Advertisement

ಕನ್ನಡಿಗರ ಶೌರ್ಯದ ಪ್ರತೀಕ ಹೊಸದುರ್ಗ ಕೋಟೆ ನಾಶದತ್ತ

06:05 AM Aug 06, 2017 | Harsha Rao |

ಕಾಸರಗೋಡು: ಕನ್ನಡಿಗರ ಸಾಹಸದ ಪ್ರತೀಕವಾಗಿರುವ ಹೊಸದುರ್ಗ ಕೋಟೆ ನಿರ್ಲಕ್ಷ್ಯದಿಂದ ನಾಶದತ್ತ ಸರಿಯುತ್ತಿದೆ. ಪುರಾವಸ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೋಟೆಯ ವಿವಿಧೆಡೆ ಹಾನಿ ಸಂಭವಿಸಿದೆ. ಹೊಸದುರ್ಗ ಕೋಟೆಯನ್ನು ಸಂರಕ್ಷಿಸಲು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರೂ ಕೋಟೆಯ ರಕ್ಷಣೆಗೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ದುರಸ್ತಿಯ ಬಗ್ಗೆ ಈ ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ಧೋರಣೆಯನ್ನು ತೋರಲಾಗಿದೆ.

Advertisement

ಕರ್ನಾಟಕದ ಬಿದನೂರಿನ ಇಕ್ಕೇರಿ ರಾಜವಂಶಜರಾದ ಸೋಮಶೇಖರ ನಾಯಕ್‌ 1731ರ ಕಾಲಘಟ್ಟದಲ್ಲಿ ಹೊಸದುರ್ಗ ಕೋಟೆ (ಮಲಯಾಳ ಭಾಷೆಯ ಪ್ರಭಾವದಿಂದ “ಪುದಿಯ ಕೋಟ’ ವಾಗಿದೆ) ಯನ್ನು ಕಟ್ಟಲಾಗಿದೆ ಎಂದು ಐತಿಹಾಸಿಕ ದಾಖಲೆಯಲ್ಲಿ ನಮೂದಿಸಲಾಗಿದೆ. ಕನ್ನಡಿಗರ ಶೌರ್ಯ ಸಾಹಸದ ಪ್ರತೀಕವಾಗಿ ನೆಲೆ ನಿಂತಿದೆ. ಆದರೆ ಕೋಟೆಯ ಬಗೆಗಿನ ನಿರ್ಲಕ್ಷÂದಿಂದ ಕೋಟೆಯ ವಿವಿಧೆಡೆ ಗೋಡೆ ಕಲ್ಲುಗಳು ಕುಸಿಯಲಾರಂಭಿಸಿವೆೆ. ಕಳೆದ ವರ್ಷದ ಮಳೆಗೆ ಕೋಟೆಯ ಅಲ್ಲಲ್ಲಿ ಗೋಡೆಗಳು ಕುಸಿದಿತ್ತು, ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದ ಕೋಟೆಯ ಗೋಡೆ ಕುಸಿದು ಬಿದ್ದು, ಕೋಟೆಯ ಅಸ್ತಿತ್ವ ನಾಶವಾಗುವ ಸ್ಥಿತಿಗೆ ತಲುಪಿದೆ.

ಮಾಲಿನ್ಯ ತೆರವು; ಕೋಟೆಗೆ ಹಾನಿ 
ಕೋಟೆ ಮತ್ತು ಪರಿಸರದಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದ ರಿಂದ ಕಾಂಞಂಗಾಡ್‌ ನಗರಸಭೆಯ ಸದಸ್ಯರೋರ್ವರ ನೇತೃತ್ವದಲ್ಲಿ ಶುಚೀಕರಣಕ್ಕೆ ಶ್ರಮಿಸಲಾಯಿತು. ಆದರೆ ಈ ಸಂದರ್ಭದಲ್ಲಿ ಕೋಟೆಯ ಭಾಗದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಲು ಮಣ್ಣು ಸರಿಸಿದ್ದರಿಂದ ಕೋಟೆಯ ಭಾಗಗಳಿಗೆ ಹಾನಿಯಾಗಿರುವುದಾಗಿ ವ್ಯಾಪಕ ಆರೋಪಗಳು ಕೇಳಿ ಬಂದಿವೆ.

