Advertisement

Draupadi Murmu: ರಾಷ್ಟ್ರಪತಿ ತವರಿಗೆ ಮೊದಲ ರೈಲು !

12:16 AM Oct 19, 2023 | Team Udayavani |

ಭುವನೇಶ್ವರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟೂರು ಸೇರಿದಂತೆ ಒಡಿಶಾದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆ ಮಯೂರ್‌ಭಂಜ್‌ನ 6 ಮಾರ್ಗದಲ್ಲಿ ಇನ್ನು ಮುಂದೆ ರೈಲುಗಳ ಸಂಚಾರ ಆರಂಭವಾಗಲಿದೆ. ಇತ್ತೀಚೆಗಷ್ಟೇ ಭಾರತೀಯ ರೈಲ್ವೆ ಮಯೂರ್‌ಭಂಜ್‌ಗೆ 4 ಜೊತೆ ರೈಲುಗಳನ್ನು ನಿಯೋಜಿಸಲು ಅನುಮೋದನೆ ನೀಡಿತ್ತು.

Advertisement

ಈ ಪೈಕಿ ಇದೀಗ ಮೂರು ಜೊತೆ ರೈಲುಗಳು ಕಾರ್ಯಾಚರಣೆಗೆ ಸನ್ನದ್ದಾ ಗಿವೆ. ಅದರಲ್ಲಿ ಬದಮ್‌ಪಹರ್‌- ರೌರ್‌ಕೆಲಾ – ಬದಮ್‌ಪಹರ್‌ ಮಾರ್ಗವಾಗಿ ಸಂಚರಿಸುವ 2 ರೈಲುಗಳೂ ಸೇರಿವೆ. ಇದು ಮುರ್ಮು ಅವರ ಹುಟ್ಟೂರಾಗಿದ್ದು, ಈ ತೆಹಶಿಲ್‌ಗೆ ಮಂಜೂರಾಗಿರುವ ಮೊದಲ ಪ್ಯಾಸೆಂಜರ್‌ ರೈಲು ಇದಾಗಿದೆ ಎಂದು ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next