ಮೊನ್ನೆ ಹೀಗೆ ಸುಮ್ನೆ ಕೂತಿದ್ದೆ. ಯಾಕೋ ಬೇಜಾರಾಗ್ತಿತ್ತು. ಸರಿ, ಯಾವುದಾದರೂ ಪುಸ್ತಕ ಓದೋಣ ಅಂತ ಹಳೆಯ ಪುಸ್ತ ಕಗಳನ್ನೆಲ್ಲ ಕಪಾಟಿನಿಂದ ಹೊರ ತೆಗೆದೆ. ಆ ಪುಸ್ತಕಗಳ ಮಧ್ಯೆ ನನ್ನ ಹತ್ತನೆಯ ಕ್ಲಾಸ್‌ನ ಆಟೊಗ್ರಾಫ್ ಬುಕ್ ಕೂಡ ಇತ್ತು. ಬೇರೆ ಪುಸ್ತಕಗಳಿಗಿಂತ ಅದನ್ನೇ ಓದೋಣ ಅನ್ನಿಸ್ತು. ಆಟೊಗ್ರಾಫ್ ಬುಕ್ ತೆರೆದಂತೆ ನನ್ನ ಹೈಸ್ಕೂಲ್‌ನ ನೆನಪುಗಳೂ ಒಂದೊಂದಾಗಿ ತೆರೆದುಕೊಂಡವು.
ಹೈಸ್ಕೂಲ್‌ನ ಕೊನೆಯ ಘಟ್ಟವಾದ ಹತ್ತನೆಯ ಕ್ಲಾಸ್ ತಲುಪಿದ ಹೆಚ್ಚಿನ ವಿದ್ಯಾರ್ಥಿಗಳು ಆಟೊಗ್ರಾಫ್ ಬುಕ್ ತಂದು ಫ್ರೆಂಡ್ಸ್ ಹತ್ರ ಮೆಸೇಜ್ ಸಹಿತ ಆಟೊಗ್ರಾಫ್ ಬರೆಸಿಕೊಳ್ಳೋದು ಸಾಮಾನ್ಯ. ಅದಕ್ಕೆ ನಾವೂ ಹೊರತಾಗಿರಲಿಲ್ಲ. ನಾನು ಹತ್ತನೆಯ ಕ್ಲಾಸ್‌ನಲ್ಲಿ¨ªಾಗ ಮಧ್ಯ ವಾರ್ಷಿಕ ಪರೀಕ್ಷೆ ವೇಳೆಗೇ ಹೆಚ್ಚಿನವರ ಕೈಯಲ್ಲಿ ಆಟೊಗ್ರಾಫ್ ಪುಸ್ತಕ ಬಂದಾಗಿತ್ತು. ನನಗೂ ಒಂದು ಪುಸ್ತಕ ಬೇಕು ಅನ್ನಿಸ್ತು. ಅಮ್ಮನ ಹತ್ರ ಹಣ ಕೇಳಿ ಸೀದಾ ಅಂಗಡಿಗೆ ಹೊರಟೆ. ನಾನು ಹೋದ ಅಂಗಡೀಲಿ ಇದ್ದಿದ್ದೇ ಮೂರು ಆಟೋಗ್ರಾಫ್ ಪುಸ್ತಕ. ಮೂರೂ ಬೇರೆ ಬೇರೆ ರೀತಿಯದ್ದು. ಅದರಲ್ಲಿ ನನಗೆ ಒಂದು ಬುಕ್ ತುಂಬಾ ಹಿಡಿಸ್ತು. ಕಾರಣ, ಅದರ ಮೇಲೆ “ಫ್ರೆಂಡ್ಸ್ ಫಾರ್ ಎವರ್’ ಅಂತ ದೊಡ್ಡದಾಗಿ ಬರೆದಿತ್ತು ಮತ್ತು ಅದರಲ್ಲಿ ತುಂಬಾ ಪೇಜ್‌ಗಳಿದ್ದವು. ಅದನ್ನೇ ತಗೊಂಡೆ. ಬುಕ್ ತಗೊಂಡ್ರೆ ಅಷ್ಟೇ ಸಾಕಾ? ಅದಕ್ಕೆ ಹಚ್ಚೋಕೆ ತರಹ ತರಹದ ಸ್ಟಿಕ್ಕರ್‌ಗಳೂ ಬೇಕಲ್ವಾ? ಅದನ್ನೂ ತಗೊಂಡು ಮನೆಗೆ ಬಂದೆ.
ಮನೆಗೆ ಬಂದವಳೇ ಆ ಪುಸ್ತಕಕ್ಕೆ ಮೇಕಪ್ ಮಾಡೋಕೆ ಶುರುಮಾಡಿದೆ. ಮೊದಲ ಕೆಲಸ, ಫಸ್ಟ್ ಪೇಜ್‌ನಲ್ಲಿ ನನ್ನ ಹೆಸರನ್ನು ಸುಂದರವಾಗಿ ಬರೀಬೇಕು. ಮೊದಲಿನಿಂದಲೂ ನೋಟ್‌ಬುಕ್‌ನ ಮೊದಲ ಹಾಳೆಯ ಮೇಲೆ ಚಿತ್ತಿಲ್ಲದೆ, ಸುಂದರವಾಗಿ ಬರೆಯೋ ಖಯಾಲಿ ನಂದು. ಅಕಸ್ಮಾತ್ ಹಾಗೆ ಬರೆಯೋವಾಗ ಚಿತ್ತಾಗಿ ಬಿಟ್ರೆ, ಆ ಪೇಜ್ ಹರಿದು ಬೇರೆ ಪೇಜ್‌ನಲ್ಲಿ ಪುನಃ ಬರೀತಿ¨ªೆ. ಆದರೆ ಆಟೋಗ್ರಾಫ್ ಬುಕ್ ಹಾಗಿರಲ್ಲ. ಮೊದಲ ನಾಲ್ಕೈದು ಪುಟಗಳು ಬೇರೆ ಬೇರೆ ರೀತಿ ಇರುತ್ತೆ. ಹಾಗಾಗಿ, ತಪ್ಪಾಗದ ಹಾಗೆ ಎಚ್ಚರ ವಹಿಸಿ ಬರೀಬೇಕಿತ್ತು. ಮೊದಲು ಪೆನ್ಸಿಲ್‌ನಲ್ಲಿ ಬರೆದು, ನಂತರ ಅದನ್ನ ಶೈನಿಂಗ್ ಪೆನ್‌ನಲ್ಲಿ ತಿದ್ದಿದ್ದರಿಂದ ಅಕ್ಷರಗಳು ನನಗೆ ಬೇಕಾದಂತೆಯೇ ಮೂಡಿದವು. ತಂದಿದ್ದ ಸ್ಟಿಕರ್‌ಗಳನ್ನ ಪ್ರತಿಯೊಂದು ಪೇಜ್‌ಗೂ ಹಚ್ಚಿದೆ. ಮರುದಿನ ಶಾಲೆಗೆ ಹೋಗಿ ಫ್ರೆಂಡ್ಸ್‌ಗೆ, ಟೀಚರ್‌ಗಳಿಗೆ ಆಟೋಗ್ರಾಫ್ ಬುಕ್ ಕೊಟ್ಟೆ. ಅವರೆÇÉಾ ಪ್ರೀತಿಯಿಂದಾನೇ ಅದರಲ್ಲಿ ಬರೆದು ವಿಶ್ ಮಾಡಿದ್ರು.
ಮೊದಲ ಪೇಜ್ ನೋಡಿದಾಗ ಇಷ್ಟೆಲ್ಲ ನೆನಪಾಯ್ತು. ಮುಂದೆ ಒಂದೊಂದು ಪುಟ ತೆರೆದಾಗಲೂ, ಅದರೊಂದಿಗೆ ಮಿಳಿತವಾಗಿದ್ದ ಸಾಕಷ್ಟು ಘಟನೆಗಳು ಕಣ್ಮುಂದೆ ಬಂದವು. ಹೈಸ್ಕೂಲ್‌ನ ಮೊದಲ ದಿನ, ಹೊಸ ಗೆಳೆತಿಯರನ್ನು ಮೊದಲ ಬಾರಿ ಭೇಟಿಯಾದ ಆ ಕ್ಷಣ, ನ್ಪೋರ್ಟ್ಸ್ ಡೇ, ಸ್ಕೂಲ್ ಡೇ, ಆ ದಿನಗಳಲ್ಲಿ ಕಲರ್ ಡ್ರೆಸ್ ಹಾಕಿ ಖುಷಿ ಪಟ್ಟಿದ್ದು, ಫ್ರೆಂಡ್ಸ್ ಜೊತೆ ಹರಟೆ ಹೊಡೆದಿದ್ದು, ತರಲೆಗೆ ಜಗಳ ಆಡಿದ್ದು.. ಒಂದಾ ಎರಡಾ? ನೂರಾರು ನೆನಪುಗಳು.
ಆಟೊಗ್ರಾಫ್ ಪುಸ್ತಕ ಓದಿ ಮುಗಿಸಿ, ಒಂದು ಕ್ಷಣ ಕಣ್ಮುಚ್ಚಿಕೊಂಡರೆ ಆ ಮೂರು ವರ್ಷದ ನೆನಪುಗಳ ಸರಮಾಲೆಯೇ ಮನಸ್ಸನ್ನು ಆವರಿಸಿತು. ಹೈಸ್ಕೂಲ್ ಜೀವನವನ್ನ ಮಿಸ್ ಮಾಡ್ತಿದ್ದೀನಿ ಅನ್ನೋ ಭಾವನೆ ಮೂಡಿದಾಗ, ನನ್ನ ಬಗ್ಗೆ ನನಗೇ ನಗು ಬಂತು. ಯಾಕಂದ್ರೆ, ಹೈಸ್ಕೂಲ್‌ನಲ್ಲಿ¨ªಾಗ ನಾವು ಹೆಚ್ಚಿನವರು ಶಾಲೆ ಎಷ್ಟೊಂದು ಕಷ್ಟ, ದಿನಾ ಮಣಭಾರದ ಬ್ಯಾಗ್ ಹೊತ್ಕೊಂಡು ಶಾಲೆಗೆ ಹೋಗ್ಬೇಕು, ಎÇÉಾ ಸಬೆjಕ್ಟ್‌ನ ನೋಟ್ಸ್ ನಾವೇ ಬರೀಬೇಕು, ಪ್ರತಿದಿನ ತಪ್ಪದೇ ಕಾಪಿ ಬರಿಬೇಕು..ಅಬ್ಬಬ್ಟಾ ಎಷ್ಟೊಂದು ತಾಪತ್ರಯಗಳು? ಬೇಗ ಹೈಸ್ಕೂಲ್ ಲೈಫ್ ಮುಗೀಲಿ. ಕಾಲೇಜ್ ಆದ್ರೆ ಜಂ ಅಂತ ಕೈ ಬೀಸಿಕೊಂಡು, ಎರಡೇ ಎರಡು ಬುಕ್ ಹಿಡ್ಕೊಂಡು ಹೋಗಬಹುದು. ಆ ಲೈಫ್ ಎಷ್ಟೊಂದು ಸಖತ್ ಆಗಿರುತ್ತೆ… ಅಂತೆಲ್ಲ ಅಂದುಕೊಳ್ತಿದ್ವಿ. ಈಗ ಅದೇ ಜೀವನ ನೆನಪಾಗಿ ಬಂದು ಕಾಡುತ್ತಿದೆ. ಪ್ರತಿಯೊಂದಕ್ಕೂ ಅದರದೇ ಆದ ಮಹತ್ವ ಇರುತ್ತೆ.
ಹೈಸ್ಕೂಲ್ ಲೈಫ್ ಕೂಡ ಕಾಲೇಜಿನಂತೆಯೇ ಇದ್ದಿದ್ರೆ ಅವೆರಡರ ಮಧ್ಯೆ ವ್ಯತ್ಯಾಸಾನೇ ಇರಿ¤ರ್ಲಿಲ್ಲ. ಈ ವಿಷಯ ಹೈಸ್ಕೂಲ್‌ನಲ್ಲಿ¨ªಾ ಗಲೇ ಅರ್ಥ ಆಗಿದ್ರೆ ನಮ್ಗೆ ಅದು ಕಷ್ಟ ಅನ್ನಿಸ್ತಿರ್ಲಿಲ್ಲ. ಒಟ್ಟಿನಲ್ಲಿ ಇರೋದನ್ನ, ಇಲ್ಲದೆ ಇರೋದಕ್ಕೆ ಹೋಲಿಸಿ ದುಃಖ ಪಡೋದಕ್ಕಿಂತ ಇರುವುದನ್ನು ಇದ್ದ ಹಾಗೆ ಒಪ್ಪಿಕೊಂಡು ಬದುಕಿದ್ರೆ ಸಂತೋಷವಾಗಿರಬಹುದು.
– ಸುಶ್ಮಿತಾ ನೇರಳಕಟ್ಟೆ