ಶುಚೀಕರಣದ ಹಿನ್ನೆಲೆಯಲ್ಲಿ ಕಾಡು ಕಡಿದು ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹು ದೆಂಬ ಹಿನ್ನೆಲೆಯಲ್ಲಿ ಶುಚೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನಗರಸಭಾ ಸದಸ್ಯರೋರ್ವರು ಹೇಳಿದ್ದಾರೆ. ಕೋಟೆಯ ಗೋಡೆಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ತೆಗೆಯುವ ಬದಲಾಗಿ ಮಣ್ಣು ತೆಗೆದುದರಿಂದ ಕೋಟೆ ಭದ್ರತೆಗೆ ಅಪಾಯವೊದಗಿದೆ ಎಂದು ಆರೋಪಿಸ ಲಾಗಿದೆ. ಇದೇ ವೇಳೆ ತ್ಯಾಜ್ಯ ತೆರವುಗೊಳಿಸುವ ಸಂದರ್ಭ ದಲ್ಲಿ ಕೋಟೆಗೆ ಯಾವುದೇ ಹಾನಿಯಾಗಿಲ್ಲ ಎಂದು ನಗರಸಭಾ ಸದಸ್ಯರು ಹೇಳಿದ್ದಾರೆ. ಕೋಟೆಯೊಳಗೆ ಕಾಡು ಬೆಳೆದುದರಿಂದ ಬೇರುಗಳು ಗೋಡೆಗಳ ಮಧ್ಯೆ ನುಸುಳಿ ಗೋಡೆ ಕುಸಿಯಲಾರಂಭಿಸಿದೆ.

2010ರಲ್ಲಿ ಹೊಸದುರ್ಗ ಕೋಟೆಯನ್ನು ಪ್ರಾಚ್ಯವಸ್ತು ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. 2011 ರಲ್ಲಿ ನವೀಕರಣ ಕ್ಕಾಗಿ ಸರಕಾರ 23 ಲಕ್ಷ ರೂ. ಮಂಜೂರು ಮಾಡಿತ್ತು. ಈ ಮೊತ್ತದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದ್ದರೂ ಕೋಟೆಯ ಸಂರಕ್ಷಣೆಗೆ ಶಾಶ್ವತ ಕ್ರಮ ತೆಗೆದುಕೊಂಡಿರಲಿಲ್ಲ.

Advertisement

ಕಳೆದ ವರ್ಷ ಮಳೆಗಾಲದಲ್ಲಿ ನಿತ್ಯಾನಂದ ಆಶ್ರಮದಿಂದ ಕಾಂಞಂಗಾಡ್‌ನ‌ ಲಕ್ಷಿ$¾àವೆಂಕಟೇಶ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಕೋಟೆಯ ಗೋಡೆಗಳು ಕುಸಿದು ಬಿದ್ದಿತ್ತು.

