Advertisement

ಶುಕ್ರವಾರವೂ ಸುರಿದು ನಾಗರಿಕರ ಕಾಡಿದ ಮಳೆರಾಯ

11:49 AM May 19, 2018 | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿದ್ದು, ಮರದ ಕೊಂಬೆಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಪರಿಣಾಮ ಕೆಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಆದರೆ, ಯಾವುದೇ ಅನಾಹುತವಾಗಿಲ್ಲ.

Advertisement

ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಬನಶಂಕರಿ 2ನೇ ಹಂತದ ಬಿಡಿಎ ವಾಣಿಜ್ಯ ಸಂಕೀರ್ಣದ ಬಳಿ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ. ಮರದ ಕೊಂಬೆಗಳು ಸಮೀಪದ ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್‌ ತಂತಿಗಳು ತುಂಡಾಗಿವೆ.

ಆದರೆ, ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ಹೆಬ್ಟಾಳದ ಸೀತಪ್ಪ ಬಡಾವಣೆಯ 6ನೇ ಅಡ್ಡರಸ್ತೆ, ಎಚ್‌ಎಸ್‌ಆರ್‌ ಬಡಾವಣೆ 1ನೇ ಹಂತ, ಜೆ.ಪಿ.ನಗರದ 2 ಹಾಗೂ 3ನೇ ಹಂತಗಳಲ್ಲಿ ತಲಾ ಒಂದು ಮರ ಉರುಳಿದ್ದು, ಮತ್ತಿಕೆರೆ, ಎಚ್‌ಆರ್‌ಬಿಆರ್‌ ಬಡಾವಣೆ

ಸೇರಿದಂತೆ ಹಲವು ಕಡೆ ಮುರಿದು ಬಿದ್ದದ್ದ ಮರದ ಕೊಂಬೆಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಇದರೊಂದಿಗೆ ಓಕಳಿಪುರ ಅಂಡರ್‌ ಪಾಸ್‌, ಕೆ.ಆರ್‌.ವೃತ್ತ ಅಂಡರ್‌ ಪಾಸ್‌ಗಳಲ್ಲಿ ಸ್ವಲ್ಪಮಟ್ಟಿಗೆ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next