Advertisement

ವೈಟಿಪಿಎಸ್‌ ಮೊದಲ ಘಟಕ ಉತ್ಪಾದನೆಗೆ ಸಿದ್ಧ

03:45 AM Mar 09, 2017 | Team Udayavani |

ರಾಯಚೂರು: ಇಲ್ಲಿನ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ವಾಣಿಜ್ಯ ವಿದ್ಯುತ್‌ ಉತ್ಪಾದನೆಗೆ ಸಮರ್ಥವಾಗಿದೆ ಎಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ ತಿಳಿಸಿದ್ದಾರೆ.

Advertisement

ಕೇಂದ್ರದ ಮೊದಲ ಘಟಕಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರವು 1,600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದೆ.ಈಗ 800 ಮೆ.ವ್ಯಾ. ಉತ್ಪಾದಿಸಬಲ್ಲದು. ಇನ್ನಾರು ತಿಂಗಳೊಳಗೆ ಎರಡನೇ ಘಟಕವೂ ಸಿದ್ಧವಾಗಲಿದೆ. ಆಗ ಆರ್‌ಟಿಪಿಎಸ್‌ ಮತ್ತು ವೈಟಿಪಿಎಸ್‌ನಿಂದ ಜಿಲ್ಲೆಯಲ್ಲಿ ಒಟ್ಟು 3,320 ಮೆ. ವ್ಯಾ.ವಿದ್ಯುತ್‌ ಉತ್ಪಾದನೆ ಮಾಡಿದಂತಾಗುತ್ತದೆ

ಸತತ 72 ಗಂಟೆಗಳ ಕಾಲ ನಡೆಸಿದ ಪರೀಕ್ಷೆಯಲ್ಲಿ ಸಮಸ್ಯೆಯಿಲ್ಲದೆ ಘಟಕ ಕಾರ್ಯನಿರ್ವಹಿಸಿದ್ದು, 800 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸಿ ಮೈಲುಗಲ್ಲು
ನಿರ್ಮಿಸಿದೆ ಎಂದರು.ವೈಟಿಪಿಎಸ್‌ಗೆ ಭೂಮಿ ನೀಡಿದ 259 ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 142 ಅರ್ಜಿಗಳು ಬಂದಿದ್ದು, 78 ಜನರಿಗೆ ಉದ್ಯೋಗ ನೀಡಲಾಗಿದೆ. ಎರಡನೇ ಹಂತದಲ್ಲಿ 117 ಅರ್ಜಿಗಳನ್ನು ಆಹ್ವಾನಿಸಿದ್ದು, ಶೀಘ್ರ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುವುದು ಎಂದರು.

ಸಂತ್ರಸ್ತರ ಪ್ರತಿಭಟನೆ
ಕೇಂದ್ರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಭೂ ಸಂತ್ರಸ್ತ ರೈತರು ವಿದ್ಯುತ್‌ ಟವರ್‌ ಏರಿ ಪ್ರತಿಭಟಿಸಿದರು. ಸೆಕ್ಯೂರಿಟಿ ತಂಡ ಅವರ ಮನವೊಲಿಸಿ ಎಂಡಿ ಬಳಿ ಕರೆ ತಂದಿತು. ನಮಗೆ ಅನ್ಯಾಯ ಮಾಡಲಾಗುತ್ತಿದೆ. ಭೂಮಿ ಪಡೆಯುವಾಗ ಇಲ್ಲದ ನಿಯಮಗಳನ್ನು ಈಗ ಹೇಳಲಾಗುತ್ತಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಡಿಮೆ ಉಷ್ಣದಲ್ಲಿ ಹೆಚ್ಚು ವಿದ್ಯುತ್‌ ಉತ್ಪಾದಿಸಬಹುದು. ಹಳೇ ತಂತ್ರಜ್ಞಾನಕ್ಕೆ ಹೋಲಿಸಿದರೆ ಶೇ.8 ರಿಂದ 10 ಕಲ್ಲಿದ್ದಲು ಉಳಿತಾಯವಾಗಲಿದೆ.500 ಮೆ.ವ್ಯಾ. ಘಟಕದ ಸ್ಥಳದಲ್ಲಿ 800 ಮೆ.ವ್ಯಾ. ಉತ್ಪಾದಿಸಬಹುದು. ಸಂಪೂರ್ಣ ಲೋಕಾರ್ಪಣೆಗೊಂಡ ನಂತರ ಪ್ರತಿ ವರ್ಷ 60 ಕೋಟಿ ಯೂನಿಟ್‌ ವಿದ್ಯುತ್‌ ಉತ್ಪಾದಿಸಬಹುದು.
– ಜಿ.ಕುಮಾರ ನಾಯಕ ಕೆಪಿಸಿ ಎಂಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next