ಸಮಾಜದ್ರೋಹಿಗಳ ಕೇಂದ್ರವಾಗಿ ಬದಲಾವಣೆ
ಹೊಸದುರ್ಗ ಕೋಟೆ ಸಮಾಜದ್ರೋಹಿಗಳ ಕೇಂದ್ರವಾ ಗಿಯೂ, ಕಾಡು ಬೆಳೆದು ಕೋಟೆಯ ಪ್ರಾಮುಖ್ಯತೆ ಕಳೆದು ಕೊಳ್ಳುತ್ತಿದೆ. ಕೋಟೆ ಸಮಾಜದ್ರೋಹಿಗಳ  ಕೇಂದ್ರವಾಗಿ ಬದಲಾಗಿದ್ದರೂ, ಸಂಬಂಧಪಟ್ಟವರು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ ಹೊಸದುರ್ಗ ಕೋಟೆಯನ್ನು ರಕ್ಷಿಸಬೇಕೆಂದು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿಗಳು ಕೋಟೆಯಲ್ಲಿ ಮಾನವ ಸಂಕಲೆಯನ್ನು ನಿರ್ಮಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಕೋಟೆಯನ್ನು ರಕ್ಷಿಸಬೇಕಾದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಹಲವು ಸಂಘ ಸಂಸ್ಥೆಗಳೂ ಕೋಟೆಯನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿತ್ತು. ಖ್ಯಾತ ಇತಿಹಾಸ ತಜ್ಞ ಡಾ| ಎಂ.ಜಿ.ಎಸ್‌. ನಾರಾಯಣನ್‌ ಸಹಿತ ಇತಿಹಾಸ ತಜ್ಞರು ಕೋಟೆಗೆ ತಲುಪಿ ಕೋಟೆಯ ಶೋಚನೀಯ ಸ್ಥಿತಿಯಿಂದ ರಕ್ಷಿಸಿ ಸಂರಕ್ಷಿಸಬೇಕೆಂದು ಸಂಬಂಧಪಟ್ಟವರ ಮೇಲೆ ತೀವ್ರ ಒತ್ತಡ ಹಾಕಿದ್ದರು. ಈ ಕಾರಣದಿಂದ 2015 ರಲ್ಲಿ  ಕೇರಳ ರಾಜ್ಯ ಪ್ರಾಚ್ಯ ವಸ್ತು ಇಲಾಖೆ 22 ಲಕ್ಷ ರೂ. ವೆಚ್ಚದಲ್ಲಿ ಕೋಟೆ ಸುತ್ತ ಗೋಡೆಯನ್ನು ದುರಸ್ತಿಗೊಳಿಸಿ, ಕೋಟೆಯಲ್ಲಿ ಬಹಳಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದ ಕಾಡನ್ನು ಸವರಿದ್ದರು.

ಪ್ರವಾಸಿಗಳನ್ನು ಆಕರ್ಷಿಸುವ ರೀತಿಯಲ್ಲಿ ಕೋಟೆಯನ್ನು ಸಂರಕ್ಷಿಸುವ ಜತೆಗೆ ಕೋಟೆಯ ಮೂಲ ಸ್ವರೂಪಕ್ಕೆ ಯಾವುದೇ ಅಡ್ಡಿಯಾಗದಂತೆ ನವೀಕರಿಸಲಾಗುವುದು ಎಂದು ಸಂಬಂಧಪಟ್ಟವರು ಅಂದು ಭರವಸೆ ನೀಡಿದ್ದರು. ಆದರೆ ಭರವಸೆಗಳೆಲ್ಲ ಕಡತದಲ್ಲೇ ಉಳಿದುಕೊಂಡು ಮತ್ತೆ ಹಳೆಯ ಸ್ಥಿತಿಗೆ ತಲುಪಿದೆ. ಕಾಡು ಬೆಳೆದು ಕೋಟೆಯ ಗೋಡೆಗಳ ಕಲ್ಲಿನ ಮಧ್ಯೆ ಬೇರುಗಳು ನುಸುಳಿ ಕೋಟೆಯ ಗೋಡೆ ಕುಸಿದು ಬೀಳುವಂತಾಯಿತು.

ಕಾಸರಗೋಡು ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಸ್ವಂತ ಕಚೇರಿ ಇಲ್ಲದಿರುವುದರಿಂದ ಈ ಕೋಟೆಯ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿಲ್ಲ. ಆದುದರಿಂದ ಈ ಕೋಟೆ ವರ್ಷದಿಂದ ವರ್ಷಕ್ಕೆ ನಾಶದ ಅಂಚಿಗೆ ಸರಿಯುತ್ತಲೇ ಇದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋಟೆಯ ಅಸ್ತಿತ್ವವೇ ಕಾಣಸಿಗದು.

