Advertisement

ಮೂಲಸೌಲಭ್ಯಗಳಿಗೆ ಮೊದಲ ಆದ್ಯತೆ

05:52 AM Jun 15, 2020 | Team Udayavani |

ಗುಂಡ್ಲುಪೇಟೆ: ಕ್ಷೇತ್ರಕ್ಕೆ ಉತ್ತಮ ರಸ್ತೆ, ಚರಂಡಿ ಮತ್ತು ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ನಿರಂಜನ್‌ ಕುಮಾರ್‌ ಹೇಳಿದರು. ತಾಲೂಕಿನ ಸಂಪಿಗೆಪುರದಲ್ಲಿ ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಬ್ಬಹಳ್ಳಿ ಮುಖ್ಯರಸ್ತೆ ಸಂಪಿಗೆಪುರ ಗ್ರಾಮ ಮಾರ್ಗ ಕಲ್ಲಹಳ್ಳಿ ಮುಖ್ಯ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.

Advertisement

ಈ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಡಾಂಬ ರೀಕರಣ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ತಾಲೂಕಿನ ಚಿಕ್ಕಾಟಿ ಮತ್ತು ಚನ್ನವಡೆ ಯನಪುರ ಗ್ರಾಮದಲ್ಲಿ ತಲಾ 20 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ, ತೊರವಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌  ರಸ್ತೆ ನಿರ್ಮಾಣ, ಭೀಮನಬೀಡು ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ, ಕೆಬ್ಬೇಪುರ ಗ್ರಾಮದಲ್ಲಿ 10ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ, ಬಾಚಹಳ್ಳಿ – ಬಂಡೀ ಪುರ ರಸ್ತೆ 90 ಲಕ್ಷ ರೂ.ವೆಚ್ಚದಲ್ಲಿ, ಬಾಚಹಳ್ಳಿಯಿಂದ ಕಡಬೂರು ಮಾರ್ಗ ರಸ್ತೆ 1ಕೋಟಿ 20ಲಕ್ಷ ರೂ.ವೆಚ್ಚ ದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ತೆರಕಣಾಂಬಿಹುಂಡಿಯ ರಾಮಲಿಂಗಚೌಡೇಶ್ವರಿ ದೇವಸ್ಥಾನದ ಬಳಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು  ತಿಳಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ರಸ್ತೆಗಳನ್ನು ಶೀಘ್ರದಲ್ಲೇ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗು ವುದು ಎಂದು ಹೇಳಿದರು. ಈ ವೇಳೆ ಮಂಡಲಾಧ್ಯಕ್ಷ ಜಗದೀಶ್‌, ತಾಪಂ ಮಾಜಿ ಸದಸ್ಯ ಮಹದೇವಪ್ರಸಾದ್‌, ಮುಖಂಡರಾದ ಮಹೇಶ್‌, ಮಂಜುನಾಥ್‌,  ಪ್ರಣಯ್‌, ನಂದೀಶ್‌ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next