Advertisement
ಈ ಪ್ರದೇಶದಲ್ಲಿರುವ ಕೋಳಿ ಫಾರಂನ ಸ್ವಚ್ಛತೆಯ ಕೊರತೆ ಇದ್ದು ಮತ್ತು ಕೋಳಿಗಳಿಗೆ ಹಾಕುವ ಆಹಾರಗಳಿಂದಾಗಿ ನೊಣಗಳು ರಕ್ತಬೀಜಾಸುರನಂತೆ ಹುಟ್ಟಿಕೊಳ್ಳುತ್ತಿವೆ. ಇದೇ ನೊಣಗಳು ಊರಿಗೆ ಹರಡಿಕೊಂಡು ಗ್ರಾಮಸ್ಥರ ನೆಮ್ಮದಿ ಹಾಳುಗೆಡುತ್ತಿರುವುದಕ್ಕೆ ಕಾರಣ ಎಂಬುದು ಗ್ರಾಮಸ್ಥರು ವಾದ. ಈ ಬಗ್ಗೆ ಇತ್ತೀಚೆಗೆ ಗ್ರಾಮಸಭೆಯಲ್ಲಿ ಕೂಡ ಆರೋಪಿಸಲಾಗಿತ್ತು.
Related Articles
ಈಗಾಗಲೇ ಎಡಪದವು ಪಂಚಾಯತ್ ಅಧ್ಯಕ್ಷೆ, ಪಿಡಿಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಿ ಆರೋಗ್ಯ ಇಲಾಖೆಗೆ ನೀಡಿದ್ದಾರೆ.
Advertisement
ಆಲ್ಲದೆ ಈ ಬಗ್ಗೆ ಎಡಪದವು ಗ್ರಾಮ ಸಭೆಯಲ್ಲೂ ಬಿಸಿಬಿಸಿ ಚರ್ಚೆ ನಡೆದಿದ್ದು, ಕ್ರಮ ಕೈಗೊಳ್ಳುವ ಭರವಸೆ ಅರೋಗ್ಯ ಇಲಾಖಾ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು, ಆಡಳಿತ ಮಂಡಳಿ ನೀಡಿದೆ.
ತಾಲೂಕು ಆರೋಗ್ಯ ಕೇಂದ್ರಕ್ಕೆ ವರದಿ ಸಲ್ಲಿಕೆನೊಣಗಳ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೈತನ್ಯ ಅವರು ಸ್ಥಳಪರಿಶೀಲನೆ ನಡೆಸಿದ್ದು ಇದರ ವರದಿ ತಯಾರಿಸಿ ತಾಲೂಕು ಆರೋಗ್ಯ ಕೇಂದ್ರಕ್ಕೆ ನೀಡಲಿದ್ದಾರೆ. ಗ್ರಾಮಸಭೆ ನಡೆದ ಮರುದಿನವೇ ಪಂಚಾಯತ್ ಪಿಡಿಒ ಅವರು ಕೋಳಿ ಫಾರಂ ಮಾಲಕರಿಗೆ ನೋಟಿಸ್ ಕಳಿಸಿದ್ದು, ಫಾರಂನಲ್ಲಿ ನೊಣಗಳನ್ನು ನಿಯಂತ್ರಿಸಲು ತಿಳಿಸಲಾಗಿದೆ, ಇಲ್ಲವಾದರೆ ಕೋಳಿ ಫಾರಂ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಮಸ್ಯೆ ಮುಂದುವರಿದರೆ ಕೋಳಿ ಫಾರಂ ವಿರುದ್ಧ ಕ್ರಮ ಕೈಗೊಳ್ಳುವುದು ಎಂದು ಎಡಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ತಿಳಿಸಿದ್ದಾರೆ. ಸೂಕ್ತ ಕ್ರಮಕ್ಕೆ ಆಗ್ರಹ
ಕಿನ್ನಿಬೆಟ್ಟು ನಲ್ಯ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೊಣಗಳ ಉತ್ಪಾದನೆಯ ಕಾರಣಗಳನ್ನು ತಿಳಿದುಕೊಂಡು ಕೋಳಿ ಫಾರಂನ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯನ್ನು ಗ್ರಾಮ ಪಂಚಾಯತ್‌ಗೆ ಸಲ್ಲಿಸಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಬಹುದು.
– ಡಾ| ಚೈತನ್ಯ, ವೈದ್ಯಾಧಿಕಾರಿ, ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರ