ಇಬ್ಬರು ಡಿಬಾರ್ ಆಗಿದ್ದಾರೆ. ಇನ್ನು ಆರೋಗ್ಯ ಹಾಗೂ ಇತರೆ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಇದನ್ನು ಹೊರತುಪಡಿಸಿ ರಾಜ್ಯದ ಬೇರಾವ ಜಿಲ್ಲೆಯಲ್ಲೂ ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆದಿಲ್ಲ. ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ಹಾಗೆಯೇ ನಿರೀಕ್ಷಿಸಿರುವ ಪ್ರಶ್ನೆಗಳು ಬಂದಿರಲಿಲ್ಲ. ಮೊದಲ ಪರೀಕ್ಷೆ ಸುಲಭವಾಗಿದೆ. ಉಳಿದ 5 ಪರೀಕ್ಷೆ ಕೂಡ ಸುಲಭವಾಗಿ ಇರಲಿದೆ ಎಂಬ ಭಾವನೆ ಇದೆ ಎಂದು ಮಲ್ಲೇಶ್ವರದ ಪರೀಕ್ಷಾ ಕೇಂದ್ರದಿಂದ ಪರೀಕ್ಷೆ ಮುಗಿಸಿ ಹೊರಬಂದ ರಕ್ಷಾ ಪರೀಕ್ಷಾ ಅನುಭವ ಹೇಳಿಕೊಂಡರು.
Advertisement
ವಿದ್ಯಾರ್ಥಿಗಳ ಆಕ್ರೋಶ: ಗುರುವಾರ ಬೆಳಗ್ಗೆ 10.15ಕ್ಕೆ ಸರಿಯಾಗಿ ರಾಜ್ಯದ ಎಲ್ಲಾ 1004 ಕೇಂದ್ರದಲ್ಲಿ ಪರೀಕ್ಷೆ ಆರಂಭವಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ತಡವಾಗಿ ಹೋದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಅರ್ಧಗಂಟೆ ನಂತರ ಹೋದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿಲ್ಲ. ಬೆಂಗಳೂರಿನ ಕೋಲ್ಸ್‌ಪಾರ್ಕ್ ಸಮೀಪದ ಗುಡ್‌ವಿಲ್ ಪರೀಕ್ಷಾ ಕೇಂದ್ರದಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಹೋಗಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ನೊಂದ ವಿದ್ಯಾರ್ಥಿಗಳು ಮತ್ತು ಪಾಲಕ-ಪೋಷಕರು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ಮತ್ತು ಪಿಯು ಇಲಾಖೆ ಅಧಿಕಾರಿಗಳ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿ, ಭೌತಶಾಸ್ತ್ರಉ ಹಾಗೂ ಅರ್ಥಶಾಸ್ತ್ರ ಪರೀಕ್ಷೆಯನ್ನು ಪುನಃ ನಡೆಸಬೇಕು ಎಂದು ಒತ್ತಾಯಿಸಿದರು.