Advertisement
ಕೊಟ್ರೇಶ್ ಓದಿದ್ದು ಮೂರನೆಯ ತರಗತಿಯವರೆಗೆ ಮಾತ್ರ. ಏಕೆ ಶಾಲೆಗೆ ಹೋಗಬೇಕು? ಎನ್ನುವ ವಿಷಯವೇ ಅರ್ಥವಾಗದ ವಯಸ್ಸಿನಲ್ಲಿ ನೆರೆಹೊರೆಯ ಬಾಲಕರೊಂದಿಗೆ ಬ್ಯಾಗನ್ನೇರಿಸಿ ಈತ ಶಾಲೆಗೆ ಹೊರಟು ನಿಲ್ಲುತ್ತಿದ್ದರು. ಆ ದಿನಗಳಲ್ಲೇ ಕೃಷಿ ಭೂಮಿಯ ಸಾಗುವಳಿಯೊಂದಿಗೆ ಇತರರ ಜಮೀನನ್ನೂ ಲಾವಣಿಗೆ ಪಡೆದು ಬೇಸಾಯ ಮಾಡುತ್ತಿದ್ದ ತಂದೆ, ಕೃಷಿಯೆಡೆಗೆ ಈ ಬಾಲಕನ ಗಮನ ಸೆಳೆದರು. ಎರಡು ಎತ್ತು, ನಾಲ್ಕು ಎಮ್ಮೆ ಮನೆಯಲ್ಲಿದ್ದವು. ಭರ್ತಿ ಹಾಲು ಹಿಂಡುವ ಎಮ್ಮೆಗಳು. ಹಾಲನ್ನು ಮಾರಲು ಮನೆ ಮನೆಗೆ ತೆರಳಬೇಕಿತ್ತು. ಈ ಕಾರಣಕ್ಕೇ ಶಾಲೆಗೆ ಗುಡ್ ಬೈ ಹೇಳಿ ಕೃಷಿಕಮತದೊಂದಿಗೆ ಹೈನುರಾಸುಗಳ ಚಾಕರಿಕೆ ಮಾಡುತ್ತಾ ಹದಿನೈದು ವರ್ಷ ಕಳೆದು ಬಿಟ್ಟರು ಬಾಲಕ ಕೊಟ್ರೇಶ್.
Related Articles
ಅಲೆಯತೊಡಗಿದರು. ಹಲವು ದಿನಗಳ ಕಾಲ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೃಷಿ ಇಲಾಖೆಯಲ್ಲಿ ಭೂ
ಚೇತನ ಕಾರ್ಯಕ್ರಮದ ಅನುಷ್ಠಾನಕ್ಕೆ ಹಳ್ಳಿ ಹಳ್ಳಿಗಳನ್ನು ಸುತ್ತಿ ಕೆಲಸ ನಿರ್ವಹಿಸಲು ಜನರೊಬ್ಬರು ಬೇಕಾಗಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಾಗ, ಆ ಕೆಲಸ ಗಿಟ್ಟಿಸಿಕೊಂಡಿದ್ದರು. ವರ್ಷದಲ್ಲಿ ಆರು ತಿಂಗಳು ಕೆಲಸ. ಉಳಿಕೆ ದಿನಗಳಲ್ಲಿ ಮನೆಯ ಕೃಷಿ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದರು. ಎಂಟು ಹಳ್ಳಿಗಳನ್ನು ಸುತ್ತಿ ರೈತರಿಗೆ ಸಾವಯವ ಕೃಷಿಯ ಬಗ್ಗೆ, ಸಾವಯವ ಔಷಧಿಗಳ ಬಗ್ಗೆ ಮಾಹಿತಿ ನೀಡುವುದು ಇವರ ಕೆಲಸ. ಪ್ರತಿಯಾಗಿ ಮಾಸಿಕ 4,500 ರೂ ಸಂಬಳ ಪಡೆದುಕೊಳ್ಳುತ್ತಿದ್ದರು.
Advertisement
ಆದರೂ ಲಕ್ಷ ರೂಪಾಯಿ ಗಳಿಸಿ ಬೋರ್‌ವೆಲ್ ಕೊರೆಸುವ ಕನಸು ಸುಲಭವಾಗಿ ಕೈಗೆಟುಕುವಂತಿರಲಿಲ್ಲ.ತಂದೆಯ ಅಕಾಲಿಕ ಮರಣದ ನಂತರ ಕೃಷಿಯ ಸಂಪೂರ್ಣ ಜವಾಬ್ದಾರಿ ಇವರ ಹೆಗಲಿಗೆ ಬಿತ್ತು. 1,20,000 ರೂ. ಕೈಗಡ
ಪಡೆದುಕೊಂಡು ಬೋರ್‌ವೆಲ್ ಕೊರೆಸುವ ದೃಢ ಮನಸ್ಸು ಮಾಡಿದರು. ತಾನು ದುಡಿದು ಕೂಡಿಟ್ಟ 30,000 ರೂ.
ಜೊತೆಯಾಗಿಸಿ ಬೋರ್‌ವೆಲ್ ಕೊರೆಸಿದರು. ಒಂದೂವರೆ ಇಂಚು ನೀರು ಒಸರಿತು. ಜೋಳ ಬೆಳೆಯುತ್ತಿದ್ದ ಭೂಮಿಯಲ್ಲಿ ಮೊದಲ ಬಾರಿಗೆ ಬೀಜದ ಸೌತೆ ಕೃಷಿ ನಲಿಯಿತು. ಮೂರು ತಿಂಗಳಲ್ಲಿ 10,000
ರೂಪಾಯಿ ಲಾಭದೊಂದಿಗೆ ಇಳುವರಿ ಕೈ ಸೇರಿತ್ತು. ‘ಒಂದೂವರೆ ಇಂಚು ನೀರಿನಲ್ಲಿ ತರಕಾರಿ ಕೃಷಿ ಕಷ್ಟಸಾಧ್ಯ ಹೂನ ಕೃಷಿ ಪ್ರಯತ್ನಿಸಿ ನೋಡು, ದಿನವೂ ಆದಾಯ ಎಂದು ಕೈ ಸೇರುತ್ತದೆ. ಸ್ವಲ್ಪ ನೀರಿದ್ದರೂ ಹೂವಿನ ಕೃಷಿ ಮಾಡಬಹುದು. ಆತ್ಮೀಯರೊಬ್ಬರು ಸಲಹೆ ನೀಡಿದರು. ಅವರ ಮಾತಿಗೆ ಒಪ್ಪಿ ಚಳ್ಳಕೆರೆಯಿಂದ ಆರು ಕ್ವಿಂಟಾಲ್ ಸುಗಂಧರಾಜ ಗಡ್ಡೆಗಳನ್ನು ತಂದು ಕಾಲೆಕರೆಯಲ್ಲಿ ಊರಿದರು. ಸುಗಂಧರಾಜ ಕೃಷಿಯಲ್ಲಿ ಮೂರು ವರ್ಷದ ಅನುಭವ ಪಡೆದಿರುವ ಕೊಟ್ರೇಶ್ ಗಡ್ಡೆಗಳನ್ನು ಕಿತ್ತು ಬೇರೆ ಕಾಲೆಕರೆಯಲ್ಲಿ ನಾಟಿ ಮಾಡಿದ್ದಾರೆ. ಹೊಸ ಮಣ್ಣಿನಲ್ಲಿ ಹುಲುಸಾಗಿ ಎದ್ದ ಗಿಡಗಳು ಭರ್ತಿ ಹೂ ಇಳುವರಿ ನೀಡುತ್ತಿವೆ. ದಿನವೂ ಹೂ ಕೊಯ್ಲು ಮಾಡುತ್ತಾರೆ. ಪ್ರತಿ ಕೊಯ್ಲಿನಿಂದ ಎರಡೂವರೆ ಕೆ.ಜಿ ಹೂ ಸಿಗುತ್ತಿದೆ. ಕಿಲೋ ಹೂಗೆ 70-110 ರೂ. ದರ ಸಿಗುತ್ತಿದೆ. ಅಕ್ಕಪಕ್ಕದ ಹೊಲಗಳಲ್ಲಿ ಬೆಳೆಯಿದ್ದಾಗ ಸುಗಂಧ ರಾಜದ ಕೃಷಿ ತಾಕಿಗೆ ಹುಳುಗಳು ಬೀಳುವುದು ಜಾಸ್ತಿ. ವಾರಕ್ಕೊಮ್ಮೆ ಸಿಂಪರಣೆ ಬೇಕೆ ಬೇಕು. ಬೆಳೆ ಇಲ್ಲದಾಗ ತಿಂಗಳಿಗೊಮ್ಮೆ ಸಿಂಪಡಿಸುವುದೂ ಇದೆ. ಸುಗಂಧರಾಜ ಗಡ್ಡೆಗಳೂ
ಇವರಿಗೆ ಆದಾಯ ತಂದುಕೊಟ್ಟಿದೆ. ಸ್ಥಳ ಬದಲಾುಸುವಾಗ ಅಗೆದ ಗಡ್ಡೆಗಳನ್ನು ತಮಗೆಷ್ಟು ಬೇಕೋ ಅಷ್ಟು ಇಟ್ಟುಕೊಂಡು
ಉಳಿಕೆಯನ್ನು ಮಾರಿದ್ದರು. ಆಗ ಕ್ವಿಂಟಾಲ್‌ಗೆ 1500 ದಂತೆ 15 ಕ್ವಿಂಟಾಲ್ ಗೆಡ್ಡೆಗಳು ಮಾರಾಟವಾಗಿದ್ದವು ಎನ್ನುತ್ತಾರೆ ಕೊಟ್ರೇಶ್. ಸುಗಂಧ ಹೂವಿನ ಕೃಷಿ ಇವರಲ್ಲಿ ಹೊಸ ಆಸೆಯೊಂದನ್ನು ಹುಟ್ಟು ಹಾಕಿತು. ಇದರೊಂದಿಗೆ ಗುಲಾಬಿ ಕೃಯನ್ನು
ಜೊತೆಯಾಗಿಸಿಕೊಂಡರೆ ಹೇಗೆಂದು ಆಲೋಚಿಸಿದರು. ತಡ ಮಾಡದೇ ಸಜಾìಪುರದ ನರ್ಸರಿಗೆ ತೆರಳಿ ಬಟನ್ಸ್ ತಳಿಯ
1000 ಗಿಡಗಳನ್ನು ತಂದಿಳಿಸಿಕೊಂಡರು. ಮುಕ್ಕಾಲು ಎಕರೆಯಲ್ಲಿ ಗಿಡದಿಂದ ಗಿಡಕ್ಕೆ ಮೂರೂವರೆ ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿಯಂತೆ ನಾಟಿ ಮಾಡಿದರು. ಕಳೆ ನಿಯಂತ್ರಣ, ಗೊಬ್ಬರ ಉಣಿಕೆ, ವಾರ ವಾರದ ಸಿಂಪರಣೆಯ ಪರಿಣಾಮ ಬಟನ್ಸ್ ಗಿಡಗಳು ಹೂವರಳಿಸಿ ನಿಂತವು. ಮೂರು ತಿಂಗಳಿನಿಂದ ಹೂವು ಕೊಯ್ಲಿಗೆ ಆರಂಭ. ಪ್ರಾರಂಭದಲ್ಲಿ ಐದು ಕಿ.ಗ್ರಾಂ ವರೆಗೆ ಹೂವು ಸಿಗುತ್ತಿತ್ತು. ಈಗ ಗಿಡ ನೆಟ್ಟು ವರ್ಷ ಕಳೆದಿದೆ. ದಿನಕ್ಕೆ 15 ಕೆಜಿ ಹೂವು ಸಿಗುತ್ತಿದೆ. ಕಿಲೋ ಹೂಗೆ ದಿನ ನಿತ್ಯದ ದರದಲ್ಲಿ ವ್ಯತ್ಯಾಸವಾಗುತ್ತದೆ. 60-250 ರೂಪಾಯಿ ವರೆಗೆ ಸಿಗುತ್ತದೆ. ಕಾಲೆಕರೆಯಲ್ಲಿ ಬಣ್ಣದ ಸೇವಂತಿಗೆ ಕೃಷಿ ಮಾಡುತ್ತಿದ್ದಾರೆ. ಸ್ವತಃ ಗಿಡಗಳನ್ನು ತಯಾರಿಸಿಕೊಳ್ಳುತ್ತಾರೆ. ಅರ್ಧ ಅಡಿ ಎತ್ತರ ಮೂರು ಅಡಿ ಅಗಲ, ಅಗತ್ಯದ್ದಷ್ಟು ಉದ್ದದ ಹುಡಿ ಮಣ್ಣಿನ ಏರು ಮಡಿ ತಯಾರಿಸಿ ಸೇವಂತಿಗೆ ಬೀಜ ಚೆಲ್ಲುತ್ತಾರೆ. ಬೆಳೆದುನಿಂತ ಗಿಡಗಳನ್ನು ಹದಗೊಳಿಸಿದ ಭೂಮಿಯಲ್ಲಿ ಗಿಡದಿಂದ ಗಿಡ ಮೂರು ಅಡಿ, ಸಾಲಿನಿಂದ ಸಾಲು ನಾಲ್ಕು ಅಡಿಗೆ ಒಂದರಂತೆ ನಾಟಿ ಮಾಡುತ್ತಾರೆ. ಎರಡೂವರೆ ತಿಂಗಳಿಗೆ ಹೂವು ಕೊಯ್ಲಿಗೆ ಸಿಗುತ್ತಿದೆ. ಎಂಟು ತಿಂಗಳ ವರೆಗೆ ಯತೇಚ್ಚ ಇಳುವರಿ ಲಭ್ಯ. ಗೊಬ್ಬರ ಉಣಿಕೆ, ಔಷಧಿ ಸಿಂಪರಣೆಯಂತಹ ಕೆಲಸಗಳನ್ನು ಅಚ್ಚುಕಟ್ಟಾಗಿ ಪೂರೈಸಿದರೆ ಹತ್ತು ತಿಂಗಳ ವರೆಗೂ ಹೂವು ಹರಿಯಬಹುದು. ನಾಟಿ ಮಾಡಿದ ಗಿಡಗಳು ಆರು ತಿಂಗಳಿರುವಾಗ ಬೇರೆಡೆಯಲ್ಲಿರುವ ಇನ್ನೊಂದು ಕಾಲೆಕರೆಯನ್ನು ಹದಗೊಳಿಸಲು ಆರಂಭಿಸುತ್ತಾರೆ. ಏರು ಮಡಿ ತಯಾರಿಸಿ ಬೀಜ ಉದುರಿಸಿ ಇಡುತ್ತಾರೆ. ಗಿಡ ನಾಟಿಗೆ ಸಿದ್ದಗೊಂಡಾಗ ಕಿತ್ತು ನಾಟಿ ಮಾಡುತ್ತಾರೆ. ಹೊಸ ಕೃಷಿ ತಾಕಿನಲ್ಲಿಯ ಗಿಡಗಳಲ್ಲಿ ಹೂವು ಆರಂಭಗೊಳ್ಳುವ ವೇಳೆಗೆ ಹಳೆಯ ಕಾಲೆಕರೆಯಲ್ಲಿನ ಸೇವಂತಿಗೆ ಅಳಿಯುವ
ಹಂತದಲ್ಲಿರುತ್ತದೆ. ಹೊಸ ತಾಕಿನಿಂದ ಇಳುವರಿ ಸರಳವಾದಾಗ ಹಳೆಯ ಗಿಡಗಳನ್ನು ಕಿತ್ತೂಗೆದು ಆ ಭೂಮಿಯಲ್ಲಿ ಮನೆ ಅಗತ್ಯ ಪೂರೈಕೆಯ ಸೊಪ್ಪು ತರಕಾರಿ ಬೆಳೆದುಕೊಳ್ಳುತ್ತಾರೆ. ಇವರ ಹೂವಿನ ಜಾಣ್ಮೆ ಮೆಚ್ಚಲು ಇನ್ನೊಂದು ಕಾರಣವಿದೆ.
ದೀಪಾವಳಿಯ ಸಂದರ್ಭ ಕೊಯ್ಲಿಗೆ ಬರುವಂತೆ ಖಾಲಿ ಜಮೀನುಗಳಲ್ಲೆಲ್ಲಾ ಚಂಡು ಹೂನ ಗಿಡ ಊರುವ ಜಾಣ್ಮೆ
ತೋರುತ್ತಾರೆ. ಕಳೆದ ವರ್ಷದ ಹಬ್ಬದ ವೇಳೆ 37,000 ರೂ. ಆದಾಯ ಗಳಿಸಿದ್ದನ್ನು ನೆನಪಿಸಿಕೊಂಡರು. ಕೊಯ್ಲು ಮಾಡಿದ ಹೂವುಗಳನ್ನು ಚಿತ್ರದುರ್ಗ ಮಾರುಕಟ್ಟೆಗೆ, ಜಗಳೂರಿನ ಕೆಲವು ವ್ಯಾಪಾರಸ್ಥರಿಗೆ ತಲುಪಿಸುವುದೂ ಇದೆ. ಬಿರು ಬೇಸಿಗೆಯಲ್ಲಿ ಜಗಳೂರಿನಲ್ಲಿ ಬರದ್ದೇ ಮಾತು. ಬರ ತಂದೊಡ್ಡುವ ವ್ಯಥೆ ಮಾತಿನಲ್ಲಿ ಸಹಜವೆಂಬಂತೆ ವರ್ಗಾವಣೆಯಾಗುತ್ತಿರುತ್ತದೆ. ಇವುಗಳ ಪರಿವಿಲ್ಲದೇ ಹಸಿರು ಉಳಿಸಿಕೊಂಡ ಜಮೀನಿನಲ್ಲಿ ಹೂವು ಬಿಡುಸುವಲ್ಲಿ ಮಗ್ನರಾಗಿರುತ್ತಾರೆ ಕೊಟ್ರೇಶ್. – ಕೋಡಕಣಿ ಜೈವಂತ ಪಟಗಾರ