Advertisement

ಕಿಟ್ಟಾಳುಗಳ ವಂಚನೆ, ಕಟ್ಟಾಳುಗಳ ಪರದಾಟ

08:48 AM Nov 25, 2017 | |

ಮೈಸೂರು: ಕನ್ನಡದ ಸೇವೆ ಮಾಡುತ್ತೇವೆಂದು ಹೇಳಿಕೊಂಡ ಕೆಲವು “ಕಿಟ್ಟಾಳು’ಗಳು (ಕಿಟ್‌ ಮತ್ತು ಒಒಡಿ ಫಾರಂ ಪಡೆದು  ಊರು ಸುತ್ತೋರು) ಸೇವೆ ಮರೆತು ವಂಚನೆ ಮಾಡುತ್ತಿರುವುದು ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾತರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಮುಂದುವರಿದಿದೆ.

Advertisement

ಇದಕ್ಕೆ ಈ ಬಾರಿಯ ಸಮ್ಮೇಳನದ ಮೊದಲ ದಿನದ ಆರಂಭದ ಘಳಿಗೆಯೇ ಸಾಕ್ಷಿಯಾಯಿತು. ಸಮ್ಮೇಳನಕ್ಕೆ ಆಗಮಿಸಿದ್ದ ಕೆಲವು ನೋಂದಾಯಿತ ಪ್ರತಿನಿಧಿಗಳು ತಮಗೆ ಸಮ್ಮೇಳನದ ಕಿಟ್‌ ಸಿಗಲಿಲ್ಲವೆಂದು ಒಂದು ಕಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೂಂದೆಡೆ ಕಿಟ್‌ಗಳೇ ಖಾಲಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗಾದರೆ, ಮೊದಲೇ ತಂದಿರಿಸಿದ್ದ ಈ ಕಿಟ್‌ಗಳು ಹೋಗಿದ್ದಾದರೂ ಎಲ್ಲಿಗೆ ಎಂದು ಹುಡುಕಹೊರಟರೆ ಕಿಟ್ಟಾಳುಗಳ ವಂಚನೆಯ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ.

ಆಗಿದ್ದೇನು?: ಸಮ್ಮೇಳನದ ಸ್ವಾಗತ ಸಮಿತಿ ಗುರುವಾರವೇ ಸುಮಾರು 15 ಸಾವಿರ ಸಮ್ಮೇಳನದ ಕಿಟ್‌ಗಳನ್ನು ಸಿದ್ಧಪಡಿಸಿತ್ತು. ಈ ಎಲ್ಲಾ ಕಿಟ್‌ಗಳಲ್ಲೂ ಒಒಡಿ ಫಾರಂ ಮತ್ತಿತರ ವಸ್ತುಗಳನ್ನು ಇರಿಸಲಾಗಿತ್ತು. ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ, ಗಡಿನಾಡು ಮತ್ತು ಹೊರರಾಜ್ಯದ ಪ್ರತಿನಿಧಿಗಳು ಬಂದಿದ್ದಾರೆ. ಕಸಾಪ ಪ್ರಕಾರ, ಸುಮಾರು 12,500 ಪ್ರತಿನಿಧಿಗಳು ತಮ್ಮ ಹೆಸರು ನೋಂದಾಯಿಸಿದ್ದು, ಅವರಿಗೆ ಕಿಟ್‌ಗಳನ್ನು ಕೊಡಬೇಕಿತ್ತು. ಆದರೂ, ಹೊಸದಾಗಿ ನೋಂದಣಿಯಾದವರಿಗೂ ಕಿಟ್‌ಗಳನ್ನು ಕೊಡುವ ಉದ್ದೇಶದಿಂದ 2,500ಕ್ಕೂ ಅಧಿಕ ಕಿಟ್‌ಗಳನ್ನು ಸಿದ್ಧಪಡಿಸಲಾಗಿತ್ತು. 

ಗುರುವಾರ ಸಂಜೆಯೇ ಬಂದ ಪ್ರತಿನಿಧಿಗಳಿಗೆ ಕಿಟ್‌ಗಳನ್ನು ವಿತರಿಸಲು ಸಮ್ಮೇಳನದ ಆಯೋಜಕರು ವ್ಯವಸ್ಥೆ ಮಾಡಿದ್ದರು. ಈ ವೇಳೆ ಹಲವರು ಐದಾರು ನೋಂದಣಿ ರಶೀದಿಗಳನ್ನು ತಂದು ಐದಾರು ಕಿಟ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವರು ಮೂರ್‍ನಾಲ್ಕು ಕಿಟ್‌ಗಳನ್ನು ತೆಗೆದು ಕೊಂಡು ಹೋಗಿದ್ದಾರೆ. ಅಂದರೆ ಕಿಟ್‌ ಪಡೆದವರು ಕೆಲವರಾದರೆ, ಸಮ್ಮೇಳನಕ್ಕೆ ಬರದೇ ಮನೆಗಳಲ್ಲಿ ಕುಳಿತುಕೊಂಡವರೂ ಕಿಟ್‌ಗಳನ್ನು ಪಡೆದಿದ್ದಾರೆ. ನಿಜವಾಗಿಯೂ ಕನ್ನಡ ಸೇವೆಗೆಂದು ಬಂದವರಿಗೆ ಕಿಟ್ಟೂ ಸಿಕ್ಕಿಲ್ಲ, ಒಒಡಿ ಫಾರಮ್ಮೂ ಕೈಸೇರಿಲ್ಲ.

ಚಂಪಾ ಸರ್ವಾಧ್ಯಕ್ಷರ ಭಾಷಣ ಮಾಡುತ್ತಿದ್ದಾಗಒಒಡಿ ಸಿಗದ ನೌಕರರು ಪ್ರತಿಭಟನೆ ಮಾಡತೊಡಗಿದರು. ಮೂರು ನಿಮಿಷ ಭಾಷಣ ನಿಂತಿತ್ತು. ನಂತರ ಕಸಾಪದಿಂದಲೇ ಶನಿವಾರ ಈ ಸಮಸ್ಯೆ ಸಂಪೂರ್ಣ ವಾಗಿ ಬಗೆಹರಿಸುವುದಾಗಿ ಭರವಸೆ ಸಿಕ್ಕಿತು.

Advertisement

ಆಗುತ್ತಿರುವುದೇನು?: ಸಮ್ಮೇಳನದ ಆರಂಭದಲ್ಲೇ  ಕಿಟ್‌ ಪಡೆದ ಕೆಲವರು ಸಮ್ಮೇಳನದಲ್ಲಿ ಒಂದೆರಡು ಗಂಟೆ ಕಾಣಿಸಿಕೊಂಡು ಮೈಸೂರು ಸುತ್ತಲು ಹೋಗಿದ್ದಾರೆ. ಇನ್ನೂ ಕೆಲವರು ಸಮ್ಮೇಳನಕ್ಕೆ ಹೋದ ತಮ್ಮ ಸ್ನೇಹಿತರ ಕೈನಲ್ಲಿ ನೋಂದಣಿ ರಶೀದಿಕೊಟ್ಟು
ಒಒಡಿ ಫಾರಂ ಇರುವ ಕಿಟ್‌ ತರಿಸಿಕೊಂಡು ಪುಕ್ಕಟೆಯಾಗಿ ಎರಡು ದಿನ ರಜೆ ಗಳಿಸುತ್ತಿದ್ದಾರೆ. ಮೈಸೂರಿನಲ್ಲಿ ಎರಡು ದಿನ ಸ್ಥಳೀಯ ರಜೆ ಘೋಷಣೆ ಮಾಡಿದ್ದು ಇದು ಅಲ್ಲಿನ ನೌಕರರಿಗೆ ಅನ್ವಯವಾಗುವುದಿಲ್ಲ.

ಕಸಾಪದಿಂದ 15 ಸಾವಿರ
ಸಮ್ಮೇಳನದ ಕಿಟ್‌ ಸಿದ್ಧಪಡಿಸಿ ದ್ದೇವೆ. ನೋಂದಣಿಯಾದವರು 12,500 ಮಂದಿ ಮಾತ್ರ. ಆದರೂ ನೋಂದಾಯಿತ ಪ್ರತಿನಿಧಿಗಳಿಗೆ ಕಿಟ್‌ ಸಿಗಲಿಲ್ಲವೆಂದರೆ ಅದು ವ್ಯವಸ್ಥೆಯ ಲೋಪವೇ.
 ● ಜಯಪ್ಪ ಹೊನ್ನಾಳಿ, ಪ್ರಧಾನ ಕಾರ್ಯದರ್ಶಿ, ಕಸಾಪ, ಮೈಸೂರು.

ಸಂಪತ್‌ ತರೀಕೆರೆ’

Advertisement

Udayavani is now on Telegram. Click here to join our channel and stay updated with the latest news.

Next