Advertisement

ಗಗನಕ್ಕೆ ಚಿಮ್ಮಿದ ಪ್ರವಗ್ಯì ಅಗ್ನಿ ವೈಭವ

01:00 AM Feb 21, 2019 | Harsha Rao |

ವಿದ್ಯಾನಗರ: ಕೊಂಡೆವೂರಿನ ಸೋಮಯಾಗದ  ಪ್ರವಗ್ಯì ಹೋಮದ ವೇಳೆ ಯಜ್ಞ ಕುಂಡದಿಂದ ಅಗ್ನಿಯ ಜ್ವಾಲೆ ಆಕಾಶಕ್ಕೆ ಚಿಮ್ಮಿದಾಗ ಭಕ್ತಜನ ಹƒದಯ ದಲ್ಲಿ ಧನ್ಯತೆಯ ಭಾವ ಮೂಡಿತು. 

Advertisement

ಯಾಗದ ಮಹತ್ತರ ಅಂಶವೆಂದೇ ಬಿಂಬಿತವಾಗಿರುವ ಪ್ರವಗ್ಯì ಎಂಬ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದೆ.  ಒಟ್ಟು ಯಾಗ ಪ್ರಕ್ರಿಯೆಯಲ್ಲಿ 8 ಬಾರಿ ಆಚರಿಸಲ್ಪಡುವ ಈ ವಿಧಾನದಲ್ಲಿ ದಿನಕ್ಕೆ ಎರಡು ಬಾರಿಯಂತೆ ಕ್ರಮ ಅನುಸರಿಸಲಾಗುತ್ತಿದೆ. ಶೇ. 50 ಹುತ್ತದ ಮಣ್ಣು, ಶೇ. 15 ಹಂದಿ ತಿವಿದ ಮಣ್ಣು, ಶೇ.35 ಆವೆ ಮಣ್ಣಿಗೆ ಆಡಿನ ಹಾಲು, ಗರಿಕೆ, ಸೋಮಲತೆ, ಗಂಡು ಆಡಿನ ರೋಮ, ಕೃಷ್ಣ ಮƒಗದ ರೋಮ ಸೇರಿಸಿ ತಯಾರಿಸಿದ ಮೂರು ಪಾತ್ರೆಗಳು ಉಪಯೋಗಿಸಲ್ಪಡುತ್ತದೆ. ಇದನ್ನು ಮಹಾವೀರ ಪಾತ್ರೆ ಎಂದು ಕರೆಯಲಾಗುತ್ತದೆ. ಈ ಪಾತ್ರೆಯಲ್ಲಿ ವಿಶೇಷ ಕ್ರಮದಲ್ಲಿ ತಯಾರಿಸಿದ ಅಜ್ಯಗಳನ್ನು ಬಳಸಿ ನಡೆಸುವ ಯಾಗ ಪ್ರಕ್ರಿಯೆ ಪ್ರವಗ್ಯì ಎನಿಸಿಕೊಂಡಿದೆ.

ನಾಲ್ಕೂ ವೇದಗಳ ಮಂತ್ರೋಚ್ಚಾರಗಳೊಂದಿಗೆ 20ನಿಮಿಷಗಳ ಈ ವಿಧಿವಿಧಾನದಲ್ಲಿ 3ಸಲ  ನ್ಪೋಟ ಸಂಭವಿಸಿ ಅಗ್ನಿಯ ಕೆನ್ನಾಲಿಗೆ 5-6 ಅಡಿ ಎತ್ತರಕ್ಕೆ ಚಿಮ್ಮುತ್ತದೆ. ಯಾಗ ಪರಿಸರದಲ್ಲಿ ಕಟ್ಟಿದ ಗಿಡ್ಡ ತಳಿಯ ಹಸುವಿನ ಹಾಲನ್ನು ಕರೆದು ಬಳಸಲಾಗುತ್ತದೆ.. ಮಂತ್ರೋಚ್ಚಾರ ‌ ಧ್ವನಿಗಳ ಆವರ್ತಾಂಕ ಮತ್ತು ಬಳಸುವ ವಸ್ತುಗಳ ಧೂಮಪ್ರಕೃತಿಯನ್ನು ಸುಸ್ತಿತಿಯಲ್ಲಿರಿಸುತ್ತದೆ ಎಂಬುದು ಈ ಪ್ರಕ್ರಿಯೆಯ ಮೂಲಾಂಶ ಎಂದು ಯಾಗ ಪ್ರಧಾನ ‌ ವಿದ್ವಾನ್‌ ಗಣೇಶ ವಾಸುದೇವ ಜೋಗಳೇಕರ್‌ ಮಾಹಿತಿ ನೀಡಿದರು.

ಅಗ್ನಿಹೋತ್ರಿ ದಂಪತಿ  ಸಾನ್ನಿಧ್ಯ
ಸೋಮಯಾಗದ ಯಜಮಾನರಾದ ಮುಂಬಯಿ ರತ್ನಗಿರಿಯ ಅಗ್ನಿಹೋತ್ರಿಗಳಾದ ಅನಿರುದ್ದ ವಾಜಪೇಯಿ ದಂಪತಿಯ ಸಾನ್ನಿಧ್ಯ ಮಹತ್ವದ್ದಾಗಿದೆ. ಭಾರತ‌ದಲ್ಲಿ ಒಟ್ಟು 26 ಅಗ್ನಿಹೋತ್ರಿಗಳು ಮಾತ್ರವಿದ್ದು ಅವರಲ್ಲಿ ಅನಿರುದ್ದ ವಾಜಪೇಯಿ ದಂಪತಿಯೂ ಓರ್ವರು. ಕೊಂಡೆವೂರುದ ಸೋಮಯಾಗಕ್ಕೆ ಇವರೇ ಯಜಮಾನತ್ವ ವಹಿಸಿದ್ದಾರೆ. ಕಠಿಣ ವಿಧಾನಗಳ ಮೂಲಕ ಸೋಮಯಾಗದಲ್ಲಿ ಅವರು ಯಜಮಾನ್ಯತ್ವ ವಹಿಸುತ್ತಾರೆ. ಯಾಗ ಶಾಲೆಯಲ್ಲೇ ಯಾಗ ಕೊನೆಯಾಗುವ ತನಕ ಉಳಕೊಳ್ಳುವ ಅವರು ಸರಳ ಆಹಾರ ಸೇವಿಸುತ್ತಾರೆ. ದ್ರವಾಹಾರ ಸೇವನೆ ಮೊದಲಾದ ಕ್ರಮಗಳನ್ನು ಅನುಸರಿಸುತ್ತಾರೆ. ಕೊನೆಯ ಒಂದು ದಿನ(24 ಗಂಟೆ)ನಿದ್ದೆ ಮಾಡದೆ, ಆಹಾರ ಸೇವಿಸದೆ ಇವರು ವಿಧಿ ವಿಧಾನ ನಿರ್ವಹಿಸುತ್ತಾರೆ.

– ವಿದ್ಯಾಗಣೇಶ್‌ ಅಣಂಗೂರು 

Advertisement
Advertisement

Udayavani is now on Telegram. Click here to join our channel and stay updated with the latest news.

Next