ಇನ್ನಾದರೂ ಈ ಕೋಟೆಯನ್ನು ಸಂರಕ್ಷಿಸಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಪ್ರಾಚ್ಯ ವಸ್ತು ಇಲಾಖೆ ಮುಂದಾಗಬೇಕಾಗಿದೆ. ಆ ಮೂಲಕ ಐತಿಹಾಸಿಕ ಹಿನ್ನೆಲೆಯ ಈ ಕೋಟೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಜೊತೆಯಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸುವಲ್ಲಿ ಈ ಕೋಟೆ ನೆರವಾಗಬಹುದು.

ಐತಿಹಾಸಿಕ ಪ್ರಾಮುಖ್ಯತೆ
ಈ ಕೋಟೆಗೆ ಸಾಕಷ್ಟು ಇತಿಹಾಸವಿದೆ. 1731 ರಲ್ಲಿ ಇಕ್ಕೇರಿ ರಾಜ ವಂಶಜರು ಈ ಕೋಟೆಯನ್ನು ನಿರ್ಮಿಸಿದ್ದಾರೆ. ಈ ಕೋಟೆಗೆ ಅಂದು “ಹೊಸದುರ್ಗ’ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಇಂದು ಮಲಯಾಳದ ಪ್ರಭಾವದಿಂದ “ಪುದಿಯ ಕೋಟ’ ವಾಗಿದೆ. ಕಾಂಞಂಗಾಡ್‌ಗೆ ಖ್ಯಾತಿಯನ್ನು ತಂದುಕೊಟ್ಟಿ ರುವ ಈ ಕೋಟೆ ನಾಶದಂಚಿಗೆ ಸರಿದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ಗೌರವಕ್ಕೆ ಪಾತ್ರವಾಗಿರುವ ಈ ಕೋಟೆಯ ಬಗ್ಗೆ ಕೋಟೆ ಸಂರಕ್ಷಣ ಸಮಿತಿ ಜಿಲ್ಲಾ ಅಧ್ಯಕ್ಷರಾಗಿದ್ದ ಸುಕುಮಾರನ್‌ ಪೆರಿಯಚ್ಚಾರು ಅವರು ಮಾಹಿತಿ ಹಕ್ಕು ಪ್ರಕಾರ ಪಡೆದುಕೊಂಡ ಮಾಹಿತಿಯಂತೆ ಈ ಕೋಟೆಗೆ ಸುಮಾರು 12 ಎಕರೆ ಸ್ಥಳವಿದೆ ಎಂದು ಸರಕಾರವೇ ಸ್ಪಷ್ಟಪಡಿಸಿದೆ. ಈ ಕೋಟೆಯೊಳಗೆ ಹಲವು ಸರಕಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆ. ಸಾಕಷ್ಟು ಸ್ಥಳಗಳು ಖಾಸಗಿ ವ್ಯಕ್ತಿಗಳ ಕೈಸೇರಿವೆೆ. ಇದೀಗ ಕೋಟೆಯ ಬುರುಜುಗಳು, ಗೋಡೆಗಳು, ಪಾಳು ಬಾವಿಗಳು ಕೇವಲ ಮೂರು ಕಾಲು ಎಕರೆಯೊಳಗೆ ಸೀಮಿತಗೊಂಡಿವೆ. ವರ್ಷಗಳ ಹಿಂದೆ ರಾಜಕೀಯ ಪಕ್ಷವೊಂದು ತಮ್ಮ ಪಕ್ಷದ ಪತಾಕೆಯನ್ನು ಕೋಟೆಯ ಬತ್ತೇರಿ ಮೇಲೆ ನಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next