Advertisement

ಬ್ರಿಟಿಷರಿಗೆ ಸವಾಲಾದ ಪ್ರಥಮ ದೊರೆ

05:38 PM Nov 11, 2018 | |

ಹರಿಹರ: ಸತತ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಬ್ರಿಟಿಷರಿಗೆ ಸವಾಲಾದ ಮೊದಲ ಭಾರತೀಯ ದೊರೆ ಟಿಪ್ಪು ಸುಲ್ತಾನ್‌ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು. ನಗರದ ಗುರುಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಉದ್ಘಾಟಿಸಿ, ಮಾತನಾಡಿದ ಅವರು, ಟಿಪ್ಪು ಸುಲ್ತಾನ್‌ ಹದಿಮೂರು ವರ್ಷದ ಬಾಲಕನಾಗಿದ್ದಾಗಲೇ ತಂದೆಯೊಂದಿಗೆ ಹೋರಾಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಆದರೆ ನಾಲ್ಕನೆ ಯುದ್ದದಲ್ಲಿ ಮೋಸದಿಂದ ಅವನನ್ನು ಮಣಿಸಲಾಯಿತು ಎಂದರು.

Advertisement

ಟಿಪ್ಪು ಜಯಂತಿಯನ್ನು ನಾಲ್ಕು ಗೋಡೆಗಳ ಮಧ್ಯೆ, ಪೊಲೀಸ್‌ ಬಂದೋಬಸ್ತ್ನಲ್ಲಿ ಆಚರಿಸುತ್ತಿರುವುದು ನೋವಿನ ಸಂಗತಿ. ಟಿಪ್ಪು ಕರೆ-ಕಟ್ಟೆ ನಿರ್ಮಿಸಿ, ನಾಡಿನ ಅಭಿವೃದ್ಧಿಗೆ ಶ್ರಮವಹಿಸಿದ್ದನ್ನೆಲ್ಲಾ ಬದಿಗಿಟ್ಟು ಇಲ್ಲಸಲ್ಲದ ಆರೋಪ ಮಾಡಿ ಕೋಮುವಾದಿಗಳು ಜನರನ್ನು ವಿಭಜಿಸುತ್ತಿರುವುದು ದುರದೃಷ್ಟಕರ ಎಂದರು.

ಹಂಪಿ ಕನ್ನಡ ವಿವಿಯ ಡಾ|ಅರುಣ್‌ ಉಪನ್ಯಾಸ ನೀಡಿದರು. ತಾಪಂ ಉಪಾಧ್ಯಕ್ಷೆ ಜಯಮ್ಮ ಬಸವನಗೌಡ, ತಹಶೀಲ್ದಾರ್‌ ಆರ್‌. ವೆಂಕಟಮ್ಮ, ನಗರಸಭೆ ಸದಸ್ಯರಾದ ಬಿ.ಕೆ. ಸೈಯದ್‌ ರೆಹಮಾನ್‌, ಎಜಾಜ್‌ ಅಹ್ಮದ್‌, ಕೆ.ಮರಿದೇವ, ವಸಂತ ಕುಮಾರ್‌, ಎಲ್‌.ಬಿ. ಹನುಮಂತಪ್ಪ, ಎಂ.ಎಸ್‌.ಬಾಬುಲಾಲ್‌, ಸನಾವುಲ್ಲಾ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಇಒ ಕೆ.ನೀಲಗಿರಿಯಪ್ಪ, ಬಿಇಒ ಡಿ.ನರಸಿಂಹಪ್ಪ, ಸಿಪಿಐ ಐ.ಎಸ್‌. ಗುರುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next