Advertisement

ಮೊದಲ ಮಳೆ, ಸಿಡಿಲಿಗೆ ಮೂರು ಮನೆಗಳಿಗೆ ಹಾನಿ

11:51 PM May 20, 2019 | Sriram |

ಸುರತ್ಕಲ್‌: ರವಿವಾರ ರಾತ್ರಿ ಗುಡುಗು ಸಹಿತ ಮಳೆಗೆ ಸುರತ್ಕಲ್‌ ಸುತ್ತಮುತ್ತ ಎರಡು ಕಡೆಗಳಲ್ಲಿ ಅವಘಡ ಸಂಭವಿಸಿದೆ.

Advertisement

ತಡಂಬೈಲ್‌ ಬಳಿಯ ನಿವಾಸಿ ವಿ.ಆರ್‌. ಕಾಲನಿಯ ಉಷಾ ಭಾಸ್ಕರ್‌ ಅವರ ಮನೆಗೆ ತಡರಾತ್ರಿ ಗುಡುಗು ಬಡಿದು ಮನೆಗೆ ಹಾನಿಯಾಗಿದೆ. ಸಮೀಪದಲ್ಲೇ ಇದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರವೇ ಹೊತ್ತಿ ಉರಿಯಿತಲ್ಲದೆ ಸಮೀಪದಲ್ಲೇ ಇದ್ದ ಮನೆಯ ಮೇಲೆ ಬೆಂಕಿಉಂಡೆ ಬಿದ್ದಿದೆ.

ಹಾಲ್‌ನಲ್ಲಿ ಮಲಗಿದ್ದ ಕರುಣಾಕರ್‌ ಅವರಿಗೆ ಸುಟ್ಟ ಗಾಯವಾದರೆ, ಮನೆಯ ವಿದ್ಯುತ್‌ ವ್ಯವಸ್ಥೆಗೆ ಬೆಂಕಿ ಹಿಡಿದು ಹೊಗೆ ಆವರಿಸಿತು. ತತ್‌ಕ್ಷಣ ಮನೆ ಮಂದಿ ಹೊರಗೋಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.

ಸ್ಥಳಕ್ಕೆ ಕಂದಾಯ ಅಧಿಕಾರಿ ನವೀನ್‌ ಭೇಟಿ ನೀಡಿ ನಷ್ಟ ಪರಿಹಾರ ಅಂದಾಜಿಸಿದ್ದಾರೆ. ಆಪಂದಾºಂದವ ಸಂಸ್ಥೆಯ ಉಮೇಶ್‌ ದೇವಾಡಿಗ ಇಡ್ಯಾ, ಬ್ರಿಜೇಶ್‌ ಸಂತ್ರಸ್ತ ಕುಟುಂಬಕ್ಕೆ ಸಹಕರಿಸಿದರು.

ಇನ್ನೊಂದು ಅವಘಡದಲ್ಲಿ ಕಾಟಿಪಳ್ಳದ ಎರಡನೇ ಬ್ಲಾಕ್‌ ನಿವಾಸಿ, ಯುವ ಕಾಂಗ್ರೆಸ್‌ ಮುಖಂಡ ಜೈಸನ್‌ ವರ ಮನೆಗೆ ಸಮೀಪದ ಕಾಂಕ್ರಿಟ್‌ ತಡೆಗೋಡೆ ಕುಸಿದು ಬಿದ್ದು ಮನೆಯೇ ಬಿರುಕು ಬಿಟ್ಟಿದೆ. ಸುಮಾರು 15 ಲಕ್ಷ ರೂ. ಹಾನಿ ಸಂಭವಿಸಿದೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಈ ಘಟನೆ ಸಂಭವಿಸಿದ್ದು ಬೃಹತ್‌ ಸದ್ದು ಕೇಳಿ ಮನೆ ಮಂದಿ ಹೊರಗೆ ಬಂದ್ದಾರೆ. ಯಾವುದೇ ಅಪಾಯ ಉಂಟಾಗಿಲ್ಲ. ತಾತ್ಕಲಿಕವಾಗಿ ಮನೆ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

Advertisement

ಸಿಡಿಲಾರ್ಭಟಕ್ಕೆ ಬೆಚ್ಚಿದ ಜನತೆ
ರವಿವಾರ ರಾತ್ರಿ 11 ಗಂಟೆಗೆ ವೇಳೆ ಮಿಂಚು ಸಿಡಿಲ ಆರ್ಭಟ ಜೋರಾಗಿತ್ತು. ಕಣ್ಣ ಕೋರೈಸುವ ಮಿಂಚು, ಸಿಡಿಲು ಒಂದೆಡೆಯಾದರೆ ವಿದ್ಯುತ್‌ ಸ್ಥಗಿತಗೊಂಡು ಜನತೆ ಬೆವರಿಳಿಸಿಕೊಂಡು ಕುಳಿತುಕೊಳ್ಳ ಬೇಕಾಯಿತು. ಸ್ವಲ್ಪ ಹೊತ್ತಿನಲ್ಲೆ ಸುರತ್ಕಲ್‌ ಸುತ್ತಮುತ್ತ ಮಳೆಯಾಗಿ ಒಂದಿಷ್ಟು ತಂಪಿನ ಅನುಭವವಾಯಿತು.

ಇರಾ ಕೆಂಜಿಲದಲ್ಲಿ ಮನೆಗೆ ಹಾನಿ
ಉಳ್ಳಾಲ: ಇರಾ ಕೆಂಜಿಲ ಬಳಿ ಮನೆಯೊಂದಕ್ಕೆ ರವಿ ವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್‌ ಪಾರಾಗಿದ್ದಾರೆ.

ರಾಧಮ್ಮ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ಮನೆಯ ವಿದ್ಯುತ್‌ ತಂತಿಗಳು ಹಾನಿಗೀಡಾಗಿದ್ದು, ವಯರಿಂಗ್‌ ಸಂಪೂರ್ಣ ಭಸ್ಮವಾಗಿದೆ. ಮನೆಯ ಹೆಂಚು ಮತ್ತು ಗೋಡೆಗೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ರಝಾಕ್‌ ಕುಕ್ಕಾಜೆ, ಸದಸ್ಯರಾದ ತುಳಸಿ ಪೂಜಾರಿ, ಶೇಖರ ಪೂಜಾರಿ, ಸುದಾಕರ್‌ ಕೆ.ಟಿ., ಗ್ರಾಮ ಕರಣಿಕ ತೌಫೀಕ್‌, ಅಭಿವೃದ್ಧಿ ಅಧಿಕಾರಿ ನಳಿನ್‌ ಎ.ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next