Advertisement

ಗ್ಯಾಂಗ್‌ರೇಪ್‌ ಕೇಸ್‌:ಪ್ರಜಾಪತಿ ಸೆರೆ; 14 ದಿನಗಳ ನ್ಯಾಯಾಂಗ ಬಂಧನ

09:04 AM Mar 15, 2017 | |

ಲಕ್ನೋ: ಉತ್ತರಪ್ರದೇಶದ ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್‌ ರೇಪ್‌ ನಡೆಸಿದ ಆರೋಪ ಹೊತ್ತು 15 ದಿವಸಗಳಿಂದ ತಲೆ ಮರೆಸಿಕೊಂಡಿದ್ದ  ಮಾಜಿ ಸಚಿವ ಗಾಯತ್ರಿ ಪ್ರಜಾಪತಿಯನ್ನು ಕೊನೆಗೂ ಪೊಲೀಸರು ಬಂಧಿಸುವವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಬಂಧಿಸಿ ನ್ಯಾಯಾಲಯದ ಎದರು ಹಾಜರು ಪಡಿಸಲಾಯಿತು. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಖೀಲೇಶ್‌ ಸಿಂಗ್‌ ಸರ್ಕಾರ ರೇಪ್‌ ಆರೋಪ ಕೇಳಿ ಬಂದರೂ ಸಂಪುಟದಿಂದ ಕೈ ಬಿಟ್ಟಿರಲಿಲ್ಲ, ಮಾತ್ರವಲ್ಲದೆ ಎಫ್ಐಆರನ್ನೂ ದಾಖಲು ಮಾಡಿರಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕವೇ ಎಫ್ಐಆರ್‌ ದಾಖಲು ಮಾಡಿ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಜಾಪತಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣಬೇಕಾಗಿತ್ತು. 

49ರ ಹರೆಯದ ಎಸ್‌ಪಿ ನಾಯಕ ಗಾಯತ್ರಿ ಪ್ರಜಾಪತಿಯ  ವಿರುದ್ಧ ಲುಕ್‌ ಔಟ್‌ ನೊಟೀಸ್‌ ಮಾತ್ರವಲ್ಲದೆ, ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಕೂಡ ಜಾರಿ ಮಾಡಲಾಗಿತ್ತು.  ಪ್ರಕರಣಕ್ಕೆ ಸಂಬಂಧಪಟ್ಟು ಈ ತನಕ ಪೊಲೀಸರು ವಶಕ್ಕೆ ತೆಗೆದುಕೊಂಡಿರುವವರ ಸಂಖ್ಯೆ ಈಗ ಏಳಕ್ಕೆ ಏರಿದೆ. 

ಮಹಿಳೆಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರದ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟು ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರ ಆರು ಮಂದಿಯ ವಿರುದ್ಧ ಕಳೆದ ಫೆ.17ರಂದು ಸುಪ್ರೀಂ ಕೋರ್ಟ್‌ ಆಣತಿಯ ಮೇರೆಗೆ ಎಫ್ಐಆರ್‌ ದಾಖಲಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next