Advertisement
ಶೇಣಿ ಜನ್ಮ ಶತಾಬ್ಧ-ಪ್ರಶಸ್ತಿಶತಕ ಕಾರ್ಯಕ್ರಮದಲ್ಲಿ ವಿಸ್ತರಿಸಿದ ವೇದಿಕೆ ಸಾಲದಾಯಿತು. ಶೇಣಿ ಜನ್ಮ ಶತಾಬ್ದ ಪ್ರಶಸ್ತಿಯನ್ನು ಶೇಣಿಯವರ ಒಡನಾಡಿ ಕಲಾವಿದರಿಗೆ ಅಲ್ಲದೆ ಒಡನಾಡಿ ಕಲಾವಿದರ ಉತ್ತರಾಧಿಕಾರಿಗಳಿಗೆ ಹೀಗೆ 100ಕ್ಕೂ ಮಿಕ್ಕಿ ಈ ಪ್ರಶಸ್ತಿಗೆ ಬಾಜನರಾದರು. ಜತೆಗೆ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್, ವೈದಿಕ ವಿದ್ವಾಂಸ ವೇ| ಮೂ| ಕೇಕಣಾಜೆ ಶಂಭಟ್ಟರಿಗೆ, ಹಲವು ಕಲಾ ಪೋಷಕರಿಗೆ ಹೀಗೆ ಒಬ್ಬರ ಅನಂತರ ಒಬ್ಬರಿಗೆ ಗೌರವ ಸಲ್ಲಿಸಲಾಯಿತು.
ರಾವಣ ಪಾತ್ರಧಾರಿ ಮನೀಷ್‌ಕುಮಾರ್(ಪ್ರ.) ಎನ್.ಎಂ. ಎಡನೀರು, ಸಚಿನ್ ಕೆ. ಅಮೀನ್(ದ್ವಿ.) ಮೋಹಿನಿ ಕಲಾಸಂಪದ, ಗೋಪಾಲಕೃಷ್ಣ ಭಟ್ (ತೃ.) ಬೆಂಗಳೂರಿನ ಯಕ್ಷಲೋಕದ ಕಲಾ ವಿದ ಬಹುಮಾನ ಪಡೆದುಕೊಂಡರು.
Related Articles
Advertisement
ಶುಕ್ರಾಚಾರ್ಯ ಪಾತ್ರದಲ್ಲಿ ನಂದನ್ (ಪ್ರ.) ಮೋಹಿನಿ ಕಲಾ ತಂಡ, ಕಾರ್ತಿಕ್ (ದ್ವಿ.) ಬೆಂಗಳೂರು ಯಕ್ಷಲೋಕ, ಅಶ್ವಿನಿ (ತೃ.) ಕಾಟಿಪಳ್ಳ ಶ್ರೀಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಕಲಾವಿದೆ ಬಹುಮಾನ ಪಡೆದುಕೊಂಡರು.
ಹನುಮಂತ ಪಾತ್ರದಲ್ಲಿ ಸುನಿಲ್ (ಪ್ರ.) ಸುರತ್ಕಲ್ ಸಿದ್ಧಿವಿನಾಯಕ ಯಕ್ಷನಾಟ್ಯ ಕಲಾ ಕೇಂದ್ರ, ರವಿಕಾಂತ (ದ್ವಿ.) ಕಿನ್ನಿಗೋಳಿ ಮೋಹಿನಿ ಕಲಾ ಸಂಪದ, ಈಶ್ವರ್ ಚಂದ್ರ (ತೃ.) ಬೆಂಗಳೂರು ಯಕ್ಷಲೋಕ ಕಲಾವಿದ ಬಹುಮಾನ ಪಡೆದುಕೊಂಡರು.
ವಿಭೀಷಣ ಪಾತ್ರದಲ್ಲಿ ಚೈತನ್ಯ ಮುಳಿಯ (ಪ್ರ.) ಬೆಂಗಳೂರು ಯಕ್ಷಲೋಕ, ಜಯ ಕೀರ್ತಿ ಜೈನ್ (ದ್ವಿ.) ಮೋಹಿನಿ ಕಲಾ ಸಂಪದ, ವಿನುತಾ ಗಟ್ಟಿ (ತೃ.) ಕೈರಂಗಳ ಶ್ರೀಗೋಪಾಲಕೃಷ್ಣ ಭಕ್ತ ಯಕ್ಷ ವೃಂದದ ಕಲಾವಿದ ಬಹುಮಾನ ಪಡೆದರು.
ಇಂದ್ರಜಿತು ಪಾತ್ರದಲ್ಲಿ ಶಶಾಂಕ (ಪ್ರ.) ಪುತ್ತೂರು ಯಕ್ಷಕೂಟ, ಅಭಿಜಿತ್ (ದ್ವಿ.) ಮೋಹಿನಿ ಕಲಾ ಸಂಪದ, ರಂಜಿತಾ ಎಲ್ಲೂರು (ತೃ.) ಕದ್ರಿ ಯಕ್ಷಕೂಟ ಕಲಾವಿದೆ ಬಹುಮಾನ ಪಡೆದರು.
ಲಕ್ಷ್ಮಣ ಪಾತ್ರದಲ್ಲಿ ಅಕ್ಷಯ್ ಭಟ್ (ಪ್ರ.) ಮೋಹಿನಿ ಕಲಾ ಸಂಪದ, ಶಿವರಾಜ್ (ದ್ವಿ.) ಉಡುಪಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರ, ದಿಶಾ ಶೆಟ್ಟಿ (ತೃ.) ಸುರತ್ಕಲ್ ತಂಡದ ಕಲಾವಿದೆ ಬಹುಮಾನ ಪಡೆದರು.
ಪ್ರಥಮ ಬಂಗಾರದ ಪದಕ, ದ್ವಿತೀಯ ರಜತ ಪದಕ, ತೃತೀಯ ನಗದು ಬಹುಮಾನ ನೀಡಲಾಯಿತು. ಪ್ರತೀ ತಂಡಕ್ಕೂ ಖರ್ಚು ವೆಚ್ಚ ರೂಪದಲ್ಲಿ ರೂ. 15 ಸಾವಿರ ಮೊತ್ತವನ್ನು ಗೌರವ ಧನವಾಗಿ ನೀಡಲಾಯಿತು.
ವೈವಿಧ್ಯಮಯ ಪಾಕಗಳುಯಕ್ಷೋತ್ಸವದ ಉದ್ದಕ್ಕೂ ಊಟ, ಉಪಾಹಾರದ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿತ್ತು. ಎಲ್ಲವನ್ನು ಉಚಿತವಾಗಿ ನೀಡಲಾಯಿತು. ಊಟ, ಉಪಾಹಾರದ ಮೆನು
ಇಡ್ಲಿ, ಬನ್ಸ್, ಖಾರಾಬಾತ್, ಕೇಸರಿ ಬಾತ್, ಪಾಯಸ, ಮಸಾಲೆ ವಡೆ, ಸೆಟ್ ದೋಸೆ, ಗೋಳಿಬಜೆ, ಗೆಣಸು ಪೋಡಿ, ಪಲಾವ್, ಜಿಲೇಬಿ, ಮಸಾಲೆ ದೋಸೆ, ಪುಂಡಿ, ಉಪ್ಪುಹುಳಿ ದೋಸೆ, ಚಾ, ಕಾಫಿ, ಮಜ್ಜಿಗೆ, ಹೆಸರುಕಾಳು ಉಸುಳಿ ಇತ್ಯಾದಿ, ಪಲಾವ್, ಅನ್ನ, ಸಾಂಬಾರ್, ಪಲ್ಯ, ಉಪ್ಪಿನಕಾಯಿ, ಸಾರು, ಮಜ್ಜಿಗೆ, ಗಂಜಿ ಇದು ಊಟದ ವ್ಯವಸ್ಥೆಯಲ್ಲಿತ್ತು. ಕಲಾವಿದರ ದಂಡು
ಹಲವಾರು ಮೇಳದ ಅತಿರಥ ಮಹಾ ರಥ ಕಲಾವಿದರಲ್ಲದೆ ಹಿರಿಕಿರಿಯ ಕಲಾವಿದರು ಯಕ್ಷೋತ್ಸವದಲ್ಲಿ ಮಿಂಚಿದರು. ಮೇಳದ ಕಲಾವಿದರಿಗೆ ಮಳೆಗಾಲದ ಅನಂತರದ ಯಕ್ಷಸೇವೆ ಮೊದಲು ಇಲ್ಲಿಂದ ಆರಂಭವಾಗುವುದು ಇಲ್ಲಿ ರೂಢಿ ಯಾಗಿದೆ. ಪ್ರಸಂಗ ಮತ್ತು ಕಲಾವಿದರ ಪಾತ್ರ ಚಿತ್ರಣದ ಕರಪತ್ರ ಎರಡು ತಿಂಗಳ ಮೊದಲೇ ರಸಿಕರ ಕೈ ಸೇರುತ್ತದೆ. ಯಕ್ಷಾಭಿಮಾನಿಗಳು ತಮ್ಮ ಅಭಿಮಾನಿ ಕಲಾವಿದರ ಪಾತ್ರಕ್ಕಾಗಿ ನಿರೀಕ್ಷೆಯಲ್ಲಿರುತ್ತಾರೆ. ಹಲವು ಮೇಳದ ಕಲಾವಿದರು ಇಲ್ಲಿ ಒಗ್ಗೂಡುವುದರಿಂದ ಸಂಪಾಜೆ ಯಕ್ಷೋತ್ಸವ ಕಲಾವಿದರಿಗೆ ತಮ್ಮ ಪ್ರತಿಭೆಯ ನ್ನು ಬೆಳಗುವ ಒರೆ ಹಚ್ಚುವ ಪೈಪೋಟಿ ಏರ್ಪಡುತ್ತದೆ. ಯಾರೂ ಗೈರು ಹಾಜರಾಗುವುದಿಲ್ಲ. 15 ಮಂದಿ ಭಾಗವತರು, 11 ಮಂದಿ ಚಂಡೆವಾದಕರು, ಮೃದಂಗದಲ್ಲಿ 10 ಮಂದಿ ಸಹಕರಿಸಿದರು. ಸುಮಾರು ನೂರಕ್ಕೂ ಮಿಕ್ಕಿ ಯಕ್ಷ ಕಲಾವಿದರು ನಾಲ್ಕು ಪ್ರಸಂಗಗಳನ್ನು ಚಿತ್ರಿಸಿದರು. ಹೊಸ ದಾಖಲೆ
ಈ ಬಾರಿ ಸಂಪಾಜೆ ಉತ್ಸವ 4 ದಿನಕ್ಕೆ ವಿಸ್ತರಿಸಿತ್ತು. ಎರಡು ದಿನ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿದ್ದು, ಉಳಿದ ಎರಡು ದಿನ ವರ್ಷಂಪ್ರತಿಯ ಯಕ್ಷೋತ್ಸವ ನಡೆಯಿತು. ನ. 2ರಂದು ಆರಂಭಗೊಂಡ ಯಕ್ಷೋತ್ಸವ ನ. 5ರಂದು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಿ ಒಟ್ಟು 52 ಗಂಟೆಗಳ ಕಾಲ ಕಾರ್ಯಕ್ರಮ ನಡೆದು ಹೊಸ ದಾಖಲೆ ಸೃಷ್ಟಿಸಿತು. ಹವ್ಯಾಸಿ ಕಲಾವಿದರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 30 ಸಾವಿರ ವನ್ನು ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದ, ದ್ವಿತೀಯ ಬಹುಮಾನ ರೂ. 20 ಸಾವಿರವನ್ನು ಪುತ್ತೂರಿನ ಯಕ್ಷಕೂಟ, ತೃತೀಯ ಬಹುಮಾನ ರೂ. 15 ಸಾವಿರವನ್ನು ಬೆಂಗಳೂರಿನ ಯಕ್ಷಲೋಕ ಪಡೆದುಕೊಂಡಿತು.