Advertisement

ಹಸಿವಿನ ಬೆಂಕಿ, ಬಾಣಲೆಯ ಬದುಕು…

07:21 PM Nov 22, 2019 | Lakshmi GovindaRaj |

“ಬೆಂಕಿಯಿಂದ ಬಾಣಲೆಗೆ’ ಎನ್ನುವ ಮಾತುಂಟು. ಇಲ್ಲಿ ಬಾಣಲೆ ಎದುರು ಕುಳಿತಿರುವ ಜೀವಗಳ ಒಳಗೂ ಯಾರಿಗೂ ಕಾಣದ ಬೆಂಕಿಯಿದೆ. ಅದು ಹಸಿವಿನ ಬೆಂಕಿ. ಒಂದೆಡೆ ಮಗು, ಹಸಿವಿನಿಂದ ಅಳುತ್ತಾ, ತಾಯಿಯ ಚಿತ್ತವನ್ನು ತನ್ನೆಡೆ ಸೆಳೆಯಲು ಯತ್ನಿಸುತ್ತಿದ್ದರೆ, ಮತ್ತೂಂದೆಡೆ ತಾಯಿ ಶಿಲೆಯಂತೆ ಕುಳಿತಿದ್ದಾಳೆ. ಈ ಹಸಿವು ಎಷ್ಟೊಂದು ಕ್ರೂರಿ ಎನ್ನುವುದು ಆಕೆಯ ಕಣೊಟಗಳೇ ಹೇಳುವಂತಿವೆ. ನಿಶ್ಚಿತ ನೆಲೆ ಇಲ್ಲದ ಅಲೆಮಾರಿ ಬದುಕಿಗೆ ಕೊನೆಯೆಂದು ಎಂಬ ಚಿಂತೆ ಅವಳನ್ನು ಮೂಕಿಯನ್ನಾಗಿಸಿದೆ. ಅಮ್ಮನ ಈ ಸ್ಥಿತಿಯನ್ನು ಕಾಣುತ್ತಾ, ಕೇಳುತ್ತಾ ತಾನೂ ಮೂರ್ತಿಯಂತೆ ನಿಂತಿರುವ ಇನ್ನೊಂದು ಪುಟಾಣಿಯ ಕಂಗಳಲ್ಲೂ ಅಪಾರ ಕತೆಗಳುಂಟು. ಕರುಣಾರಸದ ಈ ಚಿತ್ರ ಸೆರೆಯಾಗಿದ್ದು, ಕೊಪ್ಪಳದ ಜಾತ್ರೆಯಲ್ಲಿ.

Advertisement

* ಪ್ರಮೋದ ಸಾಗರ್‌, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next