ರೇಯಸ್‌ ಅಯ್ಯರ್‌ ಜೀವನದಲ್ಲಿ ಭಾರೀ ಬದಲಾವಣೆಯಾಗು ತ್ತದೆ. ಐಪಿಎಲ್‌ನ ಕಿರಿಯ ನಾಯಕ ರಲ್ಲಿ ಅವರೂ ಒಬ್ಬರು. ಈಗಾ ಗಲೇ ಭಾರತ ಏಕ ದಿನ, ಟಿ20 ತಂಡದಲ್ಲಿ ಸ್ಥಾನ ಪಡೆ ದಿರುವ ಅವರು ಅಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next