Advertisement
ಹಾಲಿ ಚಾಂಪಿಯನ್ ಚೆನ್ನೈ ಎಂಟರಲ್ಲಿ 7 ಪಂದ್ಯ ಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದರೆ, ಹೈದರಾಬಾದ್ ಸತತ 3 ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಈ ಹ್ಯಾಟ್ರಿಕ್ ಸೋಲು ಮುಂಬೈ, ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಎದು ರಾಗಿತ್ತು. ಇದರಲ್ಲಿ 2 ಸೋಲು ತವರಿ ನಂಗಳದಲ್ಲೇ ಎದುರಾದದ್ದು ಸನ್‌ರೈಸರ್ ಸ್ಥಿತಿ ಬಿಗಡಾಯಿಸಿದ್ದನ್ನು ಸೂಚಿಸುತ್ತದೆ. ಹೀಗಾಗಿ, ಹೈದರಾಬಾದ್‌ಗೆ ಇದು ತವರಿನ ಪಂದ್ಯವಾದರೂ ಬಲಿಷ್ಠ ಚೆನ್ನೈಯನ್ನು ಮಣಿಸುವುದು ಸುಲಭವಲ್ಲ.
ಹೈದರಾಬಾದ್ ವಾರ್ನರ್-ಬೇರ್‌ಸ್ಟೊ ಜೋಡಿಯ ಸ್ಫೋಟಕ ಆಟವನ್ನು ಹೆಚ್ಚು ಅವ ಲಂಬಿಸಿದೆ. ಆದರೆ ಈ ಆರಂಭಿಕರ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್ ಅವಸ್ಥೆ ಏನು ಎಂಬುದಕ್ಕೆ ಡೆಲ್ಲಿ ವಿರುದ್ಧದ ಕಳೆದ ಪಂದ್ಯವೇ ಸಾಕ್ಷಿ. 16ನೇ ಓವರಿನಲ್ಲಿ 2 ವಿಕೆಟಿಗೆ 101 ರನ್ ಬಾರಿಸಿ ಗೆಲುವಿನತ್ತ ಮುಖ ಮಾಡಿದ್ದ ಹೈದರಾಬಾದ್ 116ಕ್ಕೆ ತಲಪುವಷ್ಟರಲ್ಲಿ ಆಲೌಟ್ ಆಗಿತ್ತು! ಗಾಯದ ಸಮಸ್ಯೆಯಲ್ಲೇ ಮುಳುಗಿರುವ, ಆಗಾಗ ಆಡುವ ಬಳಗಕ್ಕೆ ಬಂದು ಹೋಗುತ್ತಿರುವ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಕೈಕೊಟ್ಟಿರುವುದು ತಂಡದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಮಧ್ಯಮ ಕ್ರಮಾಂಕದ ಆಟಗಾರರಿಂದಲೂ ರನ್ ಬರುತ್ತಿಲ್ಲ. ಮನೀಷ್ ಪಾಂಡೆ (6 ಪಂದ್ಯ, 54 ರನ್), ದೀಪಕ್ ಹೂಡಾ (6 ಪಂದ್ಯ, 47 ರನ್), ಯೂಸುಫ್ ಪಠಾಣ್(6 ಪಂದ್ಯ, 32 ರನ್), ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ವಿಜಯ್ ಶಂಕರ್ ಇನ್ನೂ ಜೋಶ್ ತೋರಿಲ್ಲ.
Related Articles
Advertisement
ಚೆನ್ನೈ ಸಶಕ್ತ ತಂಡಹಿರಿಯರನ್ನೇ ಹೆಚ್ಚಾಗಿ ಹೊಂದಿರುವ ಚೆನ್ನೈ ತಂಡ ಅನುಭವಕ್ಕೆ ತಕ್ಕ ಪ್ರದರ್ಶನ ನೀಡುತ್ತಿದೆ. ಕಡಿಮೆ ರನ್ ಗಳಿಸಿದರೂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾಗುತ್ತಿದ್ದಾರೆ. ಇಮ್ರಾನ್ ತಾಹಿರ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜ ಅವರ ಸ್ಪಿನ್ನಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುವುದಂತೂ ಖಚಿತ.