Advertisement

ಅಂತ್ಯಸಂಸ್ಕಾರಕ್ಕೆ ಅಥಣಿ ಗೆಳೆಯರ ಬಳಗ ಹೆಗಲು 

09:50 PM May 22, 2021 | Team Udayavani |

ಸಂತೋಷ ರಾ ಬಡಕಂಬಿ.

Advertisement

ಅಥಣಿ: ಕೊರೊನಾ ಮಹಾಮಾರಿ ಮಾನವ ಸಂಬಂಧಗಳನ್ನು ದೂರಮಾಡಿ ಸಾವಿನ ರಣಕೇಕೆ ಹಾಕುತ್ತಿದ್ದು. ಸೋಂಕಿಗೆ ಒಳಗಾದ ವ್ಯಕ್ತಿಯ ಶವ ಸಂಸ್ಕಾರಕ್ಕೂ ಕುಟುಂಬ ವರ್ಗದವರು ಮುಂದೆ ಬಾರದ ಸಮಯದಲ್ಲಿ ಪಟ್ಟಣದಲ್ಲಿ ಗೆಳೆಯರ ಬಳಗ ಉಚಿತವಾಗಿ ಸೋಂಕಿತರ ಶವಸಂಸ್ಕಾರ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದೆ.

ಪಟ್ಟಣದಲ್ಲಿ “ಅಥಣಿ ಗೆಳೆಯರ ಬಳಗ’ದ ಸದಸ್ಯರು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಅನುಸರಿಸಿ ಉಚಿತವಾಗಿ ನೆರವೇರಿಸುತ್ತಿದ್ದಾರೆ. ಹಲವೆಡೆ ಅಂತ್ಯಸಂಸ್ಕಾರಕ್ಕೆ ಸಾವಿರಾರು ರೂ. ಪಡೆದದ್ದು, ಅಮಾನವೀಯವಾಗಿ ಅಂತ್ಯಸ್ಕಾರ ನೆರವೇರಿಸಿದ ಘಟನೆಗಳನ್ನು ನೋಡಿದ್ದ ಈ ಅಥಣಿ ಗೆಳೆಯರ ಬಳಗದ ಸುಮಾರು ಹನ್ನೆರಡು ಜನ ಸೇರಿಕೊಂಡು ಕಳೆದ 15 ದಿನಗಳಿಂದ ಉಚಿತ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.

ಯಾರಿಂದಲೂ ನಯಾ ಪೈಸೆ ಅಪೇಕ್ಷಿಸದೆ ತಮ್ಮ ಸ್ವಂತ ಖರ್ಚಿನಿಂದ ವಿಧಿ ವಿಧಾನಕ್ಕೆ ಬೇಕಾದ ವೆಚ್ಚಗಳನ್ನು ಭರಿಸುತ್ತಿದ್ದಾರೆ. ಅಥಣಿ ಗೆಳೆಯರ ಬಳಗದ ಹೆಸರಲ್ಲಿ ಮಲ್ಲೇಶ ಪಟ್ಟಣ, ಸಿದ್ದು ಮಾಳಿ, ಅರುಣ ಮಾಳಿ, ಪ್ರಶಾಂತ ತೋಡಕರ, ರಶೀದ ಶೇಡಬಾಳೆ, ಮಹಾದೇವ ಅಡಹಳ್ಳಿ, ಜಗನ್ನಾಥ ಬಾಮನೆ, ಆನಂದ ಮಾಕಾಣಿ, ಮಯೂರೇಶ ಮಂಗಸೂಳಿ, ಪ್ರಮೋದ ಚಂಡಕೆ, ಮಲ್ಲೇಶ ಕಾಂಬಳೆ, ಪ್ರಕಾಶ ಜಾಧವ ಮೊದಲಾದ 12 ಯುವಕರು ಜನಸೇವೆಗೆ ಮುಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಗತ್ಯವಿರುವವರು ಉಚಿತ ಅಂತ್ಯಸಂಸ್ಕಾರಕ್ಕಾಗಿ 8546868005 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next