Advertisement

3 ಏಕೀಕೃತ ಸೇನಾ ವ್ಯವಸ್ಥೆಗೆ ಅನುಮತಿ

02:08 AM Nov 26, 2020 | mahesh |

ಹೊಸದಿಲ್ಲಿ: ದೇಶದ ಸೇನಾ ವ್ಯವಸ್ಥೆಯ ನಿಯಂತ್ರಣಕ್ಕಾಗಿ ಏಕೀಕೃತ ಸೇನಾ ವ್ಯವಸ್ಥೆ (ಥಿಯೇಟರ್‌ ಕಮಾಂಡ್‌) ಸ್ಥಾಪಿಸಲು ಕೇಂದ್ರ ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಸೈನಿಕರನ್ನು ಮತ್ತು ಅವರಿಗೆ ಸಂಬಂಧಿಸಿದ ಸರಂಜಾಮುಗಳನ್ನು ಸಾಗಿಸುವ ಮೊದಲ ಮೂರು ಸರಕು ಏಕೀಕರಣ ವ್ಯವಸ್ಥೆ (ಜೆಎಲ್‌ಎನ್‌) ಗಳನ್ನು ರಚಿಸಲು ಸರಕಾರ ಹೆಜ್ಜೆ ಮುಂದಿಟ್ಟಿದೆ. ಮುಂಬಯಿ, ಗುವಾಹಟಿ, ಪೋರ್ಟ್‌ಬ್ಲೇರ್‌ಗಳಲ್ಲಿ ಅವುಗಳನ್ನು ರಚಿಸಲಾಗುತ್ತದೆ.

Advertisement

ಈ ಕೇಂದ್ರಗಳು ಸೇನೆಗೆ ಬೇಕಾಗುವ ಸಣ್ಣ ಪ್ರಮಾಣದ ಆಯುಧಗಳು, ಪಡಿತರ, ಬಟ್ಟೆ, ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗೆ ಅಗತ್ಯವಾಗಿರುವ ಬಿಡಿ ಭಾಗಗಳು ಮತ್ತು ತಾಂತ್ರಕ ವ್ಯವಸ್ಥೆ ಪೂರೈಕೆ, ಸಾಮಾನ್ಯ ಅಗತ್ಯ ಬಳಕೆ ವಸ್ತು ಗಳನ್ನು ಈ ಮೂರು ಕೇಂದ್ರಗಳು ನಿರ್ವ ಹಿಸಲಿವೆ. ಇದುವರೆಗೆ ತಾತ್ಕಾಲಿಕ ಆಧಾರದಲ್ಲಿ ಇಂಥ ವ್ಯವಸ್ಥೆಗಳು ಕಾರ್ಯನಿರ್ವಹಿ ಸುತ್ತಿದ್ದವು. ಮುಂದಿನ ದಿನಗಳಲ್ಲಿ ಈ ಮೂರು ಕೇಂದ್ರಗಳಿಂದ ಸೇನೆಯ ಮೂರು ವಿಭಾಗಗಳಿಗೆ ಬೇಕಾಗುವ ವ್ಯವಸ್ಥೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸೇನೆಯ ಮೂರು ವಿಭಾಗಗಳ ಮಹಾ ದಂಡ ನಾಯಕರಾಗಿರುವ ರಾಷ್ಟ್ರ ಪತಿ ಗಳು ಅನುಮೋದನೆ ನೀಡಿದ್ದಾರೆ.

ಇದೇ ಮಾದರಿಯ ಸರಕು ಏಕೀಕರಣ ವ್ಯವಸ್ಥೆ (ಜೆಎಲ್‌ಎನ್‌)ಗಳು ದೇಶದ ವಿವಿಧ ಭಾಗಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next