Advertisement

“ಬಡವರಿಗೆ ಉಚಿತ ಅಕ್ಕಿ ವಿತರಿಸಿದ ಪ್ರಥಮ ರಾಜ್ಯ ಕರ್ನಾಟಕ’

11:50 AM Apr 01, 2017 | Team Udayavani |

ಮಂಗಳೂರು: ಹಸಿವು ಮುಕ್ತ ಕರ್ನಾಟಕ ಎಂಬ ಘೋಷಣೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕವು ದೇಶದಲ್ಲಿ ಉಚಿತ ಅಕ್ಕಿ ವಿತರಿಸಿದ ಪ್ರಥಮ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಶುಕ್ರವಾರ ನಗರದ ಜಿ.ಪಂ. ಸಭಾಂಗಣದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮಕ್ಕೆ ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ವಿತರಿಸುತ್ತಿದ್ದ 5 ಕೆ.ಜಿ. ಅಕ್ಕಿಯನ್ನು ಜನರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ 7 ಕೆ.ಜಿ.ಗೆ ಏರಿಸಲಾಗಿದೆ. ಆದರೆ ಕೆಲವರು ಈ ಯೋಜನೆಯ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದೀರಿ ಎಂದು ಟೀಕೆ ಮಾಡುತ್ತಿದ್ದಾರೆ.

ಅಂತಹ ಟೀಕೆಗಳಿಗೆ ಕಿವಿ ಕೊಡದೆ ದುರ್ಬಲ ವರ್ಗದವರನ್ನು ಹಂತಹಂತವಾಗಿ ಸಶಕ್ತರಾಗಿ ಮಾಡುವತ್ತ ರಾಜ್ಯ ಸರಕಾರ ಚಿಂತಿಸುತ್ತಿದೆ ಎಂದರು.

ಕಳಪೆ ಅಕ್ಕಿ ಸ್ವೀಕರಿಸದಿರಿ: ಆಹಾರ, ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಮಾತನಾಡಿ, ರಾಜ್ಯದ 4.20 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಿಸುವುದಕ್ಕಾಗಿ ಸರಕಾರ ವಾರ್ಷಿಕವಾಗಿ 3 ಸಾವಿರ ಕೋ.ರೂ. ವ್ಯಯಿಸುತ್ತಿದೆ. ಸರಕಾರ ಇಷ್ಟು ಖರ್ಚು ಮಾಡಿ ನೀಡುವ ಯೋಜನೆಯನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡಬೇಕು. ಕಳಪೆ ಅಕ್ಕಿ ವಿತರಣೆಯಾಗುತ್ತಿದ್ದರೆ ಜನರು ಅದನ್ನು ಸ್ವೀಕರಿಸದೆ ಸಂಬಂಧ
ಪಟ್ಟವರಿಗೆ ದೂರು ನೀಡಬೇಕು ಎಂದರು.

Advertisement

ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ವೇದಿಕೆಯಲ್ಲಿದ್ದರು. ಆಹಾರ ಇಲಾಖೆಯ ಉಪನಿರ್ದೇಶಕ ಎ.ಟಿ. ಜಯಪ್ಪ ಸ್ವಾಗತಿಸಿದರು.

ಯಾವುದೇ ಪ್ರದೇಶದಲ್ಲಿ ಅಕ್ಕಿ
ಬಿಪಿಎಲ್‌ ಕಾರ್ಡ್‌ ಹೊಂದಿರುವ ವ್ಯಕ್ತಿ ರಾಜ್ಯದ ಯಾವುದೇ ಪ್ರದೇಶದಲ್ಲಿ ನೆಲೆಸಿದ್ದರೂ ಆತ ನೆಲೆಸಿರುವ ಪ್ರದೇಶದಲ್ಲೇ ಉಚಿತ ಅಕ್ಕಿ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಜತೆಗೆ ಪಡಿತರ ಚೀಟಿಯಿಂದ ಹೆಸರು ತೆಗೆಯುವ ಕಾರ್ಯವೂ ಸುಲಭವಾಗಲಿದೆ. ಆರ್ಥಿಕವಾಗಿ ಸ್ಥಿತಿವಂತರು ಬಿಪಿಎಲ್‌ ಸೌಲಭ್ಯ ಪಡೆಯುತ್ತಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next