Advertisement

ಸಮ್ಮೇಳನ ಸ್ವಾರಸ್ಯ

11:46 PM Feb 06, 2020 | Lakshmi GovindaRaj |

ಒಂದು ದಿನದ ಕೆಲಸಕ್ಕೆ ಪೊಲೀಸರ 600 ಕಿ.ಮೀ. ಪ್ರಯಾಣ!: ಕೆಲಸ ಮಾಡಿದ್ದು ಒಂದೇ ದಿನ. ಆದರೆ, ಅದಕ್ಕಾಗಿ 600 ಕಿ.ಮೀ. ದೂರದಿಂದ ಬರ ಬೇಕಾಯ್ತು. ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ನಿಯೋಜನೆಗೊಂಡ ಕೆಲ ಪೊಲೀಸರ ಪಜೀತಿ ಇದು. ರಾಮನಗರ ಜಿಲ್ಲೆಯ ಕೆಲ ಸಿಬ್ಬಂದಿ ಸಮ್ಮೇಳನದ ಎರಡನೇ ದಿನದ ಬೆಳಗ್ಗೆ ಸೇವೆಯಿಂದ ನಿರ್ಗಮಿಸಿ ಊರ ಕಡೆ ಪಯಣ ಬೆಳೆಸಿದ್ದಾರೆ. ಮೂರು ದಿನಗಳ ಕರ್ತವ್ಯ ಎಂದೇ ಅಷ್ಟು ದೂರದಿಂದ ಬಂದವರಿಗೆ ಇಲ್ಲಿ ಮೊದಲ ದಿನವಷ್ಟೇ ಕೆಲಸತ್ತು. ಎರಡನೇ ದಿನ ಅಗತ್ಯವಿದ್ದರೂ ಮರಳಿ ಗೂಡಿಗೆ ಬರು ವಂತೆ ಸೂಚನೆ ಬಂದ ಕಾರಣ ಅರೆಮನಸ್ಸಿನಿಂದಲೇ ಸಿಬ್ಬಂದಿ ಹಿಂದಿರುಗಿದ್ದಾರೆ.

Advertisement

ಆದರೆ, ಅಷ್ಟು ದೂರದಿಂದ ಹಾಗೆ ಬಂದು ಹಾಗೆ ಹೋಗುತ್ತಿರುವುದು ಸಿಬ್ಬಂದಿ ತಾಳ್ಮೆ ಪರೀಕ್ಷಿಸುವಂತಿದೆ. ಈ ಬಗ್ಗೆ ಅಸಮಾಧಾನ ತೋಡಿಕೊಂಡ ಕೆಲ ಸಿಬ್ಬಂದಿ, ನಾವು ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇವಲ್ಲ ಎಂಬ ಖುಷಿಯಲ್ಲಿಯೇ ಬಂದಿ ದ್ದೆವು. ಬಿಡುವು ಮಾಡಿಕೊಂಡು ಒಂದಷ್ಟು ಪುಸ್ತಕ ಖರೀದಿಸಿ ಹೋಗಬೇಕು ಎಂದಿತ್ತು. ಆದರೆ, ಈಗ ದಿಢೀರ್‌ ಹಿಂದಿರುಗಿ ಎಂದು ಸೂಚನೆ ನೀಡಿದ್ದಾರೆ. 600 ಕಿ.ಮೀ. ದೂರದಿಂದ ಬಂದು ಒಂದೇ ದಿನಕ್ಕೆ ವಾಪಸ್‌ ಹೋಗಬೇಕಲ್ಲ ಎಂಬ ಬೇಸರವಿದೆ ಎಂದರು.

ಖಾಲಿ ಕುರ್ಚಿಗಳಿಗೆ ನಮಸ್ಕಾರ…: ಪ್ರಧಾನ ವೇದಿಕೆ ಬಿಟ್ಟರೆ, ಇಲ್ಲಿ ಇನ್ನೆರಡು ಗೋಷ್ಠಿ ನಡೆಯುವ ವೇದಿಕೆಗಳು ಬಲುದೂರ. ಹಾಗಾಗಿ ಅಷ್ಟು ದೂರ ಹೋಗಿ ಗೋಷ್ಠಿ ಕೇಳುವವರ ಸಂಖ್ಯೆ ಬಹಳ ಕಡಿಮೆ. ಪುಸ್ತಕ ಲೋಕ ಕುರಿತಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಕಂಬತ್ತಳ್ಳಿ ಅವರು, ತಮ್ಮ ಭಾಷಣದ ಆರಂಭದಲ್ಲಿ “ಖಾಲಿ ಕುರ್ಚಿಗಳಿಗೆ ನಮಸ್ಕಾರ…’ ಎನ್ನುತ್ತಲೇ ಭಾಷಣ ಆರಂಭಿಸಿದರು. ಒಟ್ಟಿನಲ್ಲಿ ಇಲ್ಲಿ ನಡೆಯುವ ಎಲ್ಲ ಗೋಷ್ಠಿಗಳಿಗೂ, ಖಾಲಿ ಕುರ್ಚಿಗಳೇ ಸಾಕ್ಷಿ ಆಗುತ್ತಿವೆ!

Advertisement

Udayavani is now on Telegram. Click here to join our channel and stay updated with the latest news.